ಬೆಂಗಳೂರು: ಕೊರೋನಾ ಸಂಕಷ್ಟದ ನಡುವೆಯೂ ಹೊಸ ವರ್ಷ ವನ್ನು ನೈಟ್ ಪಾರ್ಟಿ ಮಾಡಿ ಎಂಜಾಯ್ ಮಾಡೋ ಸಂಭ್ರಮದಲ್ಲಿದ್ದೋರಿಗೆ ಸರ್ಕಾರ ಶಾಕ್‌ನೀಡಿದೆ.

ಕೊರೋನಾ ನಿಯಂತ್ರಣ ಹಾಗೂ ಮುಂಜಾಗ್ರತೆ ದೃಷ್ಟಿಯಿಂದ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ವರ್ಷಾಚರಣೆಗೆ ಬ್ರೇಕ್ ಬೀಳೋ ಸಾಧ್ಯತೆ ಇದೆ.

ನಗರದ ಎಂಜಿರೋಡ್,ಬ್ರಿಗೇಡ್ ರೋಡ್,ಚರ್ಚ್ ಸ್ಟ್ರೀಟ್ ಗಳಲ್ಲಿ ಹೊಸವರ್ಷಾಚರಣೆಗೆ ಸಾವಿರಾರು ಜನ ಸೇರೋದು ಬೆಂಗಳೂರಿನ ಹೆಗ್ಗಳಿಕೆ.ಆದರೆ ಈ ವರ್ಷ ಕೊರೋನಾ ಭೀತಿ ಎಲ್ಲರನ್ನು ಕಾಡುತ್ತಿರೋದರಿಂದ ಜನರ ಹಿತದೃಷ್ಟಿಯಿಂದ ಸಾರ್ವಜನಿಕ ಸ್ಥಳದಲ್ಲಿ ವರ್ಷಾಚರಣೆಗೆ ಬ್ರೇಕ್ ಹಾಕಲು ಸರ್ಕಾರ ನಿರ್ಧರಿಸಿದೆ.

ಹೀಗಾಗಿ ವಿಶೇಷವಾಗಿ ಬೆಂಗಳೂರಿನ ಸಾರ್ವಜನಿಕ ಸ್ಥಳದಲ್ಲಿ ಜನರು ಒಂದೆಡೆ ಸೇರೋದು, ಪಾರ್ಟಿ,ಸಂಗೀತ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡದಿರಲು ಸರ್ಕಾರ ನಿರ್ಧರಿಸಿದೆ.

ಸಧ್ಯದಲ್ಲೇ ಗೃಹ ಸಚಿವ ಬೊಮ್ಮಾಯಿ ಈ ಕುರಿತು ಸ್ಪಷ್ಟ ಆದೇಶ ಹೊರಡಿಸುವ ಸಾಧ್ಯತೆ ಇದೆ. ಕೇವಲ ಅನುಮತಿ ನೀಡದೇ ಇರೋದು ಮಾತ್ರವಲ್ಲ ಜನತೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ನೈಟ್ ಕರ್ಪ್ಯೂ ಕೂಡ ಜಾರಿಯಾಗೋ ನೀರಿಕ್ಷೆ ಇದೆ.

ಡಿಸೆಂಬರ್ ೨೬ ರಿಂದ ಜನವರಿ ೨ ರ ತನಕ ನಗರದಲ್ಲಿ ನೈಟ್ ಕರ್ಪ್ಯೂ ಜಾರಿ ಮಾಡಿಅನಗತ್ಯ ಓಡಾಟ ಹಾಗೂ ಮೋಜು ಮಸ್ತಿಗೆ ಕಡಿವಾಣ ಹಾಕಲು ಗೃಹ ಇಲಾಖೆ ಸರ್ಕಾರದ ಮುಂದೇ ಪ್ರಸ್ತಾಪವಿಟ್ಟಿದೆ.
ಒಟ್ಟಿನಲ್ಲಿ ಕೊರೋನಾ ಎಫೆಕ್ಟ್ ಹಬ್ಬಗಳ ಜೊತೆ ಇದೀಗ ಹೊಸವರ್ಷಾಚರಣೆಯ ಸಂಭ್ರಮಕ್ಕೂ ತಡೆ ಒಡ್ಡುವಂತಿದ್ದು ಜನರು ನಿರಾಸೆಗೊಳ್ತಿರೋದಂತು ನಿಜ.