ಭಾನುವಾರ, ಏಪ್ರಿಲ್ 27, 2025
HomeBreakingವಿಶ್ವದ ನಂ 1 ಸಂಶೋಧನಾ ವಿವಿ ಗರಿಮೆಗೆ ಪಾತ್ರವಾದ ಬೆಂಗಳೂರಿನ ಐಐಎಸ್ಸಿ….!!

ವಿಶ್ವದ ನಂ 1 ಸಂಶೋಧನಾ ವಿವಿ ಗರಿಮೆಗೆ ಪಾತ್ರವಾದ ಬೆಂಗಳೂರಿನ ಐಐಎಸ್ಸಿ….!!

- Advertisement -

ಬೆಂಗಳೂರು : ಸಿಲಿಕಾನ ಸಿಟಿ ಎಂಬ ಗೌರವಕ್ಕೆ ಪಾತ್ರವಾಗಿರುವ ಬೆಂಗಳೂರಿನ ಸಾಧನೆಯ ಮುಕುಟಕ್ಕೆ ಮತ್ತೊಂದು ಗರಿ ಸೇರಿದ್ದು, ಜಾಗತಿಕ ಅತ್ಯುತ್ತಮ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಬೆಂಗಳೂರಿನ ಇಂಡಿಯನ್ ಇನ್ ಸ್ಟಿಸ್ಟ್ಯೂಟ್ ಆಫ್ ಸೈನ್ಸಸ್ ( ಐಐಎಸ್ಸಿ) ಐತಿಹಾಸಿಕ ಸಾಧನೆಯೊಂದಿಗೆ ಸ್ಥಾನ ಪಡೆದಿದೆ.

2022 ನೇ ಸಾಲಿನ  ಕ್ಯು ಎಸ್ ಜಾಗತಿಕ 200 ವಿಶ್ವವಿದ್ಯಾಲಯಗಳ ಪಟ್ಟಿ ಬಿಡುಗಡೆ ಮಾಡಿದ್ದು, ಅದರಲ್ಲಿ ಐಐಎಸ್ಸಿ ಸೈಟೇಶನ್ ಫಾರ್ ಫ್ಯಾಕಲ್ಟಿ ವಿಭಾಗದಲ್ಲಿ 100 ಕ್ಕೆ 100 ಪ್ರತಿಶತ ಅಂಕ ಪಡೆಯುವ ಮೂಲಕ ವಿಶ್ವದಲ್ಲೇ ಮೊದಲ ಸ್ಥಾನ ಪಡೆದಿದೆ.

ವಿಶ್ವದಲ್ಲಿ ಇಂಥ ಸಾಧನೆ ಮಾಡಿದ ಮೊದಲ ವಿವಿ ಎಂಬ ಹೆಗ್ಗಳಿಕೆಗೆ ಐಐಎಸ್ಸಿ ಪಾತ್ರವಾಗಿದ್ದು , ಈ ಸಾಧನೆಯ ಹಾದಿಯಲ್ಲಿ ವಿವಿ, ವಿಶ್ವದ ಖ್ಯಾತನಾಮ ವಿವಿಗಳಾದ ಪ್ರಿನ್ಸ್ ಟನ್ ಹಾಗೂ ಹಾರ್ವಡ್ ವಿವಿಗಳನ್ನು ಹಿಂದಿಕ್ಕಿದೆ.

ಒಟ್ಟಾರೆ ರ್ಯಾಂಕಿಂಗ್ ನಲ್ಲಿ ಐಐಎಸ್ಸಿ  ಭಾರತದಲ್ಲಿ ಮೂರನೇ ಸ್ಥಾನದಲ್ಲಿದ್ದು, ಮೊದಲ ಎರಡು ಸ್ಥಾನದಲ್ಲಿ ಮುಂಬೈ ಮತ್ತು ದೆಹಲಿ ಐಐಟಿಗಳಿವೆ.

ಐಐಎಸ್ಸಿ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ಸಂತೋಷ ವ್ಯಕ್ತಪಡಿಸಿದ್ದು, ಟ್ವೀಟರ್ ನಲ್ಲಿ ಶುಭಾಶಯ ಕೋರಿದ್ದಾರೆ. ಮಾತ್ರವಲ್ಲ ಭಾರತದ ಹೆಚ್ಚಿನ ವಿಶ್ವವಿದ್ಯಾಲಯಗಳ ಜಾಗತಿಕ ಶ್ರೇಷ್ಠತೆ ಗಳಿಸಿಕೊಳ್ಳುತ್ತಿದೆ. ಯುವಕರ ಬೌದ್ಧಿಕ ಪರಾಕ್ರಮವನ್ನು ಬೆಂಬಲಿಸಲಾಗುತ್ತಿದೆ ಎಂದು ಶ್ಲಾಘಿಸಿದ್ದಾರೆ.

RELATED ARTICLES

Most Popular