ಅಬುಧಾಬಿ : ಕನ್ನಡ ನೆಲದಲ್ಲಿ ಕನ್ನಡ ಮರೆಯಾಗುತ್ತಿದೆ. ಆದರೆ ಅಬುಧಾಬಿಯಲ್ಲಿರುವ ಕನ್ನಡಗರು ವಿದೇಶದಲ್ಲಿಯೂ ಕನ್ನಡ ಪ್ರೇಮ ವನ್ನು ಮೆರೆಯುತ್ತಿದ್ದಾರೆ.
ಯುಗಾದಿ ಹಬ್ಬದ ಪ್ರಯುಕ್ತ ದುಬೈಯ ಹೆಮ್ಮೆಯ ಯುಎಇ ಕನ್ನಡಿಗರು ತಂಡದ ಮಹಿಳಾ ಘಟಕದ ವತಿಯಿಂದ ಹೆಮ್ಮೆಯ ಯುಎಇ ಕನ್ನಡತಿಯರು ಸಂಯುಕ್ತ ಅರಬ್ ಸಂಸ್ಥಾನದಲ್ಲಿರುವ ಕನ್ನಡ ಮಕ್ಕಳಿಗಾಗಿ ಪ್ರತಿಭಾ ಸ್ಪರ್ಧೆಯನ್ನು ಏರ್ಪಡಿಸಿತ್ತು. ಗಾಯನ ಸ್ಪರ್ಧೆ, ನೃತ್ಯ ಸ್ಪರ್ಧೆ, ಛದ್ಮ ವೇಷ, ವಾದ್ಯ ಸಂಗೀತ, ಚಿತ್ರಕಲೆ ಮತ್ತು ಕಲರಿಂಗ್ ಸ್ಪರ್ಧೆ ಮುಂತಾದ ಕಲಾತ್ಮಕ ಚಟುವಟಿಕೆಗಳಲ್ಲಿ 4 ರಿಂದ 7 ವರ್ಷ ಪ್ರಾಯದ ಮಕ್ಕಳು ಪಾಲ್ಗೊಂಡಿದ್ದರು. ಕೋವಿಡ್ ಹಿನ್ನೆಲೆಯಲ್ಲಿ ಕಾರ್ಯಕ್ರಮ ಆನ್ ಲೈನ್ ಮೂಲಕ ನಡೆದಿರೋದು ವಿಶೇಷವಾಗಿತ್ತು.
ಹೆಮ್ಮೆಯ ಕನ್ನಡಿಗರು ಸಂಘದ ಅಧ್ಯಕ್ಷರಾದ ಮಮತಾ ಮೈಸೂರು ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಎಮ್ ಸ್ಕ್ವೇರ್ ಎಂಜಿನೀಯರಿಂಗ್ ಕನ್ಸಲ್ಟೆಂಟ್ ನ ಅಸ್ಮಾ ಮುಸ್ತಫಾ, ಚಿತ್ರ ಕಲಾವಿದೆ ವಾರುಣಿ, ಲಕ್ಷ್ಮಿ ರೆಡ್ಡಿ, ಗಾಯಕ ನವೀದ್ ಮಾಗುಡಿ, ನ್ಯೂಸ್ ನೆಕ್ಷ್ಟ್ ಯುಎಇ ವಿಶೇಷ ವರದಿಗಾರರಾದ ಅನಿತಾ ಬ್ರಹ್ಮಾವರ ಅವರು ಪಾಲ್ಗೊಂಡಿದ್ದರು.
ಹೆಮ್ಮೆಯ ಕನ್ನಡತಿಯರು ಘಟಕದ ಮುಖ್ಯ ಸಂಚಾಲಕರಾದ ಮಮತಾ ಶಾರ್ಜಾ, ಪಲ್ಲವಿ ದಾವಣಗೆರೆ ಮತ್ತು ಹಾದಿಯ ಮಂಡ್ಯ ವಿಶೇಷವಾಗಿ ಆಯೋಜನೆ ಮಾಡಿದ್ದರು. ಸೆಂತಿಲ್ ಮತ್ತು ಸಾದತ್ ಬೆಂಗಳೂರು ಅವರು ತಾಂತ್ರಿಕ ಸಹಕಾರ ನೀಡಿದರು. ವಿವಿಧ ಸ್ಪರ್ಧೆಯಲ್ಲಿ ವಿಜೇತರಾಗಿರುವ ಸ್ಪರ್ಧಿಗಳಿಗೆ ಬಹುಮಾನವನ್ನು ವಿತರಿಸಲಾಯಿತು.