ಸೋಮವಾರ, ಏಪ್ರಿಲ್ 28, 2025
HomeBreakingಕಿಲಾಡಿ ಕುಳ್ಳನಿಗೆ ಸಿಕ್ಕಳು ಕುಳ್ಳಿ….! ಮದುವೆಗಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದ ಪ್ರಕರಣ ಸುಖಾಂತ್ಯ…!!

ಕಿಲಾಡಿ ಕುಳ್ಳನಿಗೆ ಸಿಕ್ಕಳು ಕುಳ್ಳಿ….! ಮದುವೆಗಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದ ಪ್ರಕರಣ ಸುಖಾಂತ್ಯ…!!

- Advertisement -

ತನಗೊಂದು ಮದುವೆ ಮಾಡಿಸಿ ಅಂತ ಖಾಕಿ ಪಡೆಗೆ ದುಂಬಾಲು ಬಿದ್ದಿದ್ದ ಕಿಲಾಡಿ ಕುಳ್ಳನಿಗೆ ಸರಿ ಜೋಡಿಯಾಗಬಲ್ಲ ಕುಳ್ಳಿಯೊಬ್ಬಳು ಸಿಕ್ಕಿದ್ದು ಈ ಕುಬ್ಜ ಜೋಡಿಯ ವಿವಾಹಕ್ಕೆ ವೇದಿಕೆ ಸಿದ್ಧವಾಗುತ್ತಿದೆ.

ಲಖ್ನೋದ ಶಾಮ್ಲಿ‌ ಜಿಲ್ಲೆಯ ೨ ಅಡಿ ಎತ್ತರದ ಕೃಷಿಕ ಅಜೀಂ ನನಗೆ ಮದುವೆ ವಯಸ್ಸಾಗಿದ್ದರೂ ಮನೆಯಲ್ಲಿ ಮದುವೆ ಮಾಡಿಸುತ್ತಿಲ್ಲ. ನನ್ನ‌ಮದುವೆಗೆ ನೆರವಾಗಿ ಎಂದು ಪೊಲೀಸರಿಗೆ ದುಂಬಾಲು ಬಿದ್ದಿದ್ದ.

ನನ್ನ ಮದುವೆಗಾಗಿ ಮನೆಯ ಸದಸ್ಯರು, ಪೋಷಕರು ಗಂಭೀರ ಪ್ರಯತ್ನ ಮಾಡುತ್ತಿಲ್ಲ ಎಂಬುದು ಅಜೀಂ ಆರೋಪವಾಗಿತ್ತು. ಇದೇ ಕಾರಣಕ್ಕೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದ ಅಜೀಂಗೆ ಪೊಲೀಸರು ಸಮಾಧಾನ ಹೇಳಿದ್ದರು.

೨ ಅಡಿಯ ಕುಬ್ಜ ಹಾಗೂ ದೈಹಿಕ ಸಮಸ್ಯೆ ಹೊಂದಿರುವ ಅಜೀಂ ಮದುವೆಗಾಗಿ ಪೊಲೀಸ್‌ ಠಾಣೆ‌ ಮೆಟ್ಟಿಲೇರಿದ ಸಂಗತಿ‌ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದಂತೆ ಘಾಜಿಯಾಪುರದ ರೆಹಾನಾ ಎಂಬ ಮಹಿಳೆಯರ ಮನೆಯವರಿಗೆ ಈ ಸಂಗತಿ ಗೊತ್ತಾಗಿತ್ತು.

ರೆಹನಾ ಕೂಡ ಕೇವಲ ೨ ಅಡಿ ಎತ್ತರವಿದ್ದು ಸಧ್ಯ ಮನೆಗೆಲಸ ಮಾಡಿ ಬದುಕು ಕಟ್ಟಿಕೊಂಡಿದ್ದಾರೆ. ಹೀಗಾಗಿ ಪರಸ್ಪರ ಅಜೀಂ ಮತ್ತು ರೆಹನಾ ಕುಟುಂಬದವರು ಮದುವೆ ಮಾತುಕತೆ ನಡೆಸಿದ್ದು ಇನ್ನೇನು ಮದುವೆಗೆ ದಿನಾಂಕ ಅಂತಿಮಗೊಳ್ಳಲಿದೆ ಎನ್ನಲಾಗುತ್ತಿದೆ.

ಅಜೀಂ‌ ಮದುವೆಗಾಗಿ ಪೊಲೀಸ್ ಠಾಣೆಗೆ ಬಂದಾಗ ಆತನ ವಿಡಿಯೋ ಸೋಷಿಯಲ್ ‌ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ವಿಡಿಯೋ ನೋಡಿ ರೆಹನಾ ಅಜೀಂರನ್ನು ಮದುವೆಯಾಗಲು ಒಪ್ಪಿದ್ದಾಳಂತೆ.ಒಟ್ಟಿನಲ್ಲಿ ಕಿಲಾಡಿ ಕುಳ್ಳ ನ ಮದುವೆ ನಿಶ್ಚಯ ಆಗಿರೋದು ಶಾಮ್ಲಿ ಪೊಲೀಸರಿಗೆ ಸಮಾಧಾನ ತಂದಿದ್ದು ಅಯ್ಯಪ್ಪ ಅಂತ ನಿಟ್ಟುಸಿರು ಬಿಡ್ತಿದ್ದಾರಂತ

RELATED ARTICLES

Most Popular