ನವದೆಹಲಿ : ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್ ಎಸ್ಎಸ್) ನಾಯಕರು ಹಾಗೂ ಕಚೇರಿಯ ಮೇಲೆ ದಾಳಿ ನಡೆಸಲು ಉಗ್ರರು ಸ್ಕೆಚ್ ಹಾಕಿದ್ದಾರೆನ್ನುವ ಸ್ಪೋಟಕ ಮಾಹಿತಿಯನ್ನು ಗುಪ್ತಚರ ಇಲಾಖೆ ಹೊರಗೆಡವಿದೆ.

ಅಂತಾರಾಷ್ಟ್ರೀಯ ಉಗ್ರ ಸಂಘಟನೆಗಳು ಮಹಾರಾಷ್ಟ್ರ, ಪಂಜಾಬ್, ರಾಜಸ್ತಾನ ಮತ್ತಿತರ ಕಡೆಗಳಲ್ಲಿ ಈ ದಾಳಿ ನಡೆಸುವ ಪ್ಲಾನ್ ರೂಪಿಸಿವೆ. ಪ್ರಮುಖವಾಗಿ ಐಇಡಿ ಬಳಕೆ ಅಥವಾ ವಾಹನಕ್ಕೆ ಐಇಡಿ ಬಾಂಬ್ ಇಟ್ಟು ಸ್ಪೋಟಿಸುವುದಕ್ಕೆ ಸಂಚುಹಾಕಿವೆ.

ಜಾಗತಿಕ ಉಗ್ರ ಸಂಘಟನೆಗಳು ಆರ್ ಎಸ್ ಎಸ್ ಕಚೇರಿ, ನಾಯಕರು ಮತ್ತು ಪೊಲೀಸ್ ಠಾಣೆಗಳ ಮೇಲೆ ಮುಂಬರುವ ದಿನಗಳಲ್ಲಿ ಐಇಡಿ ಬಾಂಬ್ ಬಳಸಿ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಗುಪ್ತಚರ ವಿಭಾಗ ಎಚ್ಚರಿಕೆ ನೀಡಿದೆ.

ಉಗ್ರರ ದಾಳಿಯ ಎಚ್ಚರಿಕೆ ಹಿನ್ನೆಲೆಯಲ್ಲಿ ದೆಹಲಿ, ಪಂಜಾಬ್, ರಾಜಸ್ಥಾನ, ಉತ್ತರ ಪ್ರದೇಶ ಮತ್ತು ಅಸ್ಸಾಂನಲ್ಲಿ ಭದ್ರತಾ ಅಧಿಕಾರಿಗಳು ಭದ್ರತಾ ಮೇಲ್ವಿಚಾರಣೆ ನಡೆಸುತ್ತಿದ್ದಾರೆ ಎಂದು ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳು ತಿಳಿಸಿದ್ದಾರೆ.