ರಾಜಮಂಡ್ರಿ : ವಿವಾಹ ಸಮಾರಂಭಕ್ಕೆ ತೆರಳಿ ವಾಪಾಸಾಗುತ್ತಿದ್ದ ವೇಳೆಯಲ್ಲಿ ಘಾಟ್ ರಸ್ತೆಯಲ್ಲಿ ವಾಹನದ ಬ್ರೇಕ್ ಫೈಲ್ ಆಗಿ ನಡೆದ ದುರಂತದಲ್ಲಿ 6 ಮಂದಿ ಸಾವನ್ನಪ್ಪಿ ಮೂವತ್ತು ಅಧಿಕ ಮಂದಿ ಗಾಯಗೊಂಡಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.

ಆಂಧ್ರ ಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಪೂರ್ವ ಗೋದಾವರಿ ಜಿಲ್ಲೆಯ ಕಲ್ಯಾಣ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿವಾಹ ಕಾರ್ಯಕ್ರಮ ನಡೆದಿತ್ತು. ವಿವಾಹವನ್ನು ಮುಗಿಸಿ ಕೊಂಡು ವಾಹನದಲ್ಲಿ ಸುಮಾರು 30ಕ್ಕೂ ಅಧಿಕ ಮಂದಿ ವಾಪಾಸಾಗುತ್ತಿದ್ದ ರು. ಈ ವೇಳೆಯಲ್ಲಿ ಗೋಕವರಂ ಮಂಡಲದ ತಂತಕೊಂಡ ಗ್ರಾಮದ ಬಳಿಯಲ್ಲಿನ ಘಾಟ್ ರಸ್ತೆಯಲ್ಲಿ ವಾಹನ ಚಲಿಸು ತ್ತಿದ್ದಂತೆಯೇ ವಾಹನದ ಬ್ರೇಕ್ ಫೈಲ್ ಆಗಿದೆ. ಈ ವೇಳೆಯಲ್ಲಿ ಅಪಾಯ ಕಾರಿ ತಿರುವಿನಲ್ಲಿ ವಾಹನ ಹಿಮ್ಮುಖವಾಗಿ ಚಲಿಸಿ ಈ ದುರಂತ ಸಂಭವಿಸಿದೆ.

ಘಟನೆಯಲ್ಲಿ 6 ಮಂದಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದರೆ, 30 ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ತನಿಖೆಯನ್ನು ನಡೆಸುತ್ತಿದ್ದಾರೆ.