ಸೈಕೋ ಸುಂದರಿಗೆ ಕೈತುಂಬ ಆಫರ್….! ಕೊರೋನಾ ಎಫೆಕ್ಟ್ ಮುಗಿದರೇ ಸಾಕು ಅಂತಿದ್ದಾರೆ ಟಗರು ಬೆಡಗಿ..!!

ಟಗರು ಚಿತ್ರದ ವಿಭಿನ್ನ‌ ಪಾತ್ರದ ಮೂಲಕ ಚಂದನವನಕ್ಕೆ ಕಮ್‌ಬ್ಯಾಕ್‌ ಮಾಡಿರುವ ಅಪ್ಪಟ ಮಲೆನಾಡಿನ ಬೋಲ್ಡ್ ಬೆಡಗಿ ಅನಿತಾ ಭಟ್ ಸಧ್ಯ ಕೊರೋನಾ ಎಫೆಕ್ಟ್ ಮುಗಿದರೇ ಸಾಕಪ್ಪ ಅಂತ ಕಾಯ್ತಿದ್ದಾರೆ.

ಟಗರು ಬಳಿಕ ಸಾಲು -ಸಾಲು ಚಿತ್ರದಲ್ಲಿ ಬ್ಯುಸಿಯಾಗಿರುವ ಅನಿತಾ ಭಟ್, ಬೆಂಗಳೂರು-69ಚಿತ್ರದ ಶೂಟಿಂಗ್ ಬಹುತೇಕ ಮುಗಿಸಿದ್ದು, ಚಿತ್ರ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.

ಇದರೊಂದಿಗೆ ಅನಿತಾ ಭಟ್, ಸದ್ಗುಣ ಸಂಪನ್ನ ಮಾಧವ 100% ಹಾಗೂ ಕಲಿವೀರ,ಕನ್ನೇರಿ ಚಿತ್ರದಲ್ಲೂ ನಟಿಸಲು ಸೈ ಎಂದಿದ್ದಾರೆ.

2018 ರಲ್ಲಿ ಡೇಸ್ ಆಪ್ ಬೋರಾಪುರ್ ಹಾಗೂ ಟಗರು ಸಿನಿಮಾದಲ್ಲಿ ನಟಿಸಿದ್ದ ಅನಿತಾ ಭಟ್ ಗೆ ಎರಡು ಚಿತ್ರಗಳು ಖುಷಿ ಕೊಟ್ಟಿದೆಯಂತೆ.

ಅದರಲ್ಲೂ ಡಾಲಿ ಪ್ರೇಯಸಿ ಯಾಗಿ ಟಗರುದಲ್ಲಿನ ಪಾತ್ರ ನಟಿಸುವಾಗ ಏನು ಸ್ಪೆಶಲ್ ಅನ್ನಿಸದೇ ಇದ್ದರೂ ಚಿತ್ರ ರಿಲೀಸ್ ಆದ ಮೇಲೆ‌ ಜನರು ಮೆಚ್ಚಿಕೊಂಡು ಕಮೆಂಟ್ ಮಾಡಿದ್ದು ಖುಷಿ ತಂದಿದೆಯಂತೆ.

ಬೆಂಗಳೂರು 69, ಥ್ರಿಲ್ಲರ್ ಸಿನಿಮಾ ಆಗಿದ್ದು, ತೆಲುಗು ಖಡ್ಗಂನ ನಾಯಕ‌ ನಟ ಶಫಿ ಜೊತೆ ಅನಿತಾ ತೆರೆ ಹಂಚಿಕೊಂಡಿದ್ದಾರೆ.

ಇನ್ನೂ ಸದ್ಗುಣ ಸಂಪನ್ನ ಮಾಧವ 100% ಚಿತ್ರದಲ್ಲಿ ಅನಿತಾ ಭಟ್ ಕಾಟನ ಸ್ಮಿತಾ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.

ಹಿಂದೆಂದಿಗಿಂತಲೂ ಭಿನ್ನವಾಗಿ ಕಲಿವೀರದಲ್ಲಿ ಅನಿತಾ ಗನ್ ಹಿಡಿದು ನೆಗೆಟಿವ್ ರೋಲ್ ನಲ್ಲಿ ನಟಿಸಿದ್ದು ಸಾಕಷ್ಟು ನೀರಿಕ್ಷೆ ಮೂಡಿಸಿದೆಯಂತೆ.‌

ನಟನೆಯ ಜೊತೆ ಫಿಟನೆಸ್ ಕೋಚ್, ಯೋಗ ಥೆರಪಿಸ್ಟ್ ಹಾಗೂ ಪ್ರೊಡಕ್ಷನ್ ಹೌಸ್ ಕೂಡ ನಡೆಸುತ್ತಿರುವ ಅನಿತಾ ಭಟ್ ತಮ್ಮ ಬೋಲ್ಡ್ ನಡೆ- ನುಡಿಯಿಂದಲೇ ಹೆಸರುವಾಸಿಯಾಗಿದ್ದಾರೆ.

ಲಾಕ್ ಡೌನ್ ವೇಳೆ ಅನಿತಾ ಭಟ್ ಟ್ವೀಟರ್ ನಲ್ಲಿ ಹಂಚಿಕೊಂಡ ಪೋಟೋವೊಂದಕ್ಕೆ‌ ನೆಟ್ಟಿಗರು ಆಕ್ಷೇಪ ವ್ಯಕ್ತಪಡಿಸಿದ್ದರು.

ಇದಕ್ಕೆ ತಕ್ಕನೆಯ ಉತ್ತರ ನೀಡಿದ್ದ ಅನಿತಾ ಭಟ್, ಹೆದರಿಕೊಂಡು ಹೋಗೋದಾದರೇ ಭೂಮಿಯಿಂದನೇ ಹೋಗಿ ಬಿಡ್ತಿದ್ದೇ, ಬಟ್ಟೆಯಿಂದ ಮನುಷ್ಯನನ್ನು ಅಳೆಯುವ ಸಮಾಜ ಇದು ಎಂದಿದ್ದರು.

ಸದ್ಯ ಹಲವು ಹೊಸ ಚಿತ್ರಗಳ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡಲು ಹೊರಟಿರೋ ಬೋಲ್ಡ್ ಆ್ಯಂಡ್ ಬ್ಯೂಟಿಫುಲ್ ಅನಿತಾ ಭಟ್ ಥಿಯೇಟರ್ ಗಳು ಮೊದಲಿನಂತೆ ಪ್ರದರ್ಶನ ಆರಂಭಿಸಿ ಚಿತ್ರಗಳು ಯಶಸ್ವಿಯಾಗಲಿ ಅಂತ ಕಾಯ್ತಿದ್ದಾರಂತೆ.

Comments are closed.