ಡಾರ್ಕ್‌ವೆಬ್‌ನಲ್ಲಿ (Dark Web) ಸುಮಾರು 81 ಕೋಟಿ ಭಾರತೀಯರ ವೈಯಕ್ತಿಕ ಮಾಹಿತಿಯ ಸೋರಿಕೆಯಾಗಿರುವ ಕುರಿತು ಅಮೇರಿಕಾ ಮೂಲದ ಸೈಬರ್ ಸೆಕ್ಯೂರಿಟಿ ಸಂಸ್ಥೆ ರೆಸೆಕ್ಯುರಿಟಿ ವರದಿಯಲ್ಲಿ ಉಲ್ಲೇಖಿಸಿದೆ. ಪ್ರಮುಖವಾಗಿ ಆಧಾರ್ ಕಾರ್ಡ್ (Aadhaar Card)ಹೊಂದಿರುವವರ ಹೆಸರು, ಮೊಬೈಲ್ ಸಂಖ್ಯೆ, ವಿಳಾಸ, ಆಧಾರ್, ಪಾಸ್‌ಪೋರ್ಟ್ ಮಾಹಿತಿ ಮಾರಾಟ ಮಾಡಲಾಗಿದೆ ಎನ್ನಲಾಗಿದೆ.
ಬ್ಯುಸಿನೆಸ್ ಸ್ಟ್ಯಾಂಡರ್ಡ್ ಮಾಡಿರುವ ವರದಿಯ ಪ್ರಕಾರ, ವರದಿ ಪ್ರಕಾರ ಹ್ಯಾಕರ್‌ಗಳು ಭಾರತೀಯ ಆಧಾರ್ ಕಾರ್ಡ್ ಹಾಗೂ ಪಾಸ್‌ಪೋರ್ಟ್ ಹೊಂದಿರುವವರ ವೈಯಕ್ತಿಕ ಮಾಹಿತಿಯನ್ನು ಖದ್ದು ಆನ್‌ಲೈನ್‌ನಲ್ಲಿ ಇತರರಿಗೆ ಮಾರಾಟ ಮಾಡಿದ್ದಾರೆ ಎಂದು ಭಾರತ ಹಾಗೂ ಅಂತರಾಷ್ಟ್ರೀಯ ಮಾಧ್ಯಮಗಳು ವರದಿಯನ್ನು ಪ್ರಕಟಿಸಿವೆ.

ಬ್ಲಾಗ್‌ಪೋಸ್ಟ್‌ನಲ್ಲಿ ಬರೆದಿದ್ದೇನು ?
ಅಕ್ಟೋಬರ್ 9 ರಂದು‘pwn0001’ ಎಂಬ ಹೆಸರಿನ ಬೆದರಿಕೆ ನಟನೊಬ್ಬ ಬ್ರೀಚ್ ಫೋರಮ್‌ಗಳಲ್ಲಿ 81.5 ಕೋಟಿ ಭಾರತೀಯರ ಆಧಾರ್ ಮತ್ತು ಪಾಸ್‌ಪೋರ್ಟ್‌ಗಳ ದಾಖಲೆಗಳನ್ನು ಬ್ರೋಕಿಂಗ್ ಮಾಡಿದ್ದಾನೆ ಎಂದು ಪೋಸ್ಟ್ ಮಾಡಿದ್ದಾನೆ. ಇನ್ನು HUNTER (HUMINT) ಘಟಕದ ತನಿಖಾಧಿಕಾರಿಗಳು, ಆಧಾರ್ ಮತ್ತು ಪಾಸ್‌ಪೋರ್ಟ್ ಡೇಟಾಬೇಸ್ ಅನ್ನು $ 80,000ಕ್ಕೆ ಮಾರಾಟ ಮಾಡಲು ಸಿದ್ದರಿದ್ದಾರೆ ಎಂದು ಕಂಪೆನಿಯ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ : CIBIL Score New Rules : ಸಿಬಿಲ್ ಸ್ಕೋರ್ ಹೊಸ ನಿಯಮ ಜಾರಿ, ಸಾಲಗಾರರಿಗೆ ಗುಡ್‌ನ್ಯೂಸ್ ಕೊಟ್ಟ RBI
ಮಾಧ್ಯಮಗಳಲ್ಲಿ ಆಧಾರ್ ಮಾಹಿತಿ ಸೋರಿಕೆಯ ಬಗ್ಗೆ ವರದಿಗಳು ಪ್ರಕಟವಾದ ಬೆನ್ನಲ್ಲೇ ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಸಿಬಿಐ) ತನಿಖೆಯನ್ನು ಆರಂಭಿಸಿದೆ. ಅಲ್ಲದೇ ಹ್ಯಾಕರ್ “pwn0001” ನಿಂದ ಪತ್ತೆಯಾದ ಉಲ್ಲಂಘನೆಯ ಬಗ್ಗೆ ತನಿಖೆ ಆರಂಭಿಸಲಾಗಿದೆ.. ಹ್ಯಾಕರ್‌ಗಳು COVID 19 ನ 800 ಮಿಲಿಯನ್ ಭಾರತೀಯರ ವೈಯಕ್ತಿಕ ಡೇಟಾವನ್ನು ಸೋರಿಕೆ ಮಾಡಿದ್ದಾರೆ ಎನ್ನಲಾಗುತ್ತಿದೆ.
ಹ್ಯಾಕರ್‌ಗಳು ಹೆಸರು, ತಂದೆಯ ಹೆಸರು, ಫೋನ್ ಸಂಖ್ಯೆ, ಇತರ ಸಂಖ್ಯೆ, ಪಾಸ್‌ಪೋರ್ಟ್ ಸಂಖ್ಯೆ, ಆಧಾರ್ ಸಂಖ್ಯೆ , ವಯಸ್ಸಿನ ಡೇಟಾವನ್ನು ಸೋರಿಕೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಈ ರೀತಿಯಲ್ಲಿ ಡೇಟಾ ಸೋರಿಕೆಯಾಗುತ್ತಿರುವುದು ಇದೇ ಮೊದಲೇನಲ್ಲಾ, ಈ ಹಿಂದೆ ಜೂನ್ ತಿಂಗಳಿನಲ್ಲಿ ಕೋವಿನ್ ವೆಬ್‌ಸೈಟ್‌ನಿಂದ ವಿವಿಐಪಿಗಳು ಸೇರಿದಂತೆ ಲಸಿಕೆ ಪಡೆದ ನಾಗರೀಕರ ವೈಯಕ್ತಿಕ ದಾಖಲೆಗಳನ್ನು ಟೆಲಿಗ್ರಾಮ ಮೆಸೆಂಜರ್ ಮೂಲಕ ಸೋರಿಕೆ ಮಾಡಲಾಗಿತ್ತು.
ಇದನ್ನೂ ಓದಿ : ಗೃಹಲಕ್ಷ್ಮೀ ಯೋಜನೆಯ ಹಣ ಇನ್ನೂ ಸಿಕ್ಕಿಲ್ವಾ ? ಇಂದೇ ಈ ಕೆಲಸ ಮಾಡಿದ್ರೆ ನಿಮ್ಮ ಬ್ಯಾಂಕ್ ಖಾತೆಗೆ ಹಣ ಜಮೆ ಆಗೋದು ಗ್ಯಾರಂಟಿ

ಪ್ರತೀ ಭಾರತೀಯರು ಕೂಡ ಆಧಾರ್ ಕಾರ್ಡ್ ಹೊಂದುವುದನ್ನು ರಾಜ್ಯ ಸರಕಾರ ಕಡ್ಡಾಯಗೊಳಿಸಿದೆ. ಅಲ್ಲದೇ ಬ್ಯಾಂಕಿಂಗ್ ಸೇರಿದಂತೆ ಎಲ್ಲಾ ವ್ಯವಹಾರಗಳಿಗೂ ಆಧಾರ್ ಲಿಂಕ್ ಮಾಡುವುದನ್ನು ಕಡ್ಡಾಯಗೊಳಿಸಿದೆ. ಆದರೆ ಆಧಾರ್ ಹಾಗೂ ಪಾಸ್‌ಪೋರ್ಟ್ ಮಾಹಿತಿ ಸೋರಿಕೆ ಆಗಿರುವುದು ಡಿಜಿಟಲೀಕರಣಕ್ಕೆ ಮುಂದಾಗುತ್ತಿರುವ ಭಾರತ ಸರಕಾರಕ್ಕೆ ದೊಡ್ಡ ಹೊಡೆತವಾಗಿದೆ.
ಸದ್ಯ ಮಾಧ್ಯಮಗಳು ಆಧಾರ್ ಹಾಗೂ ಪಾಸ್ ಪೋರ್ಟ್‌ನ ವೈಯಕ್ತಿಕ ಮಾಹಿತಿ ಸೋರಿಕೆ ಆಗಿರುವ ಕುರಿತು ವರದಿ ಪ್ರಕಟಿಸಿವೆ. ಆದರೆ ಇದುವರೆಗೂ ಈ ಕುರಿತು ಯಾವುದೇ ಖಚಿತತೆ ಸಿಕ್ಕಿಲ್ಲ. ಕೇಂದ್ರ ಸರಕಾರ ಈಗಾಗಲೇ ಪ್ರಕರಣ ತನಿಖೆಯನ್ನು ನಡೆಸುವ ಜವಾಬ್ದಾರಿಯನ್ನು ಸಿಬಿಐಗೆ ವಹಿಸಿದೆ. ಒಂದೊಮ್ಮೆ ಆಧಾರ್ ಹಾಗೂ ಪಾಸ್ ಪೋರ್ಟ್ ಮಾಹಿತಿ ಸೋರಿಕೆ ಆಗಿದ್ದೇ ಆದ್ರೆ ಸಮಸ್ಯೆ ಎದುರಾಗೋದು ಖಚಿತ.
ಇದನ್ನೂ ಓದಿ : ವಾಟ್ಸಾಪ್ ಹೊಸ ಫೀಚರ್ಸ್, ಪಾಸ್‌ವರ್ಡ್ ಇಲ್ಲದೇ ಆಗುತ್ತೆ ಲಾಗಿನ್ : ಹೊಸ ಪಾಸ್ ಕೀ ವೈಶಿಷ್ಟ್ಯದ ಬಗ್ಗೆ ನಿಮಗೆಷ್ಟು ಗೊತ್ತು ?
ಒಟ್ಟಿನಲ್ಲಿ ಸಿಬಿಐ ತನಿಖೆಯ ನಂತರಷ್ಟೇ ಆಧಾರ್ ಹಾಗೂ ಪಾಸ್ ಪೋರ್ಟ್ ಮಾಹಿತಿ ಸೋರಿಕೆ ಆಗಿರುವ ಕುರಿತು ಸ್ಪಷ್ಟನೆ ದೊರೆಯಲಿದೆ. ನೂರು ಕೋಟಿಗೂ ಅಧಿಕ ಭಾರತೀಯರ ಗೌಪ್ಯ ಮಾಹಿತಿ ಆಧಾರ್ ಕಾರ್ಡ್‌ನಲ್ಲಿ ಅಡಕವಾಗಿದೆ. ಆಧಾರ್ ಕಾರ್ಡ್ ಜೊತೆಗೆ ಪಾನ್ ಕಾರ್ಡ್, ಬ್ಯಾಂಕ್ ಡಿಟೇಲ್ಸ್ ಕೂಡ ಲಿಂಕ್ ಆಗಿದೆ.
Aadhaar Card Data Leak Massive data breach 81 crore indians personal Aadhaar card and passport information in dark web