ಮಂಗಳವಾರ, ಏಪ್ರಿಲ್ 29, 2025
HomeBreakingಮಾಜಿ ಮೇಯರ್ ಸಂಪತ್ ರಾಜ್ ಅರೇಸ್ಟ್…! ಬಿಜೆಪಿ ಅಧಿಕಾರ ದುರುಪಯೋಗ ಮಾಡ್ತಿದೆ ಎಂದ ಡಿಕೆಶಿ…!!

ಮಾಜಿ ಮೇಯರ್ ಸಂಪತ್ ರಾಜ್ ಅರೇಸ್ಟ್…! ಬಿಜೆಪಿ ಅಧಿಕಾರ ದುರುಪಯೋಗ ಮಾಡ್ತಿದೆ ಎಂದ ಡಿಕೆಶಿ…!!

- Advertisement -

ಬೆಂಗಳೂರು: ಡಿಜೆಹಳ್ಳಿ ಹಾಗೂ ಕೆಜಿಹಳ್ಳಿ ಬೆಂಕಿ,ಗಲಭೆ ಪ್ರಕರಣದ ತಿಂಗಳುಗಳ ಬಳಿಕ ಪ್ರಕರಣದ ಪ್ರಮುಖ ಆರೋಪಿ ಹಾಗೂ ಮಾಜಿ ಮೇಯರ್ ಸಂಪತ್ ರಾಜ್ ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆದರೆ ಈ ಬಂಧನವನ್ನು ರಾಜಕೀಯ ಪ್ರೇರಿತ ಎಂದಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಬಿಜೆಪಿ ಕಾಂಗ್ರೆಸ್ ನಾಯಕರನ್ನು ಟಾರ್ಗೆಟ್ ಮಾಡ್ತಿದೆ ಎಂದ ಗಂಭೀರ ಆರೋಪ ಮಾಡಿದ್ದಾರೆ.

ಮಾಜಿ ಮೇಯರ್ ಸಂಪತ್ ರಾಜ್ ನನ್ನು ಸಿಸಿಬಿ ಪೊಲೀಸರು ಸೋಮವಾರ ರಾತ್ರಿ ಬಂಧಿಸಿದ್ದು, ಸಂಪತ್ ರಾಜ್ ಬಂಧನದ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್ ಸುದ್ದಿಗೋಷ್ಠಿ ನಡೆಸಿದ್ದು,  ಈ ವೇಳೆ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಂಡು ಕಾಂಗ್ರೆಸ್ ನಾಯಕರನ್ನು ಟಾರ್ಗೆಟ್ ಮಾಡ್ತಿದೆ ಎಂದಿದ್ದಾರೆ.

ಕಾನೂನಿಗೆ ಗೌರವ ಕೊಡಬೇಕು. ನಿಜ. ಆದರೆ ಬಿಜೆಪಿ ಕಾನೂನುನನ್ನು ದುರುಪಯೋಗ ಪಡಿಸಿಕೊಂಡಿದೆ. ಮೊದಲು ನನ್ನನ್ನು ಟಾರ್ಗೆಟ್ ಮಾಡಲಾಯ್ತು. ಈಗ ಸಂಪತ್ ರಾಜ್ ಟಾರ್ಗೆಟ್ ಆಗಿದ್ದಾರೆ. ಸಂಪತ್ ರಾಜ್ ಈ ಪ್ರಕರಣದಲ್ಲಿ 51 ನೇ ಆರೋಪಿ. ಅದಲ್ಲದೇ ಅವರು ಎಲ್ಲೂ ಓಡಿ ಹೋಗಿರಲಿಲ್ಲ. ಅನಾರೋಗ್ಯದ ಹಿನ್ನೆಲೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೂ ಸರ್ಕಾರ ಅವರನ್ನು ಗುರಿಯಾಗಿಸಿಕೊಂಡಿದೆ ಎಂಬ ಆರೋಪ ಮಾಡಿದ್ದಾರೆ.

ಸಂಪತ್ ರಾಜ್ ರನ್ನು ಪಕ್ಷದಿಂದ ಉಚ್ಛಾಟಿಸಬೇಕು ಹಾಗೂ ಈಗಲಾದರೂ ಡಿಕೆಶಿ ತನ್ನನ್ನುಬೆಂಬಲಿಸಬೇಕು ಎಂಬ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಒತ್ತಾಯಕ್ಕೆ ಪ್ರತಿಕ್ರಿಯಿಸಿದ ಡಿಕೆಶಿವಕುಮಾರ್, ಶ್ರೀನಿವಾಸಮೂರ್ತಿ ನನ್ನೊಂದಿಗೆ ಮಾತನಾಡಿಲ್ಲ. ಕೆಪಿಸಿಸಿ ಕಚೇರಿ ಇದೆ. ನನ್ನ ಮನೆ ಇದೆ. ಬಂದು ನನ್ನೊಡನೆ ಮಾತನಾಡಲಿ.

ಮಾಧ್ಯಮದವರ ಎದುರು ಪಕ್ಷದ ವಿಚಾರಗಳನ್ನು ಹೇಳಿಕೊಳ್ಳುವ ಬದಲು ನನ್ನೊಂದಿಗೆ ಮಾತನಾಡಲಿ ಎಂದು ಖಡಕ್ ಸೂಚನೆ ರವಾನಿಸಿದ್ದಾರೆ. ಆದರೆ ಸಂಪತ್ ರಾಜ್ ರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಮರ್ಥಿಸಿಕೊಂಡು ಬಂಧನ ಖಂಡಿಸಿ ಸುದ್ದಿಗೋಷ್ಠಿ ನಡೆಸಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ.

RELATED ARTICLES

Most Popular