ಒಡಿಶಾ : ರೆವಿನ್ಯೂ ಇನ್ಸ್ಪೆಕ್ಟರ್ ಒಬ್ಬರು ತಮ್ಮ ಕಚೇರಿಯಲ್ಲಿ ಮಹಿಳೆಯೊಬ್ಬರ ಜೊತೆ ಸರಸವಾಡಿದ ಘಟನೆ ಒಡಿಶಾದ ಗಾಡಸಿಲಾ ಪಟ್ಟಣದ ಉಸ್ತುವಾರಿ ಪಟ್ಟಣದ ಉಸ್ತುವಾರಿ, ಧೆಂಕನಲ್ ಜಿಲ್ಲೆಯಲ್ಲಿ ನಡೆದಿದೆ. ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರಂಜನ್ ಪಾಣಿಗ್ರಹಿ ರಾಸಲೀಲೆ ನಡೆಸಿದ ಅಧಿಕಾರಿ ಯಾಗಿದ್ದಾರೆ. ಹೆಚ್ಚುವರಿ ರೆವಿನ್ಯೂ ಇನ್ಸ್ಪೆಕ್ಟರ್ ಆಗಿದ್ದ ಪಾಣಿಗ್ರಹಿ ಅವರನ್ನು ಕೆಲವು ತಿಂಗಳ ಹಿಂದೆ ಗಾಡಸಿಲಾ ಸರ್ಕಲ್ ಕಚೇರಿಯ ಉಸ್ತುವರಿಯಾಗಿ ನೇಮಕ ಮಾಡಲಾಗಿತ್ತು. ಇದೀಗ ವೈರಲ್ ಆಗಿರುವ ಅವರ ವಿಡಿಯೋದಲ್ಲಿ, ಪಾಣಿಗ್ರಹಿ ಅವರ ಕಚೇರಿಯಲ್ಲಿ ಖಾಲಿ ಮದ್ಯದ ಬಾಟೆಲ್ಗಳಿದ್ದು, ಹೊರಗಿನವರು ಸಹ ಕಚೇರಿಯಲ್ಲಿ ಮಲಗಿರುವ ದೃಶ್ಯವಿದೆ. ಅಲ್ಲದೇ ಮಹಿಳೆಯೊಬ್ಬಳ ಜೊತೆಗೆ ಕಚೇರಿಯಲ್ಲಿಯೇ ರಾಸಲೀಲೆ ನಡೆಸಿರುವ ದೃಶ್ಯವು ಸೆರೆಯಾಗಿದೆ.
ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಧೆಂಕನಕಲ್ ಜಿಲ್ಲಾಧಿಕಾರಿ ಭೂಮೇಶ್ ಚಂದ್ರ ಬೆಹೆರಾ ಅವರು 6 ತಿಂಗಳ ಕಾಲ ಅಮಾನತು ಮಾಡ ಆದೇಶ ಹೊರಡಿಸಿದ್ದಾರೆ. ಅಲ್ಲದೆ, ಘಟನೆ ಸಂಬಂಧ ತನಿಖೆ ನಡೆಸಿ ವರದಿ ನೀಡುವಂತೆ ಒಡಪಾದ ತಹಸೀಲ್ದಾರ್ ಅವರಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ. ತನಿಖಾ ವರದಿ ಬಂದ ಬಳಿಕ ವರದಿ ಆಧರಿಸಿ ಮತ್ತೊಮ್ಮೆ ಕ್ರಮ ಜರುಗಿಸುವುದಾಗಿ ತಿಳಿಸಿದ್ದಾರೆ.