ಬೆಂಗಳೂರು / ಮಂಗಳೂರು : ಬೆಳ್ಳಂಬೆಳಗ್ಗೆಯೇ ಎಸಿಬಿ ಅಧಿಕಾರಿಗಳು ಭ್ರಷ್ಟ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ. ರಾಜ್ಯದ 10 ಕಡೆಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿರುವ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲನೆಯನ್ನು ನಡೆಸುತ್ತಿದ್ದಾರೆ.
ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಟೌನ್ ಪ್ಲ್ಯಾನಿಂಗ್ ಆಫೀಸರ್ ಜಯರಾಜ್ ಅವರಿಗೆ ಸೇರಿದ ಮಂಗಳೂರು, ಕೇರಳದಲ್ಲಿರುವ ಮನೆಗಳ ಮೇಲೆ ದಾಳಿ ನಡೆಸಲಾಗಿದೆ. ಜಯರಾಜ್ ಅವರಿಗೆ ಸೇರಿದ ಮಂಗಳೂರಿನ ಮನೆ, ತಂದೆಯ ಮನೆ, ಪತ್ನಿ ಉಳಿದುಕೊಂಡಿದ್ದ ಕ್ವಾಟರ್ಸ್ ಹಾಗೂ ಕೇರಳದಲ್ಲಿರುವ ಪತ್ನಿಯ ಮನೆಯ ಮೇಲೆ ಎಸಿಬಿ ಅಧಿಕಾರಿಗಳು ದಾಳಿಯನ್ನು ನಡೆಸಿದ್ದು, ಕಡತಗಳ ಪರಿಶೀಲನೆಯನ್ನು ನಡೆಸುತ್ತಿದ್ದಾರೆ.
ಧಾರವಾಡ ಅರಣ್ಯ ಇಲಾಖೆಯ ಎಸಿಎಫ್ ಶ್ರೀನಿವಾಸ್ ಅವರ ಮನೆಯ ಮೇಲೆ ದಾಳಿ ನಡೆಸಿರುವ ಎಸಿಬಿ ಅಧಿಕಾರಿಗಳು ಚಿತ್ರದುರ್ಗ ಹಾಗೂ ಧಾರವಾಡದ ವಿದ್ಯಾನಗರದಲ್ಲಿರುವ ಮನೆ ಹಾಗೂ ಚಿತ್ರದುರ್ಗದ ತಾಲೂಕಿನ ಮಾರಘಟ್ಟ ಬಳಿಯಲ್ಲಿರುವ ತೋಟದ ಮನೆಯ ಮೇಲೆ ದಾಳಿ ನಡೆಸಿ ಕಡತಗಳ ಪರಿಶೀಲನೆ ನಡೆಸುತ್ತಿದ್ದಾರೆ.ಮಾತ್ರವಲ್ಲದೇ ಬೆಂಗಳೂರು, ಕಲಬುರಗಿ, ಬಳ್ಳಾರಿ, ಹುಬ್ಬಳಿ ಮುಂತಾದ ಕಡೆಗಳಲ್ಲಿಯೂ ಎಬಿಸಿ ಅಧಿಕಾರಿಗಳು ಭ್ರಷ್ಟ ಅಧಿಕಾರಿಗಳ ಮನೆಯ ಮೇಲೆ ದಾಳಿಯನ್ನು ನಡೆಸಿದ್ದು, ಪರಿಶೀಲನೆಯನ್ನು ನಡೆಸುತ್ತಿದ್ದಾರೆ.