ಭಾನುವಾರ, ಏಪ್ರಿಲ್ 27, 2025
HomeBreaking25 ಕೋಟಿ ರೂಪಾಯಿ ಕಾರಿಗೆ 50 ಕೋಟಿಯ ನಂಬರ್ ಪ್ಲೇಟ್... !! ಜನ...

25 ಕೋಟಿ ರೂಪಾಯಿ ಕಾರಿಗೆ 50 ಕೋಟಿಯ ನಂಬರ್ ಪ್ಲೇಟ್… !! ಜನ ಮರುಳೋ ಜಾತ್ರೆ ಮರುಳೋ…!!

- Advertisement -

ದುಬೈ: ಕೆಲವರಿಗೆ ಕಾರು-ಬೈಕ್ ಬಳಕೆಯ ವಾಹನ ಮಾತ್ರವಲ್ಲ ಅದೊಂದು ತರ ಕ್ರೇಜ್ ಹಾಗೂ ಘನತೆಯ ವಸ್ತು. ಇಲ್ಲೊಬ್ಬ ವ್ಯಕ್ತಿಯೂ ಕೂಡ ತನ್ನ ಕ್ರೇಜ್ ಗಾಗಿ 25 ಕೋಟಿ ಕಾರು ಖರೀದಿಸಿದ್ದು, ಅದರ ರಜಿಸ್ಟ್ರೇಶನ್ ನಂಬರ್ ಗಾಗಿ ಬರೋಬ್ಬರಿ 50 ಕೋಟಿ ಖರ್ಚು ಮಾಡಿ ಸುದ್ದಿಯಾಗಿದ್ದಾನೆ.

ದುಬೈನ ಉದ್ಯಮಿಯೊಬ್ಬ ತನ್ನ ಐಷಾರಾಮಿ ಬದುಕಿಗಾಗಿ ಆತ 25 ಕೋಟಿ ರೂಪಾಯಿ ವ್ಯಯಿಸಿ ವಿಶ್ವದ ಅತಿ ದುಬಾರಿ ಬುಗಾಟಿ ಚಿರೋನ್ ಕಾರು ಖರೀದಿಸಿದ. ಇಷ್ಟೆಲ್ಲ ಖರ್ಚು ಮಾಡಿ ಕಾರು ಕೊಂಡ‌ ಮೇಲೆ ಅದನ್ನು ರಿಜಿಸ್ಟರ್ ಮಾಡಿ ನಂಬರ್ ಪ್ಲೇಟ್ ಪಡಿಬೇಕಲ್ಲ. ಅದರಲ್ಲೂ ಆತನಿಗೆ ತನ್ನ ಇಷ್ಟದ ನಂಬರ್ರೇ ಬೇಕೆಂಬ ಹಟವಿತ್ತು.

ಆದರೆ ಏನು ಮಾಡ್ತಿರಾ ಈ ಉದ್ಯಮಿಯಂತೆ ಅದೇ ನಂಬರ್ ಗಾಗಿ ಪ್ರಯತ್ನಿಸುತ್ತಿದ್ದವರ ಸಂಖ್ಯೆ ದೊಡ್ಡದಾಗಿತ್ತು. ಹೀಗಾಗಿ ಸಮಸ್ಯೆಯೇ ಬೇಡ ಎಂದು ಕೊಂಡ ದುಬೈ ಪೊಲೀಸರು ಆ ವಿಶಿಷ್ಟ ನಂಬರ್ ಗಾಗಿ ಬಿಡ್ಡಿಂಗ್ ಏರ್ಪಡಿಸಿದ್ದರು.

ಬರೋಬ್ಬರಿ 50 ಕೋಟಿರೂಪಾಯಿಯವರೆಗೆ ನಡೆದ ಬಿಡ್ಡಿಂಗ್ ನಲ್ಲಿ ಕೊನೆಗೂ ಪಟ್ಟು ಬಿಡದ ಆ ಉದ್ಯಮಿ 50 ಕೋಟಿಗೆ ಬಿಡ್ ಮಾಡಿ ತನ್ನಿಷ್ಟದ ನಂಬರ್ ಪಡೆದುಕೊಂಡು ಕಾರಿಗೆ ಅಳವಡಿಸಿದ್ದಾನೆ.

ಇಷ್ಟಕ್ಕೂ ಆತ 50 ಕೋಟಿ ಖರ್ಚು ಮಾಡಿ ಪಡೆದ ನಂಬರ್ ಯಾವುದು ಗೊತ್ತಾ 9. 9 ಅನ್ನೋ ನಂಬರ್ ಪಡೆಯೋಕೆ ಆತ ಕಾರಿನ ಬೆಲೆಯ ಡಬ್ಬಲ್ ಖರ್ಚು ಮಾಡಿದ್ದ.

ಇನ್ನೊಂದು ಇಂಟ್ರಸ್ಟಿಂಗ್ ವಿಚಾರ ಅಂದ್ರೇ ಬಿಡ್ಡಿಂಗ್ ನಲ್ಲಿ 100 ಕೋಟಿವರೆಗೂ ಬಿಡ್ ಮಾಡಿಯಾದ್ರೂ ಆ ನಂಬರ್ ಪ್ಲೇಟ್ ಪಡೆಯಲೇ ಬೇಕು ಅನ್ನೋ ಹಟ ಆತನದ್ದಾಗಿತ್ತಂತೆ.

ಅಲ್ಲಿಗೆ ವಿಶ್ವದ ದುಬಾರಿ ಕಾರಿಗೆ 25 ಕೋಟಿ ಹಾಗೂ ಅದರ ನಂಬರ್ ಪ್ಲೇಟ್ ಗಾಗಿ 50 ಕೋಟಿ, ಒಟ್ಟು 75 ಕೋಟಿ ಖರ್ಚು ಮಾಡಿದಂತಾಗಿದ್ದು, ಉದ್ಯಮಿಯ ಶೋಕಿ ವಿಶ್ವದ ಗಮನ ಸೆಳೆದಿದೆ.

ವಿಶ್ವದ ಅತಿ ವೇಗವಾಗಿ ಚಲಿಸುವ ಹಾಗೂ ವಿಶ್ವದ ದುಬಾರಿ ಕಾರು ಎಂಬ ಎರಡೂ ಹೆಗ್ಗಳಿಕೆಯನ್ನು ಪಡೆದ ಈ ಬುಗಾಟಿ ಚಿರೋನ್ ಕಾರಿಗೆ ಈಗ Number-9 ನೋಂದಣಿ ಸಂಖ್ಯೆಯ ನಂಬರ್ ಪ್ಲೇಟ್ ಅಳವಡಿಸಿರುವ ಉದ್ಯಮಿ ಆ ಪೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾನೆ.


ವಿಶ್ವದ ಹಲವು ಶ್ರೀಮಂತರ ಪಾರ್ಕಿಂಗ್ ಸೇರಿರುವ ಈ ಬುಗಾಟಿ ಚಿರೋನ್ ಕಾರು, ಗಂಟೆಗೆ 490 ಕಿಲೋಮೀಟರ್ ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ.

RELATED ARTICLES

Most Popular