ನವದೆಹಲಿ : ದೇಶದಾದ್ಯಂತ ಫೆಬ್ರವರಿ 15ರಿಂದ ಎಲ್ಲಾ ಟೋಲ್ ಗಳಲ್ಲಿಯೂ ಫಾಸ್ಟ್ಯಾಗ್ ಕಡ್ಡಾಯಗೊಳಿಸ ಲಾಗುತ್ತಿದೆ. ಹೀಗಾಗಿ ಇನ್ಮುಂದೆ ಕಡ್ಡಾಯವಾಗಿ ವಾಹನಗಳು ನಗದು ರಹಿತವಾಗಿ ಪ್ರಯಾಣಿಸಬೇಕಾಗಿದೆ. ಆದರೆ ದಿವ್ಯಾಂಗರಿಗೆ ಮಾತ್ರ ಟೋಲ್ ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ.
ಇದುವರೆಗೆ ಸುಪ್ರೀಂ ಕೋರ್ಟ್ ನ್ಯಾಯಾಧೀಶರು, ಹೈಕೋರ್ಟ್ ನ್ಯಾಯಾಧೀಶರು, ಸಂಸದರು, ಶಾಸಕರು, ಮುಖ್ಯ ಕಾರ್ಯದರ್ಶಿಗಳು, ಕೇಂದ್ರ ಸರ್ಕಾರದ ಕಾರ್ಯದರ್ಶಿಗಳು ಮತ್ತು ಅಗತ್ಯ ಸೇವೆಗಳಿಗೆ ನಿಯೋಜಿಸಲಾದ ವಾಹನಗಳಿಗೆ ಮಾತ್ರವರೆ ಉಚಿತ ಫಾಸ್ಟ್ಯಾಗ್ ಲಭ್ಯವಿದೆ. ಆದ್ರೀಗ ವಿಕಲಚೇತನರಿಗೆ ಕೂಡ ಈ ಸೌಲಭ್ಯ ನೀಡಲಾಗಿದ್ದು ಉಚಿತ ಫಾಸ್ಟ್ಯಾಗ್ ಸೌಲಭ್ಯ ಪಡೆಯಬಹುದಾಗಿದೆ.
ಪ್ರಸಕ್ತ ಜನಗಣತಿಯ ಪ್ರಕಾರ ದೇಶದಲ್ಲಿ ಒಟ್ಟು 2.7 ಕೋಟಿ ಜನರನ್ನು ವಿಕಲಚೇತನರೆಂದು ಗುರುತಿಸಲಾಗಿದೆ. ಆದರೆ ಇದರಲ್ಲಿ ಹಲವು ಮಂದಿ ವಾಹನ ಚಾಲನೆ ಮಾಡುತ್ತಿದ್ದಾರೆ. ಇಂತಹ ವ್ಯಕ್ತಿಗಳು ಇನ್ಮುಂದೆ ವಿಕಲಚೇತನರ ಸಬಲೀಕರಣ ಇಲಾಖೆಯಿಂದ ನಿರ್ದಿಷ್ಟಪಡಿಸಿದ ಪ್ರಮಾಣಪತ್ರವನ್ನು ಹೊಂದಿದ ವ್ಯಕ್ತಿಗಳ ವಾಹನಗಳಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ರಸ್ತೆಗಳಲ್ಲಿ ಶುಲ್ಕ ಶೂನ್ಯವಾಗಿರುತ್ತದೆ. ದಿವ್ಯಾಂಗರು (ವಿಭಿನ್ನ ಸಾಮರ್ಥ್ಯ ಹೊಂದಿದವರಿಗೆ) ಫಾಸ್ಟ್ಯಾಗ್ ಉಚಿತವಾಗಿದ್ದು, ದೇಶದಾದ್ಯಂತ ಯಾವುದೇ ಟೋಲ್ ಗಳಲ್ಲಿ ಶುಲ್ಕ ಪಾವತಿಸುವ ಅಗತ್ಯವಿರುವುದಿಲ್ಲ.
ಆದರೆ ದಿವ್ಯಾಂಗರ ಹೆಸರಲ್ಲಿ ನೋಂದಾಯಿಸಲ್ಪಟ್ಟ ವಾಹನಗಳಿಗೆ ಮಾತ್ರವೇ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ. ಅಲ್ಲದೇ ತಮ್ಮ ವಾಹನಗಳಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಶೂನ್ಯ ವಹಿವಾಟು ಅಥವಾ ಉಚಿತ ಫಾಸ್ಟ್ಯಾಗ್ ಪಡೆದುಕೊಳ್ಳಬೇಕಾಗಿದೆ.
ರಾಷ್ಟ್ರೀಯ ಹೆದ್ದಾರಿ ಶುಲ್ಕ ನಿಯಮಗಳ ಪ್ರಕಾರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಅಂತಹ ವಾಹನಗಳಿಗೆ ಶುಲ್ಕ ಪಾವತಿಯಿಂದ ವಿನಾಯಿತಿ ನೀಡುವ ಅವಕಾಶ ಒದಗಿಸಿದೆ. ದೈಹಿಕ ವಿಕಲಚೇತನರ ಬಳಕೆಗಾಗಿ ಮಾರ್ಪಡಿಸಿದ ವಾಹನಗಳಿಗೆ ತೆರಿಗೆ ಪಾವತಿಯಿಂದ ವಿನಾಯಿತಿ ನೀಡಲಾಗಿದೆ. ಇಂತಹ ವಾಹನಗಳನ್ನು ಅಮಾನ್ಯ ವಾಹನ ಎಂದು ಹೇಳಲಾಗಿದೆ