ಇನ್ಮುಂದೆ ವಿಚಾರಣಾ ಕೊಠಡಿಯಲ್ಲೂ ಸಿಸಿಟಿವಿ ಕಡ್ಡಾಯ…! ಸುಪ್ರೀಂ ಮಹತ್ವದ ಆದೇಶ…!!

ನವದೆಹಲಿ: ವಿವಿಧ ಪ್ರಕರಣಗಳ ತನಿಖೆ ಹಾಗೂ ವಿಚಾರಣೆ ವೇಳೆ ಆರೋಪಿತರಿಗೆ ಹಿಂಸೆ ನೀಡಲಾಗುತ್ತೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ವಿಚಾರಣಾ ಕೊಠಡಿಗಳಲ್ಲಿ ಆಡಿಯೋ ರೆಕಾರ್ಡ್ ಸೌಲಭ್ಯಹೊಂದಿರುವ ಸಿಸಿಟಿವಿಗಳನ್ನು ಅಳವಡಿಸಬೇಕೆಂದು ಸುಪ್ರೀಂ ಕೋರ್ಟ್ ಸೂಚಿಸಿದೆ.

ದೇಶದ ಪೊಲೀಸ್, ಸಿಬಿಐ,ಎನ್ ಐಎ ,ಎನ್ ಸಿಬಿ ಸೇರಿದಂತೆ ಎಲ್ಲಾ ತನಿಖೆ ಸಂಸ್ಥೆಗಳಿಗೂ ಇದೇ ನಿಯಮ ಅನ್ವಯವಾಗಲಿದ್ದು, ಆರೋಪಿಗಳ ವಿಚಾರಣೆ ಮಾಡುವ ಕೊಠಡಿಯಲ್ಲಿ ಸಿಸಿಟಿವಿ ಹಾಗೂ ಧ್ವನಿಮುದ್ರಣಮಾಡಿಕೊಳ್ಳುವ ರೆಕಾರ್ಡಿಂಗ್ ಸಾಧನ ಅಳವಡಿಸಿ ಕೊಳ್ಳುವುದು ಕಡ್ಡಾಯ ಎಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿ  ನಾರಿಮನ್ ಪೀಠ ಹೇಳಿದೆ.

ಪೊಲೀಸ್ ಠಾಣೆಯ ಮುಖ್ಯದ್ವಾರ, ನಿರ್ಗಮನದ್ವಾರ,ಲಾಕಪ್,ಸೇರಿದಂತೆ ಎಲ್ಲೆಡೆಯೂ ಸಿಸಿಟಿವಿ ಅಳವಡಿಸಬೇಕು. ಯಾವುದೇ ಭಾಗ ಸಿಸಿಟಿವಿ ಕವರೇಜ್ ನಿಂದ ಹೊರಗುಳಿಯಬಾರದು ಎಂದು ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ಹೇಳಿದೆ.

ಈ ನಿಯಮ ದೇಶದ ಎಲ್ಲೆಡೆಯ ತನಿಖಾ ಸಂಸ್ಥೆಗಳಿಗೂ ಅನ್ವಯವಾಗಲಿದ್ದು, ಕೇಂದ್ರಾಡಳಿತ ಪ್ರದೇಶಗಳು ಈ ನಿಯಮ ಪಾಲಿಸುವಂತೆ ಸೂಚಿಸಲಾಗಿದೆ. ಕೆಲ ಪ್ರಕರಣದಲ್ಲಿ ವಿಚಾರಣೆ ಹೆಸರಿನಲ್ಲಿ ಪೊಲೀಸರು ಟಾರ್ಚರ್ ಮಾಡ್ತಾರೆ ಎಂಬ ಆರೋಪವಿದೆ. ಹಿನ್ನೆಲೆಯಲ್ಲಿ 2018 ರಲ್ಲಿ ಕೇಂದ್ರ ಸರ್ಕಾರ  ಆರೋಪಿತರಿಗೆ ಹಿಂಸೆ ನೀಡಲಾಗುತ್ತದೆಯೇ ಎಂಬುದನ್ನು ಪರಿಶೀಲಿಸಲು ಪೊಲೀಸ್ ಠಾಣೆಯಲ್ಲಿ ಸಿಸಿಟಿವಿ ಅಳವಡಿಸಲು ಸೂಚಿಸಿತ್ತು.

ಇದೀಗ ಆದೇಶಕ್ಕೆ ಇನ್ನಷ್ಟು ಅಂಶ ಸೇರ್ಪಡೆಗೊಳಿಸಿದ್ದು ನೈಟ್ ವಿಶನ್ ಹಾಗೂ ಆಡಿಯೋ ರೆಕಾರ್ಡಿಂಗ್ ಹೊಂದಿರುವ ಸಿಸಿಟಿವಿ ಅಳವಡಿಸುವಂತೆ ಹಾಗೂ ಅದರ ಪೂಟೇಜ್ ನ್ನು ಕನಿಷ್ಟ ಒಂದು ವರ್ಷದ ಅವಧಿಗೆ ಸ್ಟೋರೇಜ್ ಮಾಡಿ ಇಡೋದು ಕಡ್ಡಾಯ ಎಂದಿದೆ.

Comments are closed.