ನಟಿ ಸಂಜನಾ ಗಲ್ರಾನಿ ತಂಗಿಗೆ ವಂಚನೆ…! ಪೊಲೀಸ್ ಠಾಣೆ ಮೆಟ್ಟಿಲೇರಿದ ನಿಕ್ಕಿ ಗಲ್ರಾನಿ…!!

ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿದ್ದ ನಟಿ ಸಂಜನಾ ಗಲ್ರಾನಿ  ಸಹೋದರಿ ನಟಿ ನಿಕ್ಕಿ ಗಲ್ರಾನಿಗೆ ಬರೋಬ್ಬರಿ 50 ಲಕ್ಷ ರೂಪಾಯಿ ವಂಚನೆಯಾಗಿದೆ ಎನ್ನಲಾಗಿದೆ.

ಈ ಸಂಬಂಧ ಸಂಜನಾ ಸಹೋದರಿ ನಿಕ್ಕಿ ಗಲ್ರಾನಿ ಅಮೃತಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ.

ನಟಿ ನಿಕ್ಕಿ ಗಲ್ರಾನಿ 2016 ರಲ್ಲಿ ಸ್ನೇಹಿತ  ಹಲಸೂರಿನ ನಿಖಿಲ್ ಹೆಗ್ಡೆ ರೆಸ್ಟೊರೆಂಟ್ ವೊಂದನ್ನು ನಡೆಸಲು 50 ಲಕ್ಷ ರೂಪಾಯಿ ನೀಡಿದ್ದರು ಎನ್ನಲಾಗಿದೆ.

ಪ್ರತಿ ತಿಂಗಳು 1 ಲಕ್ಷ ರೂಪಾಯಿ ನೀಡುವ ಭರವಸೆಯೊಂದಿಗೆ ಹಣ ನೀಡಲಾಗಿತ್ತು. ಆದರೆ ನಿಖಿಲ್ ಹಣ ನೀಡದೆ ವಂಚಿಸಿದ್ದಾನೆ ಎಂದು ನಿಕ್ಕಿ ಆರೋಪಿಸಿದ್ದಾನೆ.

50 ಲಕ್ಷ ರೂಪಾಯಿಯನ್ನು ಹಿಂತಿರುಗಿಸಿಲ್ಲ. ತಿಂಗಳಿಗೆ ನೀಡುತ್ತೇನೆ ಎಂದಿದ್ದ 1 ಲಕ್ಷ ರೂಪಾಯಿ ಹಣವನ್ನು ನೀಡಿಲ್ಲ. ಹಣ ಹಿಂತಿರುಗಿಸುವಂತೆ ಕೇಳಿದರೆ ಸ್ಪಂದಿಸುತ್ತಿಲ್ಲ ಎಂದು ದೂರಿನಲ್ಲಿ ನಿಕ್ಕಿ ಆರೋಪಿಸಿದ್ದಾರೆ.

ಅಮೃತಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ನಿಖಿಲ್ ಹೆಗ್ಡೆ ವಶಕ್ಕೆ ಪಡೆದು ವಿಚಾರಣೆ ನಡೆಸಿದ ಬಳಿಕ ಸತ್ಯಾಸತ್ಯತೆ ಬೆಳಕಿಗೆ ಬರಬೇಕಿದೆ.

Comments are closed.