ಅಪ್ಪನ ಬಳಿಕ ಮಗನಿಗೂ ಸೋಂಕು…! ಮ್ಯಾರೇಜ್ ಆನಿವರ್ಸರಿ ಸಂಭ್ರಮದಲ್ಲಿದ್ದ ನಿಖಿಲ್ ಕೊರೋನಾ ಟೆಸ್ಟ್ ಪಾಸಿಟಿವ್ …!!

ಮಾಜಿಸಿಎಂ ಕುಮಾರಸ್ವಾಮಿಯವರಿಗೆ ಕೊರೋನಾ ಸೋಂಕು ತಗುಲಿದ ಬೆನ್ನಲ್ಲೇ, ಯುವನಟ ಹಾಗೂ ಜೆಡಿಎಸ್ ಯುವಘಟಕದ  ರಾಜ್ಯ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕೊರೋನಾ ಸೋಂಕು ತಗುಲಿದೆ. ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದ ನಿಖಿಲ್ ಕುಮಾರಸ್ವಾಮಿ ಸ್ವತಃ ಕೊರೋನಾ ಪಾಸಿಟಿವ್ ಸಂಗತಿಯನ್ನು ಹಂಚಿಕೊಂಡಿದ್ದಾರೆ.

ಪೇಸ್ ಬುಕ್ ನಲ್ಲಿ ಈ ವಿಚಾರವನ್ನು ಹಂಚಿಕೊಂಡಿರುವ ನಟ ನಿಖಿಲ್ ಕುಮಾರಸ್ವಾಮಿ, ನಾನು ಇಂದು ಕೊವೀಡ್ ಟೆಸ್ಟ್ ಗೆ ಒಳಪಟ್ಟಿದ್ದು, ವರದಿ ಪಾಸಿಟಿವ್ ಬಂದಿದೆ. ಯಾರು ಆತಂಕ ಪಡುವ ಅಗತ್ಯವಿಲ್ಲ. ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆ ಪಡೆಯುತ್ತಿದ್ದೇನೆ. ಕೆಲ ದಿನಗಳಿಂದ ನನ್ನ ಸಂಪರ್ಕಕ್ಕೆ ಬಂದವರು ಟೆಸ್ಟ್ ಗೆ ಒಳಗಾಗಿ ಎಂದಿದ್ದಾರೆ.

ಇತ್ತೀಗಷ್ಟೇ ನಿಖಿಲ್ ಕುಮಾರಸ್ವಾಮಿ ತಮ್ಮ ಹೊಸ ಚಿತ್ರ ರೈಡರ್ ಶೂಟಿಂಗ್ ಗಾಗಿ ಲೇ ಲಡಾಕ್ ಗೆ ತೆರಳಿದ್ದರು. ಅಲ್ಲಿನ ಪ್ರಕೃತಿ ಸೌಂದರ್ಯದ ಪೋಟೋಗಳನ್ನು ಹಂಚಿಕೊಂಡಿದ್ದ ಲೇ ಲಡಾಕ್ ನ ಮಾರುಕಟ್ಟೆಯಲ್ಲಿ ಪತ್ನಿಗಾಗಿ ಶಾಪಿಂಗ್ ಮಾಡಿ ಸುದ್ದಿಯಾಗಿದ್ದರು.

ಲೇ ಲಡಾಕ್ ನಿಂದ ಶೂಟಿಂಗ್ ಮುಗಿಸಿ ವಾಪಸ್ಸಾಗುತ್ತಿದ್ದಂತೆ ಕೊರೋನಾ ಸೋಂಕು ತಗುಲಿದ್ದು, ಬೆಳಗ್ಗೆಯಷ್ಟೇ ಮಾಜಿಸಿಎಂ ಕುಮಾರಸ್ವಾಮಿ ಕೂಡ ಕೊರೋನಾ ಸೋಂಕಿಗೆ ಒಳಗಾದ ಸಂಗತಿ ಬೆಳಕಿಗೆ ಬಂದಿತ್ತು. ಆದರೇ ನಿಖಿಲ್ ಕುಮಾರಸ್ವಾಮಿ ಪತ್ನಿ ರೇವತಿ ಕುಮಾರಸ್ವಾಮಿ ಹಾಗೂ ಕುಮಾರಸ್ವಾಮಿಯವರ ಪತ್ನಿ ಅನಿತಾ ಕುಮಾರಸ್ವಾಮಿಯವರ ಆರೋಗ್ಯದ ಬಗ್ಗೆ ಮಾಹಿತಿ ಇಲ್ಲ.

ಇನ್ನು ನಿಖಿಲ್ ಗೂ ಮುನ್ನ ಕೊರೋನಾಗೆ ತುತ್ತಾದ ಎಚ್ಡಿಕೆಗೆ ಮಣಿಪಾಲ್ ಆಸ್ಪತ್ರೆ ಬೆಡ್ ನೀಡಲು ನಿರಾಕರಿಸಿದೆ ಎಂಬ ಸಂಗತಿಯೂ ಬೆಳಕಿದೆ ಬಂದಿದೆ, ಇದೀಗ ನಿಖಿಲ್ ಕೂಡ ಕೊರೋನಾಗೆ ತುತ್ತಾಗಿದ್ದು, ಏಪ್ರಿಲ್ 1 ರಂದು ಮಾಜಿ ಪ್ರಧಾನಿ ದೇವೆಗೌಡ್ ದಂಪತಿಗೆ ಕೊರೋನಾ ಕಾಣಿಸಿಕೊಂಡಿದ್ದು ಚಿಕಿತ್ಸೆ ಪಡೆದುಕೊಂಡಿದ್ದರು.  

Comments are closed.