ಮೈಸೂರು : ಲಾಕ್ ಡೌನ್ ಹಿನ್ನೆಲೆಯಲ್ಲಿ ಮಧ್ಯ ಮಾರಾಟಕ್ಕೆ ನಿಷೇಧ ಹೇರಲಾಗಿತ್ತು. ಆದ್ರೂ ಹಲವು ಬಾರ್ ಗಳ ಮಾಲೀಕರು ಅಕ್ರಮವಾಗಿ ಮಧ್ಯಮಾರಾಟ ಮಾಡಲಾಗಿದೆ ಅನ್ನೋ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಮಧ್ಯರಾತ್ರಿ ಅಬಕಾರಿ ಅಧಿಕಾರಿಗಳು ಬಾರ್ ವೊಂದರ ಮೇಲೆ ದಾಳಿ ನಡೆಸಿದ್ದಾರೆ.

ಮೈಸೂರು ನಗರದ ಹಿನಕಲ್ ಬಳಿಯ ರಿಂಗ್ ರಸ್ತೆಯಲ್ಲಿರುವ ಭೂಮಿಪುತ್ರ ಬಾರ್ ಮೇಲೆ ರಾತ್ರಿ 2.30ರ ಸುಮಾರಿಗೆ ದಾಳಿ ನಡೆಸಿರುವ ಅಬಕಾರಿ ಅಧಿಕಾರಿಗಳು ಸ್ಟಾಕ್ ಬಗ್ಗೆ ಚೆಕ್ ಮಾಡಿದ್ದಾರೆ. ಜಿಲ್ಲಾ ಪಂಚಾಯತ್ ಸದಸ್ಯ ರಾಕೇಶ್ ಪಾಪಣ್ಣ ತಾಯಿ ಸುನಂದಾ ಅವರಿಗೆ ಸೇರಿದ ಬಾರ್ ಇದಾಗಿದೆ ಎನ್ನಲಾಗುತ್ತಿದೆ.

ಅಬಕಾರಿ ಡಿಸಿ ಮುರುಳು ಹಾಗೂ ಅವರ ತಂಡದಿಂದ ದಾಳಿ ನಡೆದಿದ್ದು, ತಪಾಸಣೆ ನಡೆಸಿದ್ದಾರೆ. ಡೆಪ್ಯುಟಿ ಸೂಪರ್ಡೆಂಡ್ ಮಹದೇವು, ಇನ್ಸ್ ಪೆಕ್ಟರ್ ಆನಂದ್ ಕುಮಾರ್, ಮಮತಾ, ರೇಂಜ್ ಆಫೀಸರ್ ಕೃಷ್ಣಪ್ಪ ಸೇರಿದಂತೆ 15 ಮಂದಿ ಸಿಬ್ಬಂಧಿಗಳ ತಂಡದೊಂದಿಗೆ ದಾಳಿ ನಡೆಸಲಾಗಿದೆ.

ಭೂಮಿ ಪುತ್ರ ಬಾರ್ ನಲ್ಲಿಯೂ ಅಕ್ರಮವಾಗಿ ಮದ್ಯವನ್ನು ದುಪ್ಪಟ್ಟು ಬೆಲೆಗೆ ಮಾರಾಟ ಮಾಡಿರುವ ಕುರಿತು ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ. ಅಬಕಾರಿ ಅಧಿಕಾರಿಗಳು ಸುಮಾರು 5 ಗಂಟೆಗೂ ಅಧಿಕ ಕಾಲ ತಪಾಸಣೆ ನಡೆಸಿದ್ದಾರೆ.