Ramesh Jarkiholi:ಮತ್ತೆ ಸಿಡಿದ ಅಶ್ಲೀಲ ಸಿಡಿ ಪ್ರಕರಣ….! ಎಸ್ಐಟಿ ಕಾರ್ಯವೈಖರಿ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಸಂತ್ರಸ್ಥೆ…!!

ಬಹುತೇಕ ತಣ್ಣಗಾಗಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ದೀಢೀರ್ ಸಂಚಲನ ಉಂಟಾಗಿದೆ. ತನಿಖಾ ಸಂಸ್ಥೆಯ ಕಾರ್ಯವೈಖರಿ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರುವ ಮೂಲಕ ಸಂತ್ರಸ್ಥ ಯುವತಿ ಎಸ್ಐಟಿಯ ಹಾಗೂ ರಮೇಶ್ ಜಾರಕಿಹೊಳಿಗೆ ಶಾಕ್ ನೀಡಿದ್ದಾರೆ.

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಬ್ಲಾಕ್ ಮೇಲ್ ಪ್ರಕರಣದ ಸಂತ್ರಸ್ಥ ಯುವತಿ ಹೊಸ ಅರ್ಜಿಯೊಂದಿಗೆ ರಾಜ್ಯ ಉಚ್ಛನ್ಯಾಯಾಲಯದ ಕದ ತಟ್ಟಿದ್ದು, ಅರ್ಜಿಯಲ್ಲಿ ರಮೇಶ್ ಜಾರಕಿಹೊಳಿ ನೀಡಿದ ದೂರನ್ನು ಪ್ರಶ್ನಿಸಿದ್ದಾರೆ ಎನ್ನಲಾಗಿದೆ.

ಸುಪ್ರೀಂ ಕೋರ್ಟ್ ವಕೀಲರಾದ ಸಂಕೇತ ಏಣಗಿ ಮೂಲಕ ಸಂತ್ರಸ್ಥ ಯುವತಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ಸದಾಶಿವನಗರ ಪೊಲೀಸ್ ಠಾಣೆಯ ಮೊಕದ್ದಮೆ ಸಂಖ್ಯೆ 21/2021 ನ್ನು ಪ್ರಶ್ನಿಸಿದ್ದಾರೆ.

ಹೈಕೋರ್ಟ್ ಗೆ ಸಲ್ಲಿಕೆಯಾದ ಅರ್ಜಿಯಲ್ಲಿ ಸಂತ್ರಸ್ಥ ಯುವತಿ,  ಎಸ್ಐಟಿಯ ತನಿಖಾ ವೈಖರಿಯನ್ನು ಪ್ರಶ್ನೆ ಮಾಡಿದ್ದು, ನಾನು ಹಾಗೂ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ನೀಡಿದ ದೂರನ್ನು  ಮುಚ್ಚಿಹಾಕ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಅಷ್ಟೇ ಅಲ್ಲ, ಪ್ರಕರಣದ ತನಿಖೆಯ ಪ್ರತಿ ಹಂತದಲ್ಲೂ ಸರ್ಕಾರ ಹಸ್ತಕ್ಷೇಪ ಮಾಡುತ್ತಿದೆ.  ಅಲ್ಲದೇ ಪ್ರಕರಣದಲ್ಲಿ  ಮಾಜಿ ಸಚಿವ ರಮೇಶ್ ಜಾರಕಿಹೊಳಿಯವರಿಗೆ  ಕ್ಲೀನ್ ಚಿಟ್ ನೀಡಲು ಸರ್ಕಾರ ಹಾಗೂ  ಎಸ್ಐಟಿ ಸಿದ್ಧತೆ ನಡೆಸಿದೆ ಎಂದು ಸಂತ್ರಸ್ಥ ಯುವತಿ ಆರೋಪಿಸಿದ್ದಾರೆ.

ಪ್ರಕರಣದ ಕುರಿತು ಸಲ್ಲಿಕೆಯಾದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ನ ಏಕಸದಸ್ಯ ಪೀಠ,  ವಿಶೇಷ ತನಿಖಾ ದಳ ಎಸ್ಐಟಿ ಹಾಗೂ ಪ್ರಕರಣದ ಪ್ರಮುಖ ಆರೋಪಿ ಸ್ಥಾನದಲ್ಲಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ತುರ್ತು ನೊಟೀಸ್ ಜಾರಿ ಮಾಡಿದೆ.

ವಿಚಾರಣೆಯನ್ನು ಜೂನ್ 21 ಕ್ಕೆ ಮುಂದೂಡಿರುವ ನ್ಯಾಯಾಲಯ, ನೊಟೀಸ್ ಗೆ 21 ರೊಳಗೆ ಉತ್ತರಿಸುವಂತೆ ಎಸ್ಐಟಿ ಹಾಗೂ ರಮೇಶ್ ಜಾರಕಿಹೊಳಿಗೆ ಆದೇಶಿಸಿದೆ.

Comments are closed.