ಹೈದ್ರಾಬಾದ್ : ಅವರೆಲ್ಲಾ ಮಗಳ ಮದುವೆಗೆ ಬಟ್ಟೆ ಖರೀದಿಸಲು ಆಟೋದಲ್ಲಿ ತೆರಳುತ್ತಿದ್ದರು. ಆದರೆ ವಿಧಿ ಅವರ ಬಾಳಲ್ಲಿ ಅಟ್ಟಹಾಸ ಮೆರೆದಿದ್ದಾನೆ. ವಧು ಸೇರಿದಂತೆ ಕುಟುಂಬಸ್ಥರು ತೆರಳುತ್ತಿದ್ದ ಆಟೋಗೆ ಲಾರಿ ಢಿಕ್ಕಿ ಹೊಡೆದು 6 ಮಂದಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಹೈದ್ರಾಬಾದ್ ನ ಮೆಹಬೂಬಬಾದ್ ನಗರದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಮೃತರನ್ನು ಜುತೂತ್ ಕಾಸ್ನಾ, ಜತೂತ್ ಕಲ್ಹಾಣಿ, ವಧು ಪರಿಮಳಾ, ದಿವ್ಯಾ, ಪ್ರಸಾದ್, ಪ್ರದೀಪ್ ಹಾಗೂ ಆಟೋ ಚಾಲಕ ರಾಮು ಎಂದು ಗುರುತಿಸಲಾಗಿದೆ. ಮೃತಪಟ್ಟವರು ಎರ್ರಕುಂಟಾ ತಾಂಡಾದವರು ಎಂದು ತಿಳಿದುಬಂದಿದೆ.

ವಧುವನ್ನು ಕರೆದುಕೊಂಡು ಮನೆಯವರು ಬಟ್ಟೆ ಖರೀದಸೋದಕ್ಕೆ ತೆರಳಿದ್ದರು. ಆದರೆ ಆಟೋದಲ್ಲಿ ತೆರಳುತ್ತಿದ್ದಾಗ ವೇಗವಾಗಿ ಬಂದ ಲಾರಿ ಎದುರಿನಿಂದ ಢಿಕ್ಕಿ ಹೊಡೆದಿದೆ. ಘಟನೆಯಲ್ಲಿ 6 ಮಂದಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.