ನಿತ್ಯಭವಿಷ್ಯ : 04-12-2020

ಮೇಷರಾಶಿ
ವೃತ್ತಿರಂಗದಲ್ಲಿ ಯೋಚಿಸಿ ಹೆಜ್ಜೆಯನ್ನಿಡಿ, ಆರ್ಥಿಕ ಅನುಕೂಲಗಳು, ತಂದೆಯಿಂದ ಸಹಾಯ, ಪ್ರಯಾಣದಲ್ಲಿ ಅನುಕೂಲ, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ, ದಾನ ಧರ್ಮಗಳಿಗೆ ಅಧಿಕ ಖರ್ಚು, ವ್ಯಾಪಾರದಲ್ಲಿ ಅಧಿಕ ಧನ ಸಂಪಾದನೆ, ಬಂಧುಗಳಿಂದ ಮಾನಹಾನಿ. ಸಾಂಸಾರಿಕವಾಗಿ ನೆಮ್ಮದಿಯನ್ನು ತಂದುಕೊಡಲಿದೆ.

ವೃಷಭರಾಶಿ
ಕಾರ್ಯರಂಗದಲ್ಲಿ ನಿರೀಕ್ಷಿತ ಅಭಿವೃದ್ದಿಯಿಲ್ಲದಿದ್ದರೂ ನಿಭಾಯಿಸಿಕೊಂಡು ಹೋಗಬಹುದು, ಅನಿರೀಕ್ಷಿತವಾಗಿ ಸಾಲ ಮಾಡುವಿರಿ, ಸ್ತ್ರೀಯರಿಂದ ಮಾನ ಅಪಮಾನಗಳು, ಗೌರವಕ್ಕೆ ಧಕ್ಕೆ ಆರೋಗ್ಯದಲ್ಲಿ ವ್ಯತ್ಯಾಸ ಮಿತ್ರರಿಂದ ಸಹೋದರನಿಂದ ನಷ್ಟ ಕೆಲಸಗಾರರು ಸೇವಕರು ದೊರೆಯುವರು. ಬಂಧು ಬಾಂಧವರಿಂದ ಧನಸಹಾಯ ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಸ್ಪಷ್ಟ ನಿರ್ಧಾರದಿಂದ ಅಡಚಣೆ ಕಡಿಮೆಯಾಗುತ್ತದೆ.

ಮಿಥುನರಾಶಿ
ಅನಗತ್ಯ ವಿಚಾರಗಳಿಂದ ದೂರವಿದ್ದಷ್ಟು ಉತ್ತಮ, ವ್ಯಾಪಾರ, ವ್ಯವಹಾರಗಳಲ್ಲಿ ನಿಮ್ಮ ಲೆಕ್ಕಾಚಾರ ಸರಿ ಹೋಗಲಿದೆ, ಶುಭಕಾರ್ಯಗಳ ಆಲೋಚನೆ ಮಕ್ಕಳ ಭವಿಷ್ಯದ ಚಿಂತೆ ವ್ಯಾಪಾರ ವ್ಯವಹಾರ ತಯಾರಿ ಮುನ್ಸೂಚನೆ ವಿದ್ಯಾಭ್ಯಾಸದಲ್ಲಿ ಆಸಕ್ತಿ ಕಾರ್ಯಜಯ ಉದ್ಯೋಗ ಪ್ರಗತಿ, ನಿಮ್ಮ ಮನೋ ಕಾಮನೆಗಳು ಈಡೇರಲಿದೆ.

ಕಟಕರಾಶಿ
ವ್ಯಪಾರ, ವ್ಯವಹಾರವನ್ನು ಮಾಡುವಾಗ ಎಚ್ಚರಿಕೆಯಿಂದ ಹೆಜ್ಜೆಯನ್ನಿಡಿ, ಅನಾರೋಗ್ಯ ಸ್ಥಿರಾಸ್ತಿ ಮತ್ತು ವಾಹನದ ಮೇಲೆ ಸಾಲ ಮಾಡುವ ಚಿಂತನೆ, ತಾಯಿಂದ ಅನುಕೂಲ, ಆಸ್ತಿ ಸಮಸ್ಯೆಗಳು ಬಗೆಹರಿಯುವುದು, ಹಿರಿಯರ ಮಧ್ಯಸ್ಥಿಕೆಯಿಂದ ಸಮಸ್ಯೆ ಪರಿಹಾರ.

ಸಿಂಹರಾಶಿ
ಸ್ಪಷ್ಟ ನಿರ್ಧಾರದಿಂದ ವೃತ್ತಿರಂಗದಲ್ಲಿ ಯಶಸ್ಸು, ಆರ್ಥಿಕ ಸ್ಥಿತಿಯಲ್ಲಿ ಪ್ರಗತಿ, ಮಕ್ಕಳಲ್ಲಿ ಪ್ರಗತಿ ನೆರೆಹೊರೆಯವರಿಂದ ಬಂಧುಗಳಿಂದ ಸಹಕಾರ ಪ್ರಯಾಣದಲ್ಲಿ ಅಡೆತಡೆಗಳು ಸ್ನೇಹಿತರಿಂದ ಸಹಾಯ ದುಃಸ್ವಪ್ನಗಳು ಉದ್ಯೋಗ ಬದಲಾವಣೆ ಯೋಜನೆ, ಸಮಸ್ಯೆಗಳು ಎದುರಾದರೂ ನಿಭಾಯಿಸಿಕೊಂಡು ಹೋಗಿ.

ಕನ್ಯಾರಾಶಿ
ಮಾತಿನಿಂದ ಕುಟುಂಬದಿಂದ ಭಾದೆ, ನಿಮ್ಮ ನಿರ್ಧಾರಗಳು ವೃತ್ತಿರಂಗದಲ್ಲಿ ಗೆಲುವನ್ನು ತಂದುಕೊಡಲಿದೆ, ಉದ್ಯೋಗ ಸಮಸ್ಯೆಗಳಿಗೆ ಮುಕ್ತಿ, ಶುಭಕಾರ್ಯ ತಯಾರಿ ಯೋಚನೆ, ವಸ್ತು ವಾಹನ ಖರೀದಿಯ ಸಮಯ ಮುಂದೂಡುವಿರಿ, ಸ್ವಯಂಕೃತಾಪರಾಧದಿಂದ ಮಹಿಳೆಯರಿಂದ ನಿಂದನೆ, ವೈಯಕ್ತಿಕ ಜೀವನದತ್ತ ಗಮನಹರಿಸಿ.

ತುಲಾರಾಶಿ
ಋಣಾತ್ಮಕ ಚಿಂತೆಗಳು ನಿಮ್ಮನ್ನು ಕಾಡಲಿದೆ, ಸ್ಪಷ್ಟ ನಿರ್ಧಾರಗಳನ್ನು ಕೈಗೊಳ್ಳಿ, ಸಾಲ ಭಾದೆ, ಸ್ವಯಂಕೃತಾಪರಾಧದಿಂದ ವ್ಯಾಪಾರ ವ್ಯವಹಾರದಲ್ಲಿ ನಷ್ಟ. ತಂದೆಯಿಂದ ಅಪವಾದ ಪ್ರಯಾಣದಲ್ಲಿ ಮೋಸ ಬಂಧುಗಳ ಆಗಮನ.

ವೃಶ್ಚಿಕರಾಶಿ
ಧನ ನಷ್ಟ, ಜಿಪುಣತನ ಪ್ರದರ್ಶನ, ಅದೃಷ್ಟ ಕೈ ತಪ್ಪುವುದು, ದೂರ ಪ್ರದೇಶದಿಂದ ಧನಾಗಮನ, ಮಕ್ಕಳಿಗಾಗಿ ಅಧಿಕ ಖರ್ಚು, ಸ್ಥಿರಾಸ್ತಿ ವಾಹನಕ್ಕಾಗಿ ನಷ್ಟ, ಸೋಲು ನಷ್ಟ, ನಿರಾಸೆಯಿಂದ ಭವಿಷ್ಯ ಮಂಕು, ದುಷ್ಟ ವ್ಯಕ್ತಿಗಳ ಸಹವಾಸ.

ಧನಸ್ಸುರಾಶಿ
ಮನಸಿನಾಳದ ಬಯಕೆಗಳು ಸದ್ಯದಲ್ಲಿಯೇ ಪ್ರಕಟವಾಗಲಿದೆ, ವಾದ ವಿವಾದಗಳಲ್ಲಿ ಸಿಲುಕದಂತೆ ಎಚ್ಚರವಹಿಸಿ, ಮಿತ್ರರಿಂದ ಆರ್ಥಿಕ ಲಾಭ ಪಾಲುದಾರಿಕೆಯಲ್ಲಿ ಅನುಕೂಲ, ಸ್ನೇಹಿತರಿಂದ ಸಂಕಷ್ಟ, ಉದ್ಯೋಗ ಬದಲಾವಣೆಯಿಂದ ತೊಂದರೆ, ಸಂಗಾತಿಯಿಂದ ನೆರವು, ಶುಭಕಾರ್ಯಗಳ ಚರ್ಚೆ, ದುಷ್ಟ ಆಲೋಚನೆಗಳು ಆರೋಗ್ಯ ಸಮಸ್ಯೆ.

ಮಕರರಾಶಿ
ವೃತ್ತಿರಂಗದಲ್ಲಿ ಜವಾಬ್ದಾರಿಯ ದುಡಿಮೆಯಿಂದ ಅಧಿಕಕ ಲಾಭ, ಪ್ರೀತಿ-ಪ್ರೇಮದ ಆಯ್ಕೆಯಲ್ಲಿ ತಪ್ಪು ನಿರ್ಧಾರ, ಮಾನಸಿಕವಾಗಿ ದೈವ ಚಿಂತನೆ, ಸಂಗಾತಿಯಿಂದ ನಷ್ಟ, ಉದ್ಯೋಗ ಕಳೆದುಕೊಳ್ಳುವ ಭೀತಿ, ಉದ್ಯೋಗ ಸ್ಥಳದಲ್ಲಿ ಗೌರವಕ್ಕೆ ಧಕ್ಕೆ, ಉದ್ಯೋಗ ಕಾರಣ ಅಥವಾ ಆರ್ಥಿಕ ಸಹಾಯಕ್ಕಾಗಿ ಪ್ರಯಾಣ.

ಕುಂಭರಾಶಿ
ತಂದೆಯಿಂದ ಆರ್ಥಿಕ ಸಹಾಯ, ಹೊಸತನ ಕಾರ್ಯಸಾಧನೆಗೆ ಅನುಕೂಲವಾಗಲಿದೆ, ಉದ್ಯೋಗ ಮತ್ತು ಸ್ಥಳ ಬದಲಾವಣೆಯಿಂದ ಅನುಕೂಲ, ಮಿತ್ರರಿಂದ ಉತ್ತಮ ಅವಕಾಶಗಳು, ಆರ್ಥಿಕ ಸಮಸ್ಯೆ ಬಗೆಹರಿಯುವ ಸೂಚನೆ, ಕುಟುಂಬದಲ್ಲಿ ನೆಮ್ಮದಿಯ ವಾತಾವರಣ ಆಹಾರ ವ್ಯತ್ಯಾಸದಿಂದ ಅನಾರೋಗ್ಯ.

ಮೀನರಾಶಿ
ಅನಿರೀಕ್ಷಿತವಾಗಿ ಬಂದಂತಹ ಅವಕಾಶಗಳು ಕೈ ತಪ್ಪುವುದು, ಮನೆಯವರ ಮಾತಿಗೆ ಹೆಚ್ಚಿನ ಬೆಲೆ ನೀಡುವುದು ಉತ್ತಮ, ಉದ್ಯೋಗದಲ್ಲಿ ಒತ್ತಡಗಳು, ಸಂಗಾತಿಯಿಂದ ಕಿರಿಕಿರಿ ಮತ್ತು ಬೇಸರ, ತಾಯಿಯೊಂದಿಗೆ ವಾಗ್ವಾದ, ಮಂಗಲ ಕಾರ್ಯಕ್ಕಾಗಿ ಹಲವು ಚಿಂತನೆಗಳು ಕಂಡು ಬಂದೀತು, ವಿದ್ಯಾಭ್ಯಾಸದಲ್ಲಿ ಅನುಕೂಲ ಅನಿರೀಕ್ಷಿತ ಧನಸಂಪತ್ತು, ದಿನಾಂತ್ಯಕ್ಕೆ ಶುಭಫಲ ಕೇಳುವಿರಿ.

Comments are closed.