ಮುಂಬೈ: ಸಾಮಾನ್ಯವಾಗಿ ಎಪ್ರಿಲ್ 1 ನ್ನು ವಿಶ್ವದಾದ್ಯಂತ ಮೂರ್ಖರ ದಿನವನ್ನಾಗಿ ಆಚರಿಸಲಾಗುತ್ತದೆ. ಸೆಲೆಬ್ರಿಟಿಗಳು, ರಾಜಕಾರಣಿಗಳು, ಜನಸಾಮಾನ್ಯರು ಸೇರಿದಂತೆ ಎಲ್ಲಾ ವರ್ಗದ ಜನರು ಈ ದಿನ ಸುಳ್ಳು ಸುದ್ದಿಗಳನ್ನು ಹಬ್ಬಿಸಿ ಮೂರ್ಖರನ್ನಾಗಿ ಮಾಡ್ತಾರೆ.

ಮಾಧ್ಯಮಗಳು ಕೂಡ ಇದಕ್ಕೆ ಹೊರತಾಗಿಲ್ಲ. ಮಾಧ್ಯಮಗಳಲ್ಲಿಯೂ ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡೋ ಮೂಲಕ ಜನರನ್ನು ಪೂಲ್ ಮಾಡಲಾಗ್ತಿತ್ತು. ಆದರೆ ಈ ಬಾರಿ ಕೊರೊನಾ ವೈರಸ್ ಸೋಂಕು ಹರಡುತ್ತಿರೋ ಹಿನ್ನೆಲೆಯಲ್ಲಿ ಮೂರ್ಖರ ದಿನಕ್ಕೆ ಬ್ರೇಕ್ ಬಿದ್ದಿದೆ.

ಎಪ್ರೀಲ್ 1ರ ಮೂರ್ಖರ ದಿನವನ್ನೇ ನೆಪವಾಗಿಟ್ಟುಕೊಂಡು ಸುಳ್ಳು ಸುದ್ದಿಯನ್ನು ಹಬ್ಬಿಸಿದ್ರೆ, ಯಾರನ್ನಾದ್ರೂ ಪೂಲ್ ಮಾಡಿದ್ರೆ ಅಂತವರು ಕಠಿಣ ಶಿಕ್ಷೆ ಎದುರಿಸಬೇಕಾಗುತ್ತದೆ. ಹೀಗಂತ ಮಹಾರಾಷ್ಟ್ರದ ಗೃಹ ಸಚಿವ ಅನಿಲ್ ದೇಶ್ ಮುಖ್ ಎಚ್ಚರಿಕೆ ನೀಡಿದ್ದಾರೆ.

ಕೊರೊನಾ ಭೀತಿಯಲ್ಲಿರುವಾಗ ಜನರಿಗೆ ಯಾರೂ ಕೂಡ ವದಂತಿ ಹಾಗೂ ತಪ್ಪು ಮಾಹಿತಿಯನ್ನು ನೀಡಬಾರದು. ಯಾರಾದ್ರೂ ಪೂಲ್ ಮಾಡಿದ್ರೆ ಅಂತವರಿಗೆ ತಕ್ಕ ಶಾಸ್ತಿಯಾಗೋದಂತೂ ಗ್ಯಾರಂಟಿ.