ಮಂಗಳವಾರ, ಏಪ್ರಿಲ್ 29, 2025
HomeBreakingಭಾರತವನ್ನು ಕೊರೊನಾದಿಂದ ರಕ್ಷಿಸುತ್ತಿದ್ಯಾ 'ಬಿಸಿಜಿ' ಲಸಿಕೆ !

ಭಾರತವನ್ನು ಕೊರೊನಾದಿಂದ ರಕ್ಷಿಸುತ್ತಿದ್ಯಾ ‘ಬಿಸಿಜಿ’ ಲಸಿಕೆ !

- Advertisement -

ಕೊರೊನಾ ವೈರಸ್ ಅನ್ನೋ ಮಹಾಮಾರಿ ಇಂದು ವಿಶ್ವವನ್ನೇ ನಡುಗಿಸಿದೆ. ಜಗತ್ತಿನ 200ಕ್ಕೂ ಅಧಿಕ ರಾಷ್ಟ್ರಗಳಲ್ಲಿ ಮರಣ ಮೃದಂಗವನ್ನೇ ಬಾರಿಸಿರುವ ಕೊರೊನಾ (ಕೋವಿಡ್ -19) ಅನ್ನೋ ಹೆಮ್ಮಾರಿ ಭಾರತದಲ್ಲಿಯೂ ಅಟ್ಟಹಾಸ ಮೆರೆಯುತ್ತಿದೆ. ಆದರೆ ವಿಶ್ವದ ಇತರ ರಾಷ್ಟ್ರಗಳಿಗೆ ಹೋಲಿಸಿದ್ರೆ ಭಾರತಕ್ಕೆ ಕೊರೊನಾದಿಂದ ಎದುರಾಗಿರೋ ಆಪತ್ತು ತೀರಾ ಕಡಿಮೆ. ಅಷ್ಟಕ್ಕೂ ಭಾರತೀಯರನ್ನು ಕೊರೊನಾದಿಂದ ಕಾಪಾಡಿದ್ದು ಬೇರಾವುದೂ ಅಲ್ಲಾ ‘ಬಿಸಿಜಿ’ ಅನ್ನೋ ಲಸಿಕೆ.

ಚೀನಾದ ವುಹಾನ್ ನಗರದಲ್ಲಿ ಕಾಣಿಸಿಕೊಂಡಿದ್ದ ಕೊರೊನಾ ವೈರಸ್ ಸೋಂಕು ಇಂದು ಜಗತ್ತಿನಾದ್ಯಂತ ಲಕ್ಷಾಂತರ ಜನರನ್ನು ಬಲಿ ಪಡೆಯುತ್ತಿದೆ. ಚೀನಾ, ಅಮೇರಿಕಾರ, ಇಟಲಿ, ಸ್ಪೇನ್, ಸಿಂಗಾಪುರದಂತಹ ರಾಷ್ಟ್ರಗಳೇ ಕೊರೊನಾ ಅನ್ನೋ ಮೂರಕ್ಷರದ ಮಹಾಮಾರಿಯ ಮುಂದೆ ಮಂಡಿಯೂರಿವೆ. ಚೀನಾ ವೈರಸ್ ಅಂತಾನೇ ಕರೆಯಿಸಿಕೊಳ್ಳುತ್ತಿರೋ ಕೋವಿಡ್ -19 ಮಹಾಮಾರಿಯ ರುದ್ರ ನರ್ತನ ಭಾರತದಲ್ಲಿ ಆರಂಭವಾಗುತ್ತಲೇ ದೇಶದಾದ್ಯಂತ ಲಾಕ್ ಡೌನ್ ಆದೇಶ ಜಾರಿ ಮಾಡಲಾಗಿದೆ.

ಅದ್ರಲ್ಲೂ ವಿಶ್ವದ ಇತರ ರಾಷ್ಟ್ರಗಳಿಗೆ ಹೋಲಿಸಿದ್ರೆ ದೇಶದಲ್ಲಿ ಕೊರೊನಾ ಸೃಷ್ಟಿಸಿರೋ ಭೀಕರತೆ ತೀರಾ ಕಡಿಮೆ. ಭಾರತೀಯರನ್ನು ಕೊರೊನಾ ಮಹಾಮಾರಿಯಿಂದ ರಕ್ಷಿಸಿರೋದು ಒಂದು ಲಸಿಕೆ.. ಹೀಗಂತ ಭಾರತೀಯರು ಹೇಳ್ತಿಲ್ಲಾ, ಬದಲಾಗಿ ನ್ಯೂಯಾರ್ಕ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ನಡೆಸಿದ ಪ್ರಾಥಮಿಕ ಅಧ್ಯಯನದಿಂದ ಈ ಮಾಹಿತಿ ಬಯಲಾಗಿದೆ.

ಕ್ಷಯರೋಗಕ್ಕೂ, ಕೊರೋನಾ ಸೋಂಕಿಗೂ ಸಂಬಂಧ ಇದೆಯೇ? ಹೀಗೊಂದು ಅನುಮಾನ ಈಗ ಪ್ರಬಲಗೊಳ್ಳುತ್ತಿವೆ. ಎರಡೂ ಅಂಟು ಜಾಡ್ಯ ಎಂಬುದು ಸ್ಪಷ್ಟವಾಗಿದೆ. ಮನುಷ್ಯನ ಎಂಜಲು ಮತ್ತಿತರ ದೇಹದ ದ್ರವಗಳ ಮೂಲಕ ಒಬ್ಬರಿಂದ ಮತ್ತೊಬ್ಬರಿಗೆ ತಲುಪಲಿದೆ. ಎರಡು ರೋಗ ಲಕ್ಷಣಗಳ ನಡುವೆ ಹಲವು ಹೋಲಿಕೆಗಳಿದ್ದು, ಎರಡೂ ರೋಗಗಳು ಶ್ವಾಸಕೋಶಕ್ಕೆ ಸಂಬಂಧಿಸಿದ್ದಾಗಿವೆ. ಹೀಗಾಗಿ ಬಿಸಿಜಿ ಲಸಿಕೆ ಭಾರತವನ್ನು ಕೋವಿಡ್ -19 ಹಿಡಿತದಿಂದ ರಕ್ಷಿಸುತ್ತಿದೆ ಎಂದು ಹೇಳುತ್ತಿದೆ ಅಧ್ಯಯನದ ವರದಿ. ಇದೇ ಬಿಸಿಜಿ ಲಸಿಕೆ ಭಾರತದಲ್ಲಿ ಕೊರೊನಾ ವ್ಯಾಪಿಸಿದ್ದರೂ ಕೂಡ ಸಾವಿನ ಪ್ರಮಾಣವನ್ನು ತಗ್ಗಿಸಿದೆ ಎನ್ನುತ್ತಿದೆ.

ಕೊರೊನಾದಿಂದ ತತ್ತರಿಸಿರೋ ಹಲವು ರಾಷ್ಟ್ರಗಳನ್ನು ನ್ಯೂಯಾರ್ಕ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ನಡೆಸಿದ ಪ್ರಾಥಮಿಕ ಅಧ್ಯಯನಕ್ಕೆ ಒಳಪಡಿಸಿದೆ. ಪ್ರಮುಖವಾಗಿ ಬಿಸಿಜಿ ಲಸಿಕೆಯನ್ನು ಬಳಕೆ ಮಾಡುತ್ತಿರೋ ದೇಶಗಳಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಮಾಣ ತೀರಾ ಕಡಿಮೆಯಿದೆ. ಚೀನಾದ ನೆರೆಯ ದೇಶವಾಗಿದ್ದರೂ ಕೂಡ ಜಪಾನ್ ದೇಶಕ್ಕೆ ಕೊರೊನಾ ಅಷ್ಟೊಂದು ಎಫೆಕ್ಟ್ ಕೊಟ್ಟಿಲ್ಲ, ಅಷ್ಟೇ ಯಾಕೆ ಜಪಾನ್ ನಲ್ಲಿ ಇಂದಿಗೂ ಲಾಕ್ ಡೌನ್ ಜಾರಿಯೇ ಮಾಡಿಲ್ಲ.

ಅಷ್ಟೇ ಯಾಕೆ ಬಿಸಿಜಿ ಲಸಿಕೆ ಬಳಕೆ ಮಾಡಿರೋ ದಕ್ಷಿಣ ಕೋರಿಯಾ ಕೂಡ ಕೊರೊನಾ ಮಹಾಮಾರಿಯ ವಿರುದ್ದದ ಹೋರಾಟದಲ್ಲಿ ಯಶಸ್ಸನ್ನು ಕಂಡಿದೆ. ಆದರೆ ಚೀನಾ, ಅಮೇರಿಕಾ, ಇಟಲಿ, ಸ್ಪೇನ್ ಮತ್ತು ಜರ್ಮನಿಯಂತಹ ಶ್ರೀಮಂತ ದೇಶಗಳೇ ಕೊರೊನಾ ಸೋಂಕಿಗೆ ನೆಲಕಚ್ಚಿ ಹೋಗಿವೆ. ಇದಕ್ಕೆ ಪ್ರಮುಖ ಕಾರಣವ ಈ ದೇಶಗಳು ಅಷ್ಟಾಗಿ ಬಿಸಿಜಿ ಲಸಿಕೆಯನ್ನು ಬಳಕೆ ಮಾಡುತ್ತಿಲ್ಲ.

ಆದರೆ ಭಾರತ ದೇಶದಲ್ಲಿ 1948 ರಿಂದಲೂ ಕ್ಷಯ ರೋಗದ ನಿಯಂತ್ರಣಕ್ಕಾಗಿ ಬಿಸಿಜಿ ಲಸಿಕೆಯನ್ನು ಕಡ್ಡಾಯವಾಗಿ ಹಾಕಿಸಲಾಗುತ್ತಿದೆ. ಇದೇ ಕಾರಣದಿಂದಲೇ ಭಾರತದಲ್ಲಿ ಕೊರೋನಾ ರೋಗದ ಹರಡುವಿಕೆ ಕಡಿಮೆ ಇದೆ ಎಂದು ನ್ಯೂಯಾರ್ಕ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಒಟಾಜು ಮಾಹಿತಿ ನೀಡಿದ್ದಾರೆ.

ಅಷ್ಟೇ ಯಾಕೆ ಜಪಾನ್ ದೇಶದಲ್ಲಿಯೂ ಬಿಸಿಜಿ ಲಸಿಕೆಯನ್ನು ಬಳಕೆ ಮಾಡಲಾಗುತ್ತಿದೆ. ಬಿಸಿಜಿ ಲಸಿಕೆಯಿಂದಲೇ ಕೊರೊನಾ ಪ್ರಮಾಣ ಕಡಿಮೆಯಾಗಿದೆ. ಕೊರೊನಾ ತಡೆಗೆ ಬಿಜಿಸಿ ಲಸಿಕೆಯೇ ರಾಮಬಾಣ ಅನ್ನೋದನ್ನು ನ್ಯೂಯಾರ್ಕ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ನಡೆಸಿದ ಪ್ರಾಥಮಿಕ ಅಧ್ಯಯನದ ವರದಿ ಬಯಲು ಮಾಡುತ್ತಿದ್ದಂತೆಯೇ ಅಮೇರಿಕಾ, ಚೀನಾ, ಇಟಲಿ ಸೇರಿದಂತೆ ಹಲವು ರಾಷ್ಟ್ರಗಳು ಬಿಸಿಜಿ ಲಸಿಕೆ ಹಾಕಿಸುವುದನ್ನು ಕಡ್ಡಾಯಗೊಳಿಸುತ್ತಿವೆ.

ಇನ್ನು ನೆದರ್ಲ್ಯಾಂಡ್ ಕೊರೋನಾ ನಿಗ್ರಹಿಸಲು ತನ್ನ 200 ಮಂದಿ ವೈದ್ಯಕೀಯ ಸಿಬ್ಬಂದಿಗೆ ಬಿಸಿಜಿ ಲಸಿಕೆಯನ್ನು ಪ್ರಾಯೋಗಿಕವಾಗಿ ಹಾಕಿಸಿದ್ದು, ಮೂರು ತಿಂಗಳ ಬಳಿಕ ನಿಖರ ಫಲಿತಾಂಶ ಹೊರಬಂದ ನಂತರದಲ್ಲಿ ಪೂರ್ಣ ಪ್ರಮಾಣದಲ್ಲಿ ಹಾಕಿಸೋ ಪ್ಲ್ಯಾನ್ ಮಾಡಿಕೊಂಡಿದೆ. ಈ ನಡುವಲ್ಲೇ ಕೊರೋನಾಗೆ ಲಸಿಕೆ ಸಂಶೋಧಿಸಲು ಕನಿಷ್ಠ ಎರಡು ವರ್ಷ ಸಮಯ ಬೇಕಿದೆ.

ಹಾಗಾಗಿ ಅಮೆರಿಕ ಮತ್ತು ಇಟಲಿಯಂತಹ ದೇಶಗಳು ತುರ್ತು ಸೇವೆ ಒದಗಿಸುವ ವೈದ್ಯರು, ದಾದಿಯರು, ಪೊಲೀಸ್ ಮತ್ತು ನೈರ್ಮಲ್ಯ ಕಾರ್ಮಿಕರಿಗೆ ವೈರಸ್ ನಿಂದ ರಕ್ಷಿಸಲು ಬಿಸಿಜಿ ಲಸಿಕೆ ಹಾಕುವಂತೆ ಶಿಫಾರಸು ಮಾಡುತ್ತಿವೆ. ಪ್ರಪಂಚದ ಉಳಿದ ಭಾಗಗಳು ಇದನ್ನೂ ಅನುಸರಿಸಲು ಮುಂದಾಗಿವೆ.

ಅಷ್ಟೇ ನ್ಯೂಯಾರ್ಕ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಪ್ರಾಥಮಿಕ ವರದಿಯನ್ನು ನೀಡುತ್ತಲೇ ಕೆನಡಾದ ಟೊರೊಂಟೊ ವಿಶ್ವವಿದ್ಯಾಲಯದ ರೋಗನಿರೋಧಕ ವಿಭಾಗದ ಪ್ರಾಧ್ಯಾಪಕ ಎಲೀನರ್ ಫಿಶ್ ಈ ಕುರಿತು ಹೆಚ್ಚಿನ ಸಂಶೋಧನೆ ಆರಂಭಿಸಿದ್ದಾರೆ.

ಒಟ್ಟಿನಲ್ಲಿ ನ್ಯೂಯಾರ್ಕ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ನಡೆಸಿರೋ ಅಧ್ಯಯನ ಅಂತಿಮ ವರದಿಯಲ್ಲಿಯೂ ಬಿಸಿಜಿ ಲಸಿಕೆಯಿಂದಲೇ ಭಾರತ ರಕ್ಷಣೆ ಪಡೆದಿದೆ ಅನ್ನೋದು ದೃಢಪಟ್ಟರೆ, ಭಾರತ ಸಂಪೂರ್ಣವಾಗಿ ಮಹಾಮಾರಿಯಿಂದ ಬಜಾಚ್ ಆಗಲಿದೆ. ಏನೇ ಆದ್ರೂ ಭಾರತ ಕೊರೊನಾ ವೈರಸ್ ಸೋಂಕನ್ನು ದಿಟ್ಟವಾಗಿಯೇ ಎದುರಿಸಿ ನಿಂತಿದೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular