ಮಂಗಳೂರು : ಕೊರೊನ ವೈರಸ್ ಎಫೆಕ್ಟ್ ನಿಂದಾಗಿ ವರ ಕ್ರೂಝ್ ನಲ್ಲಿ ದಿಗ್ಬಂಧನಕ್ಕೊಳಾಗಿದ್ದಾನೆ. ಹೀಗಾಗಿ ಫೆಬ್ರವರಿ 10 ರಂದು ನಿಗದಿಯಾಗಿದ್ದ ಮದುವೆಯನ್ನು ಮುಂದೂಡಿರೋ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಕುಂಪಲದಲ್ಲಿ ನಡೆದಿದೆ. ಕುಂಪಲ ನಿವಾಸಿಯಾಗಿರೋ ಗೌರವ್ ಸ್ಟಾರ್ ಕ್ರೂಝ್ ಅನ್ನೋ ಪ್ರವಾಸಿ ಹಡಗಿನಲ್ಲಿ ಕೆಲಸ ನಿರ್ವಹಿಸುತ್ತಿದ್ದ. ಫೆಬ್ರವರಿ 10 ರಂದು ಗೌರವ್ ವಿವಾಹ ನಿಗದಿಯಾಗಿತ್ತು. ಹೀಗಾಗಿ ಫೆಬ್ರವರಿ 4 ರಂದು ಗೌರವ್ ಮನೆಗೆ ಬರಬೇಕಾಗಿತ್ತು.

ಆದರೆ ಹಾಂಕಾಂಗ್, ಸಿಂಗಾಪುರ, ಥೈವಾನ್ ನಡುವೆ ಸಂಚರಿಸುವ ಕ್ರೂಝ್ ನಲ್ಲಿ ಸುಮಾರು 1,700 ಮಂದಿ ಪ್ರಯಾಣಿಕರಿದ್ದಾರೆ. ಈ ಪೈಕಿ ಹಲವರಿಗೆ ಕೊರೊನಾ ವೈರಸ್ ತಗುಲಿರೋ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಕ್ರೂಝ್ ನ್ನು ತಟಕ್ಕೆ ತರಲು ನಿರ್ಬಂಧ ಹೇರಲಾಗಿದೆ. ಹೀಗಾಗಿ ಗೌರವ್ ಇರೋ ಕ್ರೂಝ್ ಸಮುದ್ರದಲ್ಲಿಯೇ ದಿಗ್ಬಂಧನಕ್ಕೆ ಒಳಗಾಗಿದೆ. ಇತ್ತ ಗೌರವ್ ಮನೆಗೆ ಬಾರದೆ ಮನೆಯವರಿಗೆ ಆತಂಕ ಮೂಡಿಸಿದೆ.