ಸಿಇಟಿ ಪರೀಕ್ಷೆಗಳು ಮುಂದೂಡಿಕೆ : ಕೆಇಎ ಮಹತ್ವದ ಆದೇಶ

ಬೆಂಗಳೂರು : ಕೊರೊನಾ ವೈರಸ್ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಸಿಇಟಿ ಪರೀಕ್ಷೆಗಳನ್ನು ಮುಂದೂಡಿಕೆ ಮಾಡಿ ಕೆಇಎ ಆದೇಶ ಹೊರಡಿಸಿದೆ.

ಜು.7,8,9 ರಂದು ಸಿಇಟಿ ಪರೀಕ್ಷೆಗಳು ನಿಗದಿ ಯಾಗಿತ್ತು. ಆದರೆ ಕೊರೊನಾ ಸೋಂಕಿನ ಸಂಖ್ಯೆ ತೀವ್ರವಾಗಿ ಹರಡುತ್ತಿರುವ ಹಿನ್ನೆಲೆ ಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪರೀಕ್ಷೆಗಳನ್ನು ಮುಂದೂಡಿಕೆ ಮಾಡಿದೆ. ಆ.28,29, 30 ರಂದು ಪರೀಕ್ಷೆ ನಡೆಸುವುದುದಾಗಿ ತಿಳಿಸಿದೆ.

ಈಗಾಗಲೇ ಕೊರೊನಾ ವೈರಸ್ ಸೋಂಕಿನ ಹಿನ್ನೆಲೆ ಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯನ್ನ ಮುಂದೂಡಿಕೆ ಮಾಡಲಾಗಿತ್ತು. ಇದೀಗ ಸಿಇಟಿ ಪರೀಕ್ಷೆಯನ್ನೂ ಕೂಡ ಮುಂದೂಡಲಾಗಿದೆ.

Comments are closed.