ನಿತ್ಯಭವಿಷ್ಯ : 11-01-2021

ಮೇಷರಾಶಿ
ನಾನಾ ರೂಪದಲ್ಲಿ ಧನಾಗಮನ, ಖರ್ಚುಗಳ ಮೇಲೆ ಹಿಡಿತವಿರಲಿ, ಸರಕಾರಿ ಕೆಲಸ ಕಾರ್ಯಗಳು ಕೈಗೂಡಲಿವೆ, ಆರೋಗ್ಯದಲ್ಲಿ ಚೇತರಿಕೆ, ಅಕ್ಕಪಕ್ಕದವರೊಂದಿಗೆ ಉತ್ತಮ ಬಾಂಧವ್ಯ, ಶುಭಮಂಗಲ ಕಾರ್ಯಕ್ಕಾಗಿ ಓಡಾಟವಿರುತ್ತದೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ, ವಿಪರೀತ ಖರ್ಚುಗಳು ನಿಮ್ಮನ್ನು ಚಿಂತೆಗೀಡು ಮಾಡುವ ಸಾಧ್ಯತೆಯಿದೆ.

ವೃಷಭರಾಶಿ
ಆಕಸ್ಮಿಕವಾಗಿ ದೂರ ಸಂಚಾರ, ಆರೋಗ್ಯದಲ್ಲಿ ಸುಧಾರಣೆ, ಉದಾಸೀನ ಬೇಡ, ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ಇರಲಿ, ಕ್ರೀಡಾಪಟುಗಳಿಗೆ ಯಶಸ್ಸು, ಸಾಂಸಾರಿಕವಾಗಿ ಸಣ್ಣಪುಟ್ಟಗೊಂಡ, ವೃತ್ತಿರಂಗದಲ್ಲಿ ಪ್ರಗತಿ, ನಿಮ್ಮ ಪರಿಶ್ರಮದಿಂದ ಯಶಸ್ಸು, ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಯತ್ನ ಬಲ ಅಗತ್ಯ.

ಮಿಥುನರಾಶಿ
ವ್ಯಾಪಾರ, ವ್ಯವಹಾರದಲ್ಲಿ ಹೆಚ್ಚಿನ ಲಾಭ, ಯೋಗ್ಯ ವಯಸ್ಖರಿಗೆ ಕಂಕಣಬಲ ಕೂಡಿಬರಲಿದೆ. ಅಡೆತಡೆಗಳಿದ್ದರೂ ಕೂಡ ಕಾರ್ಯಾನುಕೂಲವಾಗಲಿದೆ, ವಿದ್ಯಾರ್ಥಿ ವರ್ಗಕ್ಕೆ ಪ್ರಗತಿ ಕಂಡುಬರಲಿದೆ, ಕರಕುಶಲ ಹಾಗೂ ಕೈಗಾರಿಕಾ ವೃತ್ತಿಯವರಿಗೆ ಲಾಭ, ಸಾಂಸಾರಿಕವಾಗಿ ಸುಖ ವೃದ್ದಿಯಾಗಲಿದೆ.

ಕಟಕರಾಶಿ
ಮನೆಯಲ್ಲಿ ಸಂತಸ, ಸಂಭ್ರಮದ ವಾತಾವರಣ, ಸ್ವ ಉದ್ಯೋಗಸ್ಥರಿಗೆ ಹೆಚ್ಚಿನ ಪರಿಶ್ರಮದಿಂದ ಗಳಿಕೆ, ವೃತ್ತಿರಂಗದಲ್ಲಿ ಕಾರ್ಯದಕ್ಷತೆಯಿಂದ ಮೇಲಾಧಿಕಾರಿಗಳಿಂದ ಪ್ರಶಂಸೆ, ಇಚ್ಚಿತ ಕಾರ್ಯಗಳಲ್ಲಿ ಯಶಸ್ಸು ಪಡೆಯುವಿರಿ, ವೈವಾಹಿಕ ಮಾತುಕತೆಯಲ್ಲಿ ಯಶಸ್ಸು, ರಾಜಕಾರಣಿಗಳಿಗೆ ಸೂಕ್ತ ಬೆಂಬಲ, ಹೊಸ ಉದ್ಯಮಕ್ಕೆ ಕೈಹಾಕಲು ಸೂಕ್ತ ಕಾಲವಲ್ಲ.

ಸಿಂಹರಾಶಿ
ಆರ್ಥಿಕವಾಗಿ ಖರ್ಚು ವೆಚ್ಚಗಳಿದ್ದರೂ ಕೂಡ ಹಣಕಾಸಿನ ಪರಿಸ್ಥಿತಿ ನಿರಾಳವಾಗಲಿದೆ, ನಿಮಗಿರುವ ವಿರೋಧಗಳು ಹಂತ ಹಂತವಾಗಿ ಕರಗಿ ಹೋಗಲಿದೆ, ರಾಹುಬಲ ಉತ್ತಮವಾಗಿರೋದ್ರಿಂದಾಗಿ ಮುಂದೆ ಒಳ್ಳೆಯದಾಗಲಿದೆ ಅನ್ನೋದು ನಿಮ್ಮ ಗಮನಕ್ಕೆ ಬರಲಿದೆ, ಅವಿವಾಹಿತರಿಗೆ ಕಂಕಣಬಲ ಕೂಡಿಬರಲಿದೆ, ವಿದ್ಯಾರ್ಥಿಗಳಿಗೆ ಯಶಸ್ಸು, ದಿನಾಂತ್ಯಕ್ಕೆ ಶುಭ ಸುದ್ದಿ ಕೇಳುವಿರಿ.

ಕನ್ಯಾರಾಶಿ
ಶುಭಕಾರ್ಯಕ್ಕಾಗಿ ಹಿರಿಯರೊಂದಿಗೆ ಸಮಾಲೋಚನೆ, ಎಲ್ಲಾ ವಿಚಾರಗಳನ್ನೂ ಸಮಚಿತ್ತದಿಂದ ವ್ಯವಹರಿಸಿದ್ರೆ ಯಶಸ್ಸು, ಗೃಹ ನಿರ್ಮಾಣದ ಕಾರ್ಯಗಳಲ್ಲಿ ಪ್ರಗತಿ, ಆತ್ಮವಿಶ್ವಾಸದಿಂದ ಮುನ್ನೆಡೆದಲ್ಲಿ ಯಶಸ್ಸು, ಹೊಸ ವ್ಯವಹಾರಕ್ಕೆ ಕೈಹಾಕುವ ಮುನ್ನ ಯೋಚಿಸುವುದು ಒಳಿತು.

ತುಲಾರಾಶಿ
ಬಂದ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಿ, ಪ್ರಾಮಾಣಿಕತೆಗೆ ತಕ್ಕ ಪ್ರತಿಫಲ ದೊರೆಯಲಿದೆ, ನಿರಾಸೆಯ ಮನೋಭಾವವನ್ನು ಬಿಟ್ಟು ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಿ, ಆತ್ಮವಿಶ್ವಾಸದಿಂದ ಯಶಸ್ಸು, ಅನುಮಾನ, ಆತುರದ ನಿರ್ಧಾರಗಳಿಂದ ಕೆಲಸ ಕಾರ್ಯಗಳು ಕೈಕೊಡಲಿದೆ, ಜಾಣ್ಮೆಯಿಂದ ಕೆಲಸ ಮಾಡಿದ್ರೆ ಯಶಸ್ಸು ಕಟ್ಟಿಟ್ಟ ಬುತ್ತಿ.

ವೃಶ್ಚಿಕರಾಶಿ
ದೈವಾನುಗ್ರಹ ನಿಮ್ಮ ಪರವಾಗಿದೆ, ವೃತ್ತಿರಂಗದಲ್ಲಿ ನಿಮಗೆ ಕ್ರಿಯಾಶೀಲತೆಗೆ ಹಾಗೇ ನೀವಿಟ್ಟ ವಿಶ್ವಾಸ ಇವೆಲ್ಲ ಸಫ‌ಲತೆಯನ್ನು ಹೊಂದುವುದು, ಆರ್ಥಿಕ ಪರಿಸ್ಥಿತಿ ಏರುಪೇರಾದ್ರೂ ನಿಶ್ಚಿತ ರೂಪದಲ್ಲಿ ಆದಾಯ ವೃದ್ದಿ, ಸಾಮಾಜಿಕ ಕ್ಷೇತ್ರದಲ್ಲಿ ಜನಾನುರಾಗದ ಅನುಭವವಾಗುತ್ತದೆ, ಆತ್ಮೀಯರ ಸಹಕಾರದಿಂದ ಕಾರ್ಯಸಿದ್ಧಿ, ಚಿನ್ನಾಭರಣ ಸಂಗ್ರಹದಿಂದ ಯಶಸ್ಸು, ಅವಿವಾಹಿತರಿಗೆ ವಿವಾಹ ಕಂಕಣ ಭಾಗ್ಯ.

ಧನಸುರಾಶಿ
ನಿಮ್ಮ ಸಾಮರ್ಥ್ಯ ಹಾಗೂ ಪ್ರಯತ್ನವನ್ನು ಕೀಳಂದಾಜಿಸಬೇಡಿ, ಒಳ್ಳೆಯದು ನಿಮ್ಮದಾಗಲಿದೆ, ಜೀವನ ಶೈಲಿ ಹಾಗೂ ವಿಚಾರ ಚಿಂತನೆಯನ್ನು ಬದಲಿಸಿಕೊಳ್ಳಿ, ದೇವತಾನುಗ್ರಹದಿಂದ ತೆಗೆದುಕೊಳ್ಳುವ ಹೆಜ್ಜೆಗಳು ಸರಿದಾರಿಯಲ್ಲಿ ಮುನ್ನಡೆಸಲಿವೆ, ಆತ್ಮವಿಶ್ವಾಸದಿಂದ ಯಶಸ್ಸು, ಪ್ರಣಯಿಗಳಿಗೆ ಪ್ರೀತಿ, ಪ್ರೇಮಕ್ಕೆ ಪೂರಕವಾದ ಸಮಯ. ವಿದ್ಯಾರ್ಥಿಗಳು ಅಭ್ಯಾಸಬಲವನ್ನು ಹೆಚ್ಚಿಸಿಕೊಳ್ಳಲಿದ್ದಾರೆ.

ಮಕರರಾಶಿ
ಆಗಾಗ ನಿರಾಶಾ ಮನೋಭಾವದಿಂದ ಕೊರಗದಿರಿ. ಮುಖ್ಯವಾಗಿ ನಿಮ್ಮ ಕರ್ತವ್ಯ ಹಾಗೂ ಹೊಣೆಗಾರಿಕೆಯನ್ನು ಮರೆಯದಿರಿ. ಅಧಿಕ ರೀತಿಯ ಖರ್ಚುವೆಚ್ಚಗಳಿಂದ ಆತಂಕ ತಂದರೂ ಆಗಾಗ ಧನಾಗಮನದಿಂದ ಚೇತರಿಕೆ ತಂದುಕೊಡಲಿದೆ. ಕೆಲಸಕಾರ್ಯಗಳಲ್ಲಿ ವಿಘ್ನಗಳೇ ತೋರಿಬಂದರೂ ಧೈರ್ಯದಿಂದ ಎದುರಿಸುವ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಿರಿ. ಯೋಗ್ಯ ನೆಂಟಸ್ತಿಕೆಗಳು ಅವಿವಾಹಿತರಿಗೆ ಕಂಕಣಭಾಗ್ಯವನ್ನು ಒದಗಿಸುವುವು.

ಕುಂಭರಾಶಿ
ರ್ಥಿಕವಾಗಿ ತುಸು ನೆಮ್ಮದಿ, ಚೇತರಿಕೆ ಇರುತ್ತದೆ, ಕಾರ್ಯಗಳಿಗೋಸ್ಕರ ಅಧಿಕ ಸುತ್ತಾಟವಾದರೂ ನೆಮ್ಮದಿ ತಂದೀತು. ವೈವಾಹಿಕ ಸಂಬಂಧಗಳಲ್ಲಿ ಅಡೆತಡೆಗಳಿರುತ್ತದೆ, ಆಕೋರ್ಟು ಕಚೇರಿಗಳಲ್ಲಿನ ಕೆಲಸಕಾರ್ಯಗಳಲ್ಲಿ ಧನವ್ಯಯವಿದ್ದರೂ ಯಶಸ್ಸು ನಿಮ್ಮದಾಗಲಿದೆ, ಮಕ್ಕಳಿಂದ ಸುಖ ಹಾಗೂ ವಾಹನ ಸುಖ ಸಾಧ್ಯ, ನಿರೀಕ್ಷಿತ ಚಿಂತನೆಗಳು ಹಂತ ಹಂತವಾಗಿ ನೆರವೇರಲಿದೆ.

ಮೀನರಾಶಿ
ನೂತನ ವಾಹನ ಖರೀದಿ ಯೋಗ, ವೃತ್ತಿರಂಗದಲ್ಲಿ ನಿರೀಕ್ಷಿತ ಉನ್ನತ ಸ್ಥಾನ ಪ್ರಾಪ್ತಿಯಾಗಿ ಕಂಟ್ರಾಕ್ಟ್ ವೃತ್ತಿಯವರಿಗೆ ಧನಾಗಮನ, ಸಾಹಸ, ಕ್ರೀಡಾ ಮನೋಭಾವಕ್ಕೆ ಮನ್ನಣೆ ಸಿಗಲಿದೆ, ಅವಿವಾಹಿತರಿಗೆ ಹೊಸ ಸಂಬಂಧಗಳು ಕೂಡಿಬರಲಿದೆ, ವಿದ್ಯಾರ್ಥಿ ಜೀವನದಲ್ಲಿ ಹೊಸ ಉತ್ಸಾಹ ವರ್ಧಿಸಲಿದೆ, ಕಾರ್ಯಶೀಲರಾದ ನಿಮ್ಮ ಪ್ರಯತ್ನಬಲವೂ ಕಾರ್ಯಸಾಧನೆಗೆ ಅನುಗುಣವಾಗಲಿದೆ.

Comments are closed.