ಪ್ರತಿಯೊಬ್ಬರು ತಮ್ಮ ಮುಖದ ಕಾಂತಿ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಾರೆ. ಯಾಕೆಂದರೆ ಜನರು ಮುಖದ ಸೌಂದರ್ಯವು (Beauty tips) ಹೆಚ್ಚು ಆರ್ಕಷಣೆಗೆ ಒಳಗಾಗುತ್ತಾರೆ. ಸಾಮಾನ್ಯವಾಗಿ ಮುಖದ ಕಾಂತಿಯು ಸರಿಯಾಗಿದ್ದರೆ, ನಮ್ಮ ದೇಹವು ಅರೋಗ್ಯ ಚೆನ್ನಾಗಿದೆ ಎನ್ನುವುದಾಗಿದೆ. ನಮ್ಮ ದೇಹದಲ್ಲಿ ಆಗುವ ಪ್ರತಿಯೊಂದು ಬದಲಾವಣೆ ಮೊದಲಿಗೆ ಕಾಣಿಸುವುದು ಮುಖದಲ್ಲಿ ಎಂದರೆ ತಪ್ಪಾಗಲ್ಲ. ಅಷ್ಟೇ ಅಲ್ಲದೇ ಸರಿಯಾದ ರೀತಿಯಲ್ಲಿ ಮುಖ ತೊಳೆಯುವುದು ಕೂಡ ಅದರ ಸೌಂದರ್ಯಕ್ಕೆ (Skin care tips) ಕಾರಣವಾಗಿರುತ್ತದೆ. ಹೀಗಾಗಿ ಮುಖ ತೊಳೆಯುವಾಗ ಈ ಕೆಳಗೆ ತಿಳಿಸಿದಂತಹ ತಪ್ಪುಗಳು ಆಗದೇ ಇರುವ ತರ ಗಮನಹರಿಸಬೇಕಾಗಿದೆ.
ಮುಖ ತೊಳೆಯುವಾಗ ಈ ಕೆಳಗೆ ತಿಳಿಸಿದ ತಪ್ಪುಗಳನ್ನು ಮಾಡದಿರಿ
ತುಂಬಾ ಬಿಸಿ ಅಥವಾ ತುಂಬಾ ತಣ್ಣೀರಿನಿಂದ ಮುಖ ತೊಳೆಯಬಾರದು :
ಸಾಮಾನ್ಯವಾಗಿ ಹೆಚ್ಚಿನವರು ಹೊರಗಡೆಯಿಂದ ಬಂದ ತಕ್ಷಣವೇ ಕೈ ಕಾಲು ಮುಖ ತೊಳೆಯುತ್ತಾರೆ. ಕೆಲವರು ತುಂಬಾ ಬಿಸಿ ಅಥವಾ ಕೋಲ್ಡ್ ನೀರಿನಲ್ಲಿ ತೊಳೆಯುತ್ತಾರೆ. ಆದರೆ ಈ ರೀತಿ ಮುಖ ತೊಳೆಯುವುದರಿಂದ ನಿಮ್ಮ ಸ್ಕಿನ್ ಡ್ಯಾಮೇಜ್ ಆಗಬಹುದು. ಆದರಿಂದ ಅತಿಯಾದ ಬಿಸಿ ನೀರಿನಿಂದಲೂ ಮುಖವನ್ನು ತೊಳೆಯಬಾರದು. ಹಾಗೆಯೇ ಅತಿಯಾದ ತಣ್ಣೀರಿನಿಂದಲೂ ಮುಖವನ್ನು ತೊಳೆಯಬಾರರು. ಅದರ ಬದಲಿಗೆ ಬೆಚ್ಚಗಿನ ನೀರಿನಿಂದ ಮುಖವನ್ನು ಆಗಾಗ್ಗ ತೊಳೆಯುವುದರಿಂದ ಮುಖದ ಕಾಂತಿ ಹೆಚ್ಚಾಗುತ್ತದೆ.
ಮುಖ ತೊಳೆಯುವ ಮುನ್ನ ಕೈ ತೊಳೆಯಿರಿ :
ನಾವು ಮುಖ ತೊಳೆಯುವಾಗ ಮೊದಲಿಗೆ ಕೈಯಿಂದ ಮುಖಕ್ಕೆ ನೀರನ್ನು ಹಾಕಿಕೊಳ್ಳಬಾರದು. ಅದರ ಬದಲು ಕೈಯನ್ನು ಚೆನ್ನಾಗಿ ಸೋಪ್‌ಯಿಂದ ವಾಶ್ ಮಾಡಿಕೊಂಡ ಮೇಲೆ ಮುಖ ತೊಳೆದುಕೊಳ್ಳುವುದು ಒಳ್ಳೆಯದು. ಯಾಕೆಂದರೆ ನಿಮ್ಮ ಕೈಯಲ್ಲಿ ಇರುವ ಬ್ಯಾಕ್ಟೀರಿಯಾ ಮುಖಕ್ಕೆ ತಗಲುವುದರಿಂದ ಮೊಡವೆಗಳಿಗೆ ಕಾರಣವಾಗಬಹುದು. ಹೀಗಾಗಿ ಕೈಯನ್ನು ಸ್ವಚ್ಛ ಮಾಡಿಕೊಂಡ ಮೇಲೆ ಮುಖ ತೊಳೆಯಬೇಕು. ಇದರಿಂದ ಮುಖದ ಸೌಂದರ್ಯವನ್ನು ಉಳಿಸಿಕೊಳ್ಳಬಹುದು.

ಇದನ್ನೂ ಓದಿ : ಅಡುಗೆಗೆ ಬಳಸುವ ಮೆಂತೆ ಕಾಳು ತಲೆಹೊಟ್ಟು ನಿವಾರಿಸುತ್ತಾ ? ಒಮ್ಮೆ ಟ್ರೈ ಮಾಡಿದ್ರೆ ಅಚ್ಚರಿಗೊಳ್ತೀರಿ
ಮೈಗೆ ಬಳಸಿದ ಸೋಪ್ ಮುಖಕ್ಕೆ ಬಳಸಬಾರದು :
ಹೆಚ್ಚಿನವರು ಮೈಗೆ ಬಳಸುವ ಸೋಪ್‌ನ್ನೇ ಮುಖಕ್ಕೆ ಬಳಸುತ್ತಾರೆ. ಯಾಕೆಂದರೆ ಮುಖಕ್ಕೆ ಅಂತ ಬೇರೆ ಸೋಪ್ ಬಳಸುವುದೇ ಕಡಿಮೆ. ಆದರೆ ಮೈಗೆ ಬಳಸುವ ಸೋಪ್‌ನಲ್ಲಿ ಸ್ಟ್ರಾಂಗ್ ಕೆಮಿಕಲ್ಸ್ ಇರುತ್ತದೆ. ಹಾಗಾಗಿ ಮುಖಕ್ಕೆ ಈ ಸೋಪ್ ಸೂಕ್ತ ಆಗಿರುವುದಿಲ್ಲ. ಹಾಗಾಗಿ ಮುಖಕ್ಕೆ ಫೇಸ್ ವಾಸ್ ಬಳಸುವುದರಿಂದ ಹೆಚ್ಚು ಒಳ್ಳೆಯದು ಇದ್ದರಿಂದ ಮುಖದ ಕಾಂತಿಯನ್ನು ಹೆಚ್ಚಿಸಿಕೊಳ್ಳಬಹುದು.

ಇದನ್ನೂ ಓದಿ : ಕೊಬ್ಬರಿ ಎಣ್ಣೆಯನ್ನೂ ಹೀಗೂ ತಲೆಗೆ ಹಚ್ಚಬಹುದಾ ! ರೇಷ್ಮೆಯಂತಹ ಕೂದಲಿಗೆ ಈ ಟಿಫ್ಸ್ ಫಾಲೋ ಮಾಡಿ
ಮುಖ ಒರೆಸೋಕೆ ಗಲೀಜಾದ ಅಥವಾ ರಪ್ ಆಗಿರೋ ಟವೆಲ್ ಬಳಸಬಾರದು :
ಮುಖ ತೊಳೆದ ಕೂಡಲೇ ಒರೆಸಿಕೊಳ್ಳಲು ಯಾವ ಬಟ್ಟೆ ಸಿಕ್ಕಿದ್ದರೂ, ಅದರಲ್ಲಿ ಮುಖ ಒರೆಸಿಕೊಳ್ಳುತ್ತೇವೆ. ಹೀಗೆ ಮಾಡುವುದರಿಂದ ಮುಖದಲ್ಲಿ ಬೇಡದ ಗುಳ್ಳೆಗಳು ಹಾಗೂ ಮೊಡವೆಗಳು ಆಗುವುದಕ್ಕೆ ಕಾರಣವಾಗುತ್ತದೆ. ಅದರಲ್ಲೂ ಮುಖ ಒರೆಸೋಕೆ ಗಲೀಜಾದ ಅಥವಾ ರಪ್ ಆಗಿರೋ ಟವೆಲ್‌ನ್ನು ಬಳಸಬಾರದು. ಏಕೆಂದರೆ ಇದ್ರಿಂದ ಮೊಡವೆಗಳು ಹೆಚ್ಚಾಗುತ್ತದೆ. ಹಾಗಾಗಿ ಮುಖ ಒರೆಸುವುದಕ್ಕೆ ಮೃದುವಾದ ಬೇರೆ ಬಟ್ಟೆಯನ್ನು ಬಳಸುವುದರಿಂದ ಮುಖ ಕಾಂತಿ ಚೆನ್ನಾಗಿ ಇರುತ್ತದೆ.

Beauty Tips : Don’t make these mistakes when you wash your face