ಬುಧವಾರ, ಏಪ್ರಿಲ್ 30, 2025
HomeBreakingಕೊರೋನಾ ಬಳಿಕ ಕಪ್ಪುಫಂಗಸ್ ಕಾಟ…..! ಈ ಸಮಸ್ಯೆಗೂ ಎದುರಾಗಿದೆ ಔಷಧಿ ಕೊರತೆ…!!

ಕೊರೋನಾ ಬಳಿಕ ಕಪ್ಪುಫಂಗಸ್ ಕಾಟ…..! ಈ ಸಮಸ್ಯೆಗೂ ಎದುರಾಗಿದೆ ಔಷಧಿ ಕೊರತೆ…!!

- Advertisement -

ಬೆಂಗಳೂರು: ಈಗಾಗಲೇ ಕೊರೋನಾ ಎರಡನೇ ಅಲೆ ಎದುರಿಸಲಾಗದೇ ಸೋತಿರುವ ಕರ್ನಾಟಕಕ್ಕೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ಬ್ಲಾಕ್ ಫಂಗಸ್ ರೋಗದ ಭೀತಿ ಕಾಡುತ್ತಿದೆ. ರೋಗದ ಜೊತೆಗೆ ಇದಕ್ಕೆ ಅಗತ್ಯವಾದ ಆಂಟಿಫಂಗಲ್ ಮೆಡಿಸಿನ್ ಕೊರತೆ ಇದೆ ಎಂಬ ಆತಂಕಕಾರಿ ಅಂಶವೂ ಬೆಳಕಿಗೆ ಬಂದಿದೆ.

https://kannada.newsnext.live/lockdown-police-asult-highcourt-warning/

ಮ್ಯೂಕೋರ್ ಮೈಸೋಸಿಸ್ ಎಂದು ಕರೆಯಿಸಿಕೊಳ್ಳೋ ಈ ಬ್ಲಾಕ್ ಫಂಗಸ್ ಸಮಸ್ಯೆ ಕೊರೋನಾದಿಂದ ಚೇತರಿಸಿಕೊಂಡ ಸಕ್ಕರೆ ಕಾಯಿಲೆ ಇರುವವರಿಗೆ ಹಾಗೂ ಇತರ ರೋಗನಿರೋಧಕ ಶಕ್ತಿ ಕೊರತೆ ಇರುವವರಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದೆ.

https://kannada.newsnext.live/cyclone-effect-karnataka-heavy-rainfall/

ಸದ್ಯ ಕರ್ನಾಟಕದಲ್ಲಿ ಈ ಸಮಸ್ಯೆ ಕಾಣಿಸಿಕೊಂಡಿಲ್ಲವಾದರೂ ಗುಜರಾತ್,ಅಹ್ಮದಾಬಾದ್ ಸೇರಿದಂತೆ ಹಲವೆಡೆ ಇದ್ದು, ಹೆಚ್ಚಿನ ಕಾಳಜಿ ವಹಿಸುವಂತೆ ಡಿಸಿಎಂ ಅಶ್ವತ್ಥ ನಾರಾಯಣ ಹಾಗೂ ಆರೋಗ್ಯ ಸಚಿವ ಡಾ.ಸುಧಾಕರ್ ಮನವಿ ಮಾಡಿದ್ದಾರೆ.

https://kannada.newsnext.live/cyclone-effect-karnataka-heavy-rainfall/

ಈ ಮಧ್ಯೆ ಬ್ಲಾಕ್ ಫಂಗಸ್ ಚಿಕಿತ್ಸೆ ಕೂಡ ದುಬಾರಿಯದ್ದಾಗಿದ್ದು, ಪ್ರತಿನಿತ್ಯ 10 ರಿಂದ 15 ಸಾವಿರ ರೂಪಾಯಿ ವೆಚ್ಚವಾಗಲಿದೆ ಎನ್ನಲಾಗುತ್ತಿದೆ. ಜೊತೆಗೆ ಬ್ಲಾಕ್ ಫಂಗಸ್ ಚಿಕಿತ್ಸೆಗೆ ಬಳಸುವ ಆಂಪೋಟೆರಿಸಿನ್ ಇಂಜಕ್ಷನ್ ಹಾಗೂ ಇತರೇ ಆಂಟಿಫಂಗಲ್ ಔಷಧಿಗಳ ಕೊರತೆ ಎದುರಾಗಿದ್ದು, ಔಷಧಿ ತಯಾರಿಕಾ ಕಂಪನಿಗಳಲ್ಲೂ ಈ ಔಷಧಿಗಳು ಲಭ್ಯವಿಲ್ಲ.

ಈ ಸಮಸ್ಯೆಗೆ ಚಿಕಿತ್ಸೆ ನೀಡಲು ಬಳಸುವ ಆಂಪೋಟೆರಿಸಿನ್ ಇಂಜಕ್ಷನ್ ಗೆ ಅಗತ್ಯವಾದ ಕಚ್ಚಾವಸ್ತುಗಳು ಅಮೇರಿಕಾದಿಂದ ಬರಬೇಕಿದ್ದು, ಸದ್ಯ ವಿಮಾನಯಾನ ಸೌಲಭ್ಯಗಳು ಸ್ಥಗತಿಗೊಂಡಿರೋದರಿಂದ ಕಚ್ಚಾವಸ್ತುಗಳ ಕೊರತೆಯೂ ಕಾಡುತ್ತಿದೆ.

ಸೂರತ್ ನಲ್ಲಿ ಈ ಸೋಂಕಿನಿಂದ ಈಗಾಗಲೇ 8 ಜನರು ಕಣ್ಣಿನ ದೃಷ್ಟಿಕಳೆದುಕೊಂಡಿದ್ದಾರೆ. ಹೀಗಾಗಿ ಕೊರೋನಾದಿಂದ ಚೇತರಿಸಿಕೊಂಡವರು ಹಾಗೂ ಇತರರು ದೇಹದ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವತ್ತ ಗಮನ ಕೊಡಿ ಎಂದು ವೈದ್ಯರು ಹಾಗೂ ಸರ್ಕಾರ ಮನವಿ ಮಾಡಿದೆ.

RELATED ARTICLES

Most Popular