ಹೈದ್ರಾಬಾದ್: ಯುವಜನತೆಯನ್ನು ಗಮನದಲ್ಲಿಟ್ಟುಕೊಂಡು ಆನ್ ಲೈನ್ ಗೇಮ್ ಗಳನ್ನು ಬ್ಯಾನ್ ಮಾಡುವ ತನ್ನ ನಿರ್ಧಾರವನ್ನು ಆಂಧ್ರಪ್ರದೇಶ್ ಸರ್ಕಾರ ಕಾಯಿದೆಯಾಗಿ ಜಾರಿಗೆ ತಂದಿದೆ.

ಇನ್ಮುಂದೆ ಆಂಧ್ರಪ್ರದೇಶದ ಲ್ಲಿ ಯಾವುದೇ ರೀತಿಯ ಆನ್ ಲೈನ್ ಗೇಮ್ ಗಳನ್ನು ಆಡುವುದು ಹಾಗೂ ಆಡುವಂತೆ ಪ್ರೇರೇಪಿಸುವುದು, ಗೇಮ್ ಗಳನ್ನುಉತ್ತೇಜಿಸುವುದು, ಗೇಮ್ ಗಳಿಗೆ ಸಂಬಂಧಿಸಿದ ಜಾಹೀರಾತುಗಳನ್ನು ಪ್ರಕಟಿಸುವುದು ಶಿಕ್ಷಾರ್ಹ ಅಪರಾಧ ಎಂದು ಸಿಎಂ ವೈ.ಎಸ್. ಜಗನ್ ಮೋಹನ್ ರೆಡ್ಡಿ ಹೇಳಿದ್ದಾರೆ.

ಆನ್ ಲೈನ್ ಗೇಮ್ ಗಳಿಂದ ಯುವಜನತೆ ದುಡಿದ ಹಣವನ್ನು ಹೂಡಿಕೆಮಾಡಿ ಕಳೆದುಕೊಳ್ಳುತ್ತಿರುವುದು ಹಾಗೂ ವಿದ್ಯಾರ್ಥಿಗಳು ಕೂಡ ಆನ್ ಲೈನ್ ಗೇಮ್ ದಾಸರಾಗುತ್ತಿರುವುದರಿಂದ ಸರ್ಕಾರ ಆನ್ ಲೈನ್‌ಗೇಮ್ ನಿಷೇಧಿಸುವ ಆಂಧ್ರಪ್ರದೇಶ ಗೇಮಿಂಗ್ ತಿದ್ದುಪಡಿ ಕಾಯ್ದೆ 2020 ನ್ನು ಸದನದ ಒಪ್ಪಿಗೆಯೊಂದಿಗೆ ಅಂಗೀಕರಿಸಿದೆ.

ಆನ್ ಲೈನ್ ಗೇಮ್ ಗಳಿಂದ ರಾಜ್ಯದಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಜನರು ಹಣಕಳೆದುಕೊಳ್ಳುತ್ತಿದ್ದಾರೆ. ಅಲ್ಲದೇ ಈ ರೀತಿಯ ವೆಬ್ ಸೈಟ್ ಗಳು ಆಂತರಿಕಭದ್ರತೆಗೂ ಧಕ್ಕೆ ತರೋದರಿಂದ ಸರ್ಕಾರ ನೆಯ ನಿಷೇಧದ ನಿರ್ಣಯಕೈಗೊಂಡಿದೆ.

ನಿಯಮ ಉಲ್ಲಂಘಿಸುವವರಿಗೆ ಗರಿಷ್ಠ ೩ ವರ್ಷಗಳ ವರೆಗೆ ಶಿಕ್ಷೆ ವಿಧಿಸುವ ಅವಕಾಶ ವನ್ನು ಈ ಕಾನೂನು ಹೊಂದಿದೆ.