ನಾವು ತಿನ್ನುವ ಆಹಾರ ಕೆಲವೊಮ್ಮೆ ನಮ್ಮ ಆರೋಗ್ಯವನ್ನು ವೃದ್ದಿಸಿದ್ರೆ, ಇನ್ನೂ ಕೆಲವೊಂದು ಸೌಂದರ್ಯವನ್ನು ವೃದ್ದಿಸುತ್ತೆ. ಆದ್ರೆ ಅಲೋವೆರಾ ಆರೋಗ್ಯ ಹಾಗೂ ಸೌಂದರ್ಯ ಎರಡನ್ನೂ ಹೆಚ್ಚಿಸುತ್ತೆ. ಅನ್ನುತ್ತಿದೆ ಆಯುರ್ವೇದ. ಹಾಗಾದ್ರೆ ಅಲೋವೆರಾ ಯಾವೆಲ್ಲಾ ರೀತಿಯಲ್ಲಿ ಉಪಯೋಗಕಾರಿ ಅನ್ನೋದನ್ನು ತಿಳಿದುಕೊಳ್ಳೋಣಾ.

ವೃದ್ದಿಸುತ್ತೆ ರೋಗನಿರೋಧಕ ಶಕ್ತಿ : ಅಲೋವೆರಾದಲ್ಲಿ ಹೇರಳ ಪ್ರಮಾಣದಲ್ಲಿ ವಿಟಮಿನ್ಸ್ ಹಾಗೂ ಮಿನರಲ್ಸ್ ಗಳಿದೆ. ಅಲೋವೆರಾದ ಲೋಳೆ ಸೇವನೆಯಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ವೃದ್ದಿಸುತ್ತದೆ. ಹೃದಯ ಸಂಬಂಧಿ ರೋಗಗಳಿಗೆ ರಾಮಬಾಣ : ಅಲೋವೆರಾ ಜೆಲ್ ನ್ನು ನಿತ್ಯವೂ ಸೇವಿಸುವುದರಿಂದ ದೇಹದಲ್ಲಿ ಜೀರ್ಣಕ್ರಿಯೆ ಹಾಗೂ ಪಚನಕ್ರಿಯೆ ವೃದ್ದಿಸಲು ಸಹಕಾರಿಯಾಗುತ್ತದೆ. ಮಾತ್ರವಲ್ಲ ಹೃದಯ ಸಂಬಂಧಿ ಕಾಯಿಲೆಗಳಿಂದಲೂ ನಮ್ಮನ್ನು ದೂರವಿಡುತ್ತದೆ.

ಮೌತ್ ವಾಶ್ ಆಗಿ ಬಳಕೆ : ಅಲೋವೆರಾವನ್ನು ಮೌತ್ ವಾಶ್ ಆಗಿಯೂ ಬಳಕೆ ಮಾಡಬಹುದು. ದೇಹದಲ್ಲಿರುವ ದುರ್ಗಂಧವನ್ನು ದೂರ ಮಾಡುವಲ್ಲಿಯೂ ಸಹಕಾರಿಯಾಗಿದೆ. ರಾಸಾಯನಿಕವಾಗಿ ಸಿಗುವ ಮೌತ್ ವಾಶ್ ಗಳಿಗಿಂತ ನೈಸರ್ಗಿಕವಾಗಿ ಸಿಗುವ ಅಲೋವೆರಾ ಜೆಲ್ ಬಳಸಿದರೆ ಉತ್ತಮ ಫಲಿತಾಂಶ ಸಿಗುತ್ತದೆ.

ಕರಳಿನ ಸಮಸ್ಯೆ ದೂರ : ಅಲೋವೆರಾ ಜ್ಯೂಸ್ ನ್ನು ನಿತ್ಯವೂ ಬೆಳಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಮಲಬದ್ದತೆ ದೂರವಾಗುವುದರ ಜೊತೆಗೆ ಕರಳಿನ ಸಮಸ್ಯೆ ಬಾರದಂತೆ ತಡೆಯುತ್ತದೆ. ಅಲ್ಲದೇ ಅಸಿಡಿಟಿ ಗ್ಯಾಸ್ ಸ್ಟ್ರಿಕ್ ಸಮಸ್ಯೆಗಳಿಗೂ ಪರಿಹಾರವನ್ನು ನೀಡುತ್ತದೆ. ಇನ್ನು ಅಜೀರ್ಣ ಸಮಸ್ಯೆಯಿಂದ ಎದುರಾಗುವ ರಕ್ತ ಹೀನತೆ, ಹಳದಿ ರೋಗದಂತಹ ಸಮಸ್ಯೆಗಳಿಗೆ ಅಲೋವೆರಾ ಜ್ಯೂಸ್ ರಾಮಬಾಣದಂತೆ ಕೆಲಸ ಮಾಡುತ್ತದೆ.

ಡ್ರೈ ಸ್ಕಿನ್ ನಿವಾರಣೆ : ಅಲೋವೆರಾ ಫೆಸ್ಟ್ ಗೆ ಒಂದು ಚಮಚ ಜೇನುಹನಿ, ಒಂದು ಚಮದ ಹಾಲು, ರೋಸ್ ವಾಟರ್ ಹನಿಗಳನ್ನು ಬೆರೆಸಿ ಹಚ್ಚಿಕೊಂಡರೆ ಡ್ರೈಸ್ಕಿನ್ ನಿವಾರಣೆಯಾಗುತ್ತದೆ.

ಅಲೋವೆರಾದಲ್ಲಿರೋ ಪ್ರೊಟಿಯೋಲಿಕ್ ಅಂಶವು ಕೂದಲು ಉದುರುವುದನ್ನು ತಡೆಯುತ್ತೆ. ವಾರಕ್ಕೊಮ್ಮೆ ಕೂದಲಿಗೆ ಅಲೋವೆರಾ ಜೆಲ್ ಬಳಸಿದೆ ರೇಷ್ಮೆಯಂತಹ ಕೂದಲು ನಿಮ್ಮದಾಗುತ್ತದೆ. ಹೀಗಾಗಿ ಅಲೋವೆರಾ ಕೇಶಕ್ಕೆ ನುಣುಪು ತಂದುಕೊಡುತ್ತದೆ.
