ವಾಟ್ಸಾಪ್‌ ಹೊಸ ಫೀಚರ್ಸ್‌, ಪಾಸ್‌ವರ್ಡ್‌ ಇಲ್ಲದೇ ಆಗುತ್ತೆ ಲಾಗಿನ್‌ : ಹೊಸ ಪಾಸ್‌ ಕೀ ವೈಶಿಷ್ಟ್ಯದ ಬಗ್ಗೆ ನಿಮಗೆಷ್ಟು ಗೊತ್ತು ?

whatsapp new features : ಕೆಲವು ದಿನಗಳ ಹಿಂದೆಯಷ್ಟೇ ವಾಟ್ಸಾಪ್‌ ಚಾನೆಲ್‌ (Whatsapp Channel) ಆರಂಭಿಸಿದ್ದ ವಾಟ್ಸಾಪ್‌ ಇದೀಗ ಪಾಸ್‌ವರ್ಡ್‌ ಬದಲು ಪಾಸ್‌ ಕೀ ಫೀಚರ್ಸ್‌ (Whatsapp passkey Features) ಜಾರಿ ಮಾಡಿದೆ. ಅಷ್ಟಕ್ಕೂ ಏನಿದು ಪಾಸ್‌ಕೀ ಅನ್ನೋ ಕಂಪ್ಲೀಟ್‌ ಡಿಟೇಲ್ಸ್‌ ಇಲ್ಲಿದೆ.

ಪ್ರಖ್ಯಾತ ಸಾಮಾಜಿಕ ಜಾಲತಾಣವೆನಿಸಿಕೊಂಡಿರುವ ವಾಟ್ಸಾಪ್‌ ( Whatsapp) ಆಗಾಗ ಹೊಸ ಹೊಸ ಫೀಚರ್ಸ್‌ಗಳನ್ನು (whatsapp new features ) ಪರಿಚಯಿಸುತ್ತಿದೆ. ಕಳೆದ ಕೆಲವು ದಿನಗಳ ಹಿಂದೆಯಷ್ಟೇ ವಾಟ್ಸಾಪ್‌ ಚಾನೆಲ್‌ (Whatsapp Channel) ಆರಂಭಿಸಿದ್ದ ವಾಟ್ಸಾಪ್‌ ಇದೀಗ ಪಾಸ್‌ವರ್ಡ್‌ ಬದಲು ಪಾಸ್‌ ಕೀ ಫೀಚರ್ಸ್‌ (Whatsapp passkey Features) ಜಾರಿ ಮಾಡಿದೆ. ಅಷ್ಟಕ್ಕೂ ಏನಿದು ಪಾಸ್‌ಕೀ ಅನ್ನೋ ಕಂಪ್ಲೀಟ್‌ ಡಿಟೇಲ್ಸ್‌ ಇಲ್ಲಿದೆ.

ವಾಟ್ಸಾಪ್‌ ಲಾಗಿನ್‌ ಮಾಡುವ ವೇಳೆಯಲ್ಲಿ ಸಾಮಾನ್ಯವಾಗಿ ಎಸ್‌ಎಂಎಸ್‌ ಮೂಲಕ ದೃಢೀಕರಣ ಕೇಳುತ್ತದೆ. ಈ ಪ್ರಕ್ರಿಯೆ ಪೂರ್ಣಗೊಳಿಸಿದ್ರೆ ಮಾತ್ರವೇ ವಾಟ್ಸಾಪ್‌ ಆಪ್‌ ಓಪನ್‌ ಆಗುತ್ತದೆ. ಇದು ಬಳಕೆದಾರರಿಗೆ ಸಾಕಷ್ಟು ಕಿರಿಕಿರಿ ಉಂಟಾಗುತ್ತಿದೆ. ಇನ್ನು ವಾಟ್ಸಾಪ್‌ ಅನ್‌ ಇನ್‌ಸ್ಟಾಲ್‌ ಮಾಡಿ ಮತ್ತೆ ಲಾಗಿನ್‌ ಮಾಡುವಾಗ ಕೂಡ ಇದೇ ಮಾದರಿಯನ್ನು ಅನುಸರಿಸಬೇಕು.

WhatsApp new features login without password How much do you know about the Whatsapp new pass key feature
Image Credit to Original Source

ಆದರೆ ಎಸ್‌ಎಂಎಸ್‌ ಸರಿಯಾದ ಸಮಯದಲ್ಲಿ ಬಾರದೇ ಬಳಕೆದಾರರು ಸಾಕಷ್ಟು ಕಿರಿಕಿರಿ ಎದುರಿಸುತ್ತಿದ್ದಾರೆ. ಇದನ್ನು ಗಮನಿಸಿರುವ ವಾಟ್ಸಾಪ್‌ ಮೆಟಾ ಇದೀಗ ಹೊಸ ವೈಶಿಷ್ಠ್ಯತೆಯನ್ನು ಪರಿಚಯಿಸಿದೆ. ಇದು ಬಳಕೆದಾರರಿಗೆ ಹೆಚ್ಚು ಸುರಕ್ಷತೆಯನ್ನು ಒದಗಿಸುವುದರ ಜೊತೆಗೆ ಸುಲಭವಾಗಿ ಲಾಗಿನ್‌ ಮಾಡಲು ಸಹಕಾರಿಯಾಗಲಿದೆ.

ಇದನ್ನೂ ಓದಿ : 15 ಸಾವಿರಕ್ಕಿಂತಲೂ ಕಡಿಮೆ ಬೆಲೆಗೆ ಖರೀದಿಸಿ ಸ್ಯಾಮ್‌ಸಂಗ್‌ ಗ್ಯಾಲಕ್ಸಿ M34 5G ಮೊಬೈಲ್‌

ಸದ್ಯ ತಂತ್ರಜ್ಞಾನ ಕ್ಷೇತ್ರದಲ್ಲಿ ಪಾಸ್‌ ಕೀ ಅಳವಡಿಕೆ ಹೊಸ ತಂತ್ರಜ್ಞಾನ. ಇಷ್ಟು ಸಮಯದವರೆಗೆ ಪಾಸ್‌ವರ್ಡ್‌ ಗಳನ್ನು ಬಳಕೆ ಮಾಡಲಾಗುತ್ತಿತ್ತು. ಪಾಸ್‌ವರ್ಡ್‌ಗಳು ನಿರ್ಧಿಷ್ಟ ಅವಧಿಯ ವರೆಗೆ ಮಾತ್ರವೇ ಚಾಲ್ತಿಯಲ್ಲಿ ಇರುತ್ತದೆ. ಆದರೆ ಪಾಸ್‌ ಕೀಗಳನ್ನು ಸುದೀರ್ಘ ಅವಧಿಯ ವರೆಗೆ ಬಳಕೆಗೆ ಬರಲಿದೆ.

ಈಗಾಗಲೇ ಗೂಗಲ್‌ ಪಾಸ್‌ವರ್ಡ್‌ಗಳ ಬದಲು ಪಾಸ್‌ಕೀ ಬಳಕೆ ಮಾಡುವಂತೆ ತನ್ನ ಬಳಕೆದಾರರಲ್ಲಿ ಈಗಾಗಲೇ ಮನವಿ ಮಾಡಿಕೊಂಡಿದೆ. ಪಾಸ್‌ ಕೀಗಳನ್ನು ಬಳಕೆ ಮಾಡುವ ವೇಳೆಯಲ್ಲಿ ನಿಮ್ಮ ಸ್ಮಾರ್ಟ್‌ಪೋನ್‌ಗಳನ್ನು ಅನ್‌ಲಾಕ್‌ ಮಾಡಲು ಫಿಂಗರ್‌ ಪ್ರಿಂಟ್‌, ಫೇಸ್‌ ಸ್ಕ್ಯಾನ್‌, ಪಿನ್‌ ಬಳಕೆ ಮಾಡ ಬೇಕಾಗಿದೆ. ಆದರೆ ಐಪೋನ್‌ ಒಎಸ್‌ಗಳಲ್ಲಿ ಯಾವಾಗ ಈ ವೈಶಿಷ್ಟ್ಯವನ್ನು ಯಾವಾಗ ಪರಿಚಯಿಸಲಾಗುತ್ತದೆ ಅನ್ನೋದನ್ನು ವಾಟ್ಸಾಪ್‌ ಇನ್ನೂ ಖಚಿತ ಪಡಿಸಿಲ್ಲ.

ಇದನ್ನೂ ಓದಿ : ಆಪಲ್‌ ಐಪೋನ್‌ 15 ಖರೀದಿಯ ಮೇಲೆ ಭರ್ಜರಿ 40,000 ರೂ. ರಿಯಾಯಿತಿ

ವಾಟ್ಸಾಪ್‌ ಈಗಾಗಲೇ ಪಾಸ್‌ ಕೀ ವೈಶಿಷ್ಟ್ಯತೆಯನ್ನು ತನ್ನ ಬೀಟಾ ಚಾನೆಲ್‌ನಲ್ಲಿ ಪರೀಕ್ಷೆ ನಡೆಸಿ ಯಶಸ್ವಿಯಾಗಿದೆ. ವಾಟ್ಸಾಪ್‌ ಸದ್ಯದಲ್ಲಿಯೇ ಟು ಅಂಶಗಳ ಎಸ್‌ಎಂಎಸ್‌ ದೃಢೀಕರಣಕ್ಕೆ ಬ್ರೇಕ್‌ ಹಾಕಲಿದೆ. ತನ್ನ ಬಳಕೆದಾರರಿಗೆ ಭದ್ರತೆಯನ್ನು ಒದಗಿಸುವ ನಿಟ್ಟಿನಲ್ಲಿ ವಾಟ್ಸಾಪ್‌ ಮಹತ್ವದ ಹೆಜ್ಜೆಯನ್ನು ಇರಿಸಿದೆ. ಇನ್ಮುಂದೆ ಪಾಸ್‌ ಕೀ ಜಾರಿಯಾದ ನಂತರದಲ್ಲಿ ವಾಟ್ಸಾಪ್‌ ಖಾತೆಗಳನ್ನು ಅನ್‌ಲಾಕ್‌ ಮಾಡಲು ಬಳಕೆದಾರರು ಮುಖ (ಫೇಸ್‌ಲಾಕ್)‌, ಫಿಂಗರ್‌ ಪ್ರಿಂಟ್‌ ಅಥವಾ ಪಿನ್‌ ಬಳಕೆ ಮಾಡಬೇಕಾಗುತ್ತದೆ.

WhatsApp new features login without password How much do you know about the Whatsapp new pass key feature
Image Credit to Original Source

ಪಾಸ್‌ವರ್ಡ್‌ರಹಿತ ಲಾಗಿನ್ ಆಯ್ಕೆಯನ್ನು ಪರಿಚಯ ಮಾಡುವ ಮೂಲಕ WhatsApp ತನ್ನ Android ಅಪ್ಲಿಕೇಶನ್‌ನ ಸುರಕ್ಷತೆ ಮತ್ತು ಬಳಕೆದಾರರ ಅನುಭವವನ್ನು ಹೆಚ್ಚಿಸುವಲ್ಲಿ ಮಹತ್ವದ ಹೆಜ್ಜೆಯನ್ನು ಇಡುತ್ತಿದೆ. ಪಾಸ್‌ ಕೀ ತಂತ್ರಜ್ಞಾನವು ಅತ್ಯಂತ ಸುರಕ್ಷಿತ ಮತ್ತು ಅನಗತ್ಯ ಕಿರಿಕಿರಿಯನ್ನು ತಪ್ಪಿಸಲಿದೆ.

ಈಗಾಗಲೇ ವಾಟ್ಸಾಪ್‌ ಪಾಸ್‌ ಕೀ ತಂತ್ರಜ್ಞಾನವನ್ನು ಅಳವಡಿಸುವ ಕುರಿತು X (ಹಿಂದೆ Twitter) ಮೂಲಕ ಘೋಷಿಸಿದೆ. ಪಾಸ್‌ ಕೀ ಮೂಲಕ ಲಕ್ಷಾಂತರ ಮಂದಿ ಬಳಕೆದಾರರಿಗೆ ಲಾಗಿನ್‌ ಪ್ರಕ್ರಿಯೆ ಇನ್ನಷ್ಟು ಸುಲಭ ಆಗಲಿದೆ. Apple ಮತ್ತು Google ಎರಡೂ ಈಗಾಗಲೇ ಈ ತಂತ್ರಜ್ಞಾನವನ್ನು ಅಳವಡಿಸಿಕೊಂಡಿವೆ. ಗೂಗಲ್‌ ಹಾಗೂ ಆಪಲ್ ತಮ್ಮ ಬಳಕೆದಾರರಿಗೆ ಪಾಸ್‌ಕೀ‌ ತಂತ್ರಜ್ಞಾನವನ್ನು ಈಗಾಗಲೇ ಪರಿಚಯಿಸಿವೆ.

ಇದನ್ನೂ ಓದಿ : ಅಮೆಜಾನ್ ಬಿಗ್ ಸೇಲ್ : ಕೇವಲ 14,449 ರೂಪಾಯಿಗೆ ಸಿಗುತ್ತೆ ಜಿಯೋ ಲ್ಯಾಪ್‌ಟಾಪ್‌

ಗೂಗಲ್‌ ಈ ಹಿಂದೆ ಬಳಕೆ ಮಾಡುತ್ತಿದ್ದ ಪಾಸ್‌ವರ್ಡ್‌ ಬದಲು ಪಾಸ್‌ ಕೀಗಳಿಗೆ ಬದಲಾಯಿಸಿಕೊಳ್ಳುವಂತೆ ಸೂಚಿಸಿದೆ. ಪಾಸ್‌ ಕೀ ಕೇವಲ ಸುರಕ್ಷಿತ ಮಾತ್ರವಲ್ಲ, ಅತ್ಯಂತ ವೇಗವಾಗಿ ಕಾರ್ಯನಿರ್ವಹಿಸಲು ಸಹಕಾರಿಯಾಗಿದೆ. ಪಾಸ್‌ವರ್ಡ್‌ಗಳಿಗೆ ಹೋಲಿಕೆ ಮಾಡಿದ್ರೆ ಶೇ.40 ರಷ್ಟು ವೇಗವಾಗಿ ಇರಲಿದೆ. ಅಲ್ಲದೇ ಸುರಕ್ಷತೆ ಮತ್ತು ಕ್ರಿಫ್ಟೋಗ್ರಫಿಯನ್ನು ಬಳಕೆ ಮಾಡುವುದರಿಂದಾಗಿ ಬಳಕೆದಾರರ ಡೇಟಾ ಸೋರಿಕೆಯಾಗುವ ಪ್ರಮಾಣ ಕಡಿಮೆ.

ಈ ವರ್ಷದ ಆರಂಭದಲ್ಲಿಯೇ ಗೂಗಲ್‌ ಪಾಸ್‌ ಕೀ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆ. ಅಲ್ಲದೇ ಬಳಕೆದಾರರು ಸಕಾರಾತ್ಮಕ ಪ್ರತಿಕ್ರಿಯೆಯನ್ನು ನೀಡಿದಾರೆ. ಸದ್ಯ ಪಾಸ್‌ ಕೀ ವೈಶಿಷ್ಟ್ಯವು ತಂತ್ರಜ್ಞಾನ ಯುಗದಲ್ಲಿ ಅತ್ಯಂತ ಮಹತ್ವದ ಹೆಜ್ಜೆಯಾಗಿದೆ. ತಂತ್ರಜ್ಞಾನಗಳ ಅಳವಡಿಕೆಗೆ ಸಾಕಷ್ಟು ಸಮಯವನ್ನು ತೆಗೆದುಕೊಳ್ಳುತ್ತದೆ ಎಂದು ಖುದ್ದು ಗೂಗಲ್‌ ಹೇಳಿಕೊಂಡಿದೆ.

WhatsApp new features login without password How much do you know about the Whatsapp new pass key feature
Image Credit to Original Source

ಆದರೆ ಸಾಂಪ್ರದಾಯಿಕ ಪಾಸ್‌ವರ್ಡ್‌ಗಳು ಸ್ವಲ್ಪ ಸಮಯದ ವರೆಗೆ ಬಳಕೆಯಲ್ಲಿದ್ರೆ, ಆದರೆ ಪಾಸ್‌ ಕೀಗಳು ಆನ್‌ಲೈನ್‌ ಖಾತೆಗಳಿಗೆ ಲಾಗ್‌ ಇನ್‌ ಮಾಡಲು ಹೆಚ್ಚು ಸುರಕ್ಷಿತ. ವಾಟ್ಸಾಪ್‌ನಲ್ಲಿ ಪಾಸ್‌ಕೀ ವೈಶಿಷ್ಟ್ಯತೆಯನ್ನು ಬಳಕೆ ಮಾಡುತ್ತಿರುವುದು ಭವಿಷ್ಯದ ದೃಷ್ಟಿಯಿಂದ ಮಹತ್ವದ ಹೆಜ್ಜೆಯಾಗಿದೆ.

ಆಂಡ್ರಾಯ್ಡ್‌ (Android) ಸ್ಮಾರ್ಟ್‌ಪೋನ್‌ WhatsApp ನಲ್ಲಿ ಪಾಸ್‌ಕೀ ಸಕ್ರಿಯಗೊಳಿಸುವುದು ಹೇಗೆ ?

ಸದ್ಯ ವಿಶ್ವದಾದ್ಯಂತ ಪಾಸ್‌ ಕೀ ಫೀಚರ್ಸ್‌ ಜಾರಿಗೆ ಬಂದಿಲ್ಲ. ಈ ಪಾಸ್‌ ಕೀಗಳನ್ನು ಹೇಗೆ ಸಕ್ರೀಯಗೊಳಿಸಬೇಕು ಅನ್ನುವ ಗೊಂದಲ ಹಲವರಲ್ಲಿದೆ. ಇದೀಗ ನಾವು ಹೇಳುವ ಮಾರ್ಗಗಳನ್ನು ಅನುರಿಸುವ ಮೂಲಕ ನಿಮ್ಮ ಆಂಡ್ರಾಯ್ಡ್‌ ಮೊಬೈಲ್‌ ಪೋನ್‌ಗಳಲ್ಲಿ ವಾಟ್ಸಾಪ್‌ ಮೂಲಕ ಪಾಸ್‌ ಕೀ ಸಕ್ರೀಯಗೊಳಿಸಬಹುದಾಗಿದೆ.

  • WhatsApp ತೆರೆಯಿರಿ ಮತ್ತು ಸೆಟ್ಟಿಂಗ್‌ಗಳ ಮೆನುವನ್ನು ಪ್ರವೇಶಿಸಿ.
  • ಖಾತೆ” ಮೇಲೆ ಟ್ಯಾಪ್ ಮಾಡಿ.
  • ಪಾಸ್ಕಿಗಳು” ಆಯ್ಕೆಮಾಡಿ.
  • ಪಾಸ್ಕೀ ರಚಿಸಿ” ಆಯ್ಕೆಮಾಡಿ
  • ಪಾಸ್‌ಕೀ ಕಾರ್ಯವನ್ನು ವಿವರಿಸುವ ಮಾಹಿತಿ ಪಾಪ್‌ಅಪ್ ಅನ್ನು ಓದಿ.
  • ಮುಂದುವರಿಸು” ಟ್ಯಾಪ್ ಮಾಡಿ.
  • Google ಪಾಸ್‌ವರ್ಡ್ ನಿರ್ವಾಹಕದಿಂದ ಅಧಿಸೂಚನೆಯು ಕಾಣಿಸಿಕೊಳ್ಳುತ್ತದೆ, ನೀವು WhatsApp ಗಾಗಿ ಪಾಸ್‌ಕೀಯನ್ನು ರಚಿಸಲು ಬಯಸುತ್ತೀರಾ ಎಂದು ಕೇಳುತ್ತದೆ.
  • ನಿಮ್ಮ ಫೋನ್‌ನ ಸ್ಕ್ರೀನ್ ಲಾಕ್ ವಿಧಾನದೊಂದಿಗೆ ಲಾಗ್ ಇನ್ ಮಾಡಲು ಸಕ್ರಿಯಗೊಳಿಸಲು “ಮುಂದುವರಿಸಿ” ಆಯ್ಕೆಮಾಡಿ ಮತ್ತು “ಸ್ಕ್ರೀನ್ ಲಾಕ್ ಬಳಸಿ” ಆಯ್ಕೆಮಾಡಿ. ನಿಮ್ಮ ಉಲ್ಲೇಖಕ್ಕಾಗಿ ನಿಮ್ಮ WhatsApp ಪಾಸ್‌ಕೀಯನ್ನು ಈಗ ಪ್ರದರ್ಶಿಸಲಾಗುತ್ತದೆ.

WhatsApp new features, login without password: How much do you know about the Whatsapp new pass key feature ?

Comments are closed.