ಟಾಲಿವುಡ್ ನಲ್ಲಿ ಟಗರು ಸುಂದರಿ….! ತೆಲುಗಿಗೆ ಹಾರಿದ ಮಾನ್ವಿತಾ ಕಾಮತ್ …!!

ಸ್ಯಾಂಡಲ್ ವುಡ್ ನಟಿಮಣಿಯರು ಸದ್ಯ ಟಾಲಿವುಡ್,ಬಾಲಿವುಡ್ ನತ್ತ ಚಿತ್ತ ನೆಟ್ಟಂತಿದ್ದು ರಶ್ಮಿಕಾ,ನಭಾ,ರಚಿತಾರಾಮ್ ಬಳಿಕ ಇದೀಗ ಟಗರು ಪುಟ್ಟಿ ಖ್ಯಾತಿಯ ಮಾನ್ವಿತಾ ಕೂಡ ತೆಲುಗಿಗೆ ಹಾರಿದ್ದಾರೆ.

ತೆಲುಗಿನ ಮಲ್ಲಿ‌ ಮೊದಲೈಂದಿ ಸಿನಿಮಾದ ಮೂಲಕ ಅದೃಷ್ಟ ಪರೀಕ್ಷೆಗೆ ಮುಂದಾಗಿರುವ ಮಾನ್ವಿತಾ ಚಿತ್ರದ ಮುಹೂರ್ತದ ಪೋಟೋಗಳನ್ನು ಸೋಷಿಯಲ್‌ಮೀಡಿಯಾದಲ್ಲಿ‌ಹಂಚಿಕೊಂಡಿದ್ದಾರೆ.

ಮಾನ್ವಿತಾಗೆ ಇದು ತೆಲುಗಿನ ಚೊಚ್ಚಲ‌ ಚಿತ್ರವಾಗಿದ್ದು, ಯಾರಿಗೆ ಜೋಡಿಯಾಗಿ‌ ನಟಿಸುತ್ತಿದ್ದಾರೆ ಎಂಬ ಮಾಹಿತಿಗಳು ಇನ್ನೂ ಬಹಿರಂಗವಾಗಿಲ್ಲ.

ಕನ್ನಡದಲ್ಲಿ ಇಂಡಿಯಾ ವರ್ಸರ್ ಇಂಗ್ಲೆಂಡ್ ಬಳಿಕ ಯಾವ ಸಿನಿಮಾದಲ್ಲೂ ಕಾಣಿಸಿಕೊಳ್ಳದ ಮಾನ್ವಿತಾ ಹಲವಾರು ಪೋಟೋಶೂಟ್ ಗಳ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಮಿಂಚಿದ್ದರು.

ಈಗ ತೆಲುಗಿನ ಚಿತ್ರಕ್ಕೆ ಜೈ ಎಂದಿದ್ದಾರೆ.

Comments are closed.