(Beetroot Health Benefits)ಬಿಟ್ರೋಟ್ ತಿನ್ನಲು ಹಲವರು ಇಷ್ಟಪಡುವುದಿಲ್ಲ ಆದರೆ ಬಿಟ್ರೋಟ್‌ನಿಂದ ಹಲವು ಪ್ರಯೋಜನಗಳಿವೆ. ಬಿಟ್ರೋಟ್ ತಿನ್ನುವುದರಿಂದ ದೇಹದ ಹಲವು ಸಮಸ್ಯೆಗಳು ದೂರವಾಗುತ್ತದೆ. ಡಯೆಟ್ ಮಾಡುವವರು ಅತಿ ಹೆಚ್ಚಾಗಿ ಬಿಟ್ರೋಟ್ ತಿನ್ನುತ್ತಾರೆ ಮತ್ತು ಇದರಿಂದ ಜ್ಯೂಸ್ ಮಾಡಿಕೊಂಡು ಕುಡಿಯುತ್ತಾರೆ. ಬಿಟ್ರೋಟ್ ನಲ್ಲಿರುವ ಕಬ್ಬಿಣ, ಮೆಗ್ನೀಸಿಯಮ್, ಫೋಲೇಟ್ ಅಂಶದಿಂದ ಹಲವು ಆರೋಗ್ಯದ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಬಿಟ್ರೋಟ್ ರಸವನ್ನು ಯಾವ ಸಂದರ್ಭದಲ್ಲಿ ತೆಗೆದುಕೊಳ್ಳಬೇಕು ಮತ್ತು ಇದರನ್ನು ಸೇವನೆ ಮಾಡುವುದರಿಂದ ಯಾವೆಲ್ಲಾ ಪ್ರಯೋಜನವನ್ನು ಪಡೆಯಬಹುದು ಎಂಬ ಮಾಹಿತಿಯ ಕುರಿತು ತಿಳಿದುಕೊಳ್ಳೋಣ.
(Beetroot Health Benefits)ಬಿಟ್ರೋಟ್ ರಸವನ್ನು ಯಾವ ಸಂದರ್ಭದಲ್ಲಿ ತೆಗೆದುಕೊಳ್ಳಬೇಕು:
ವ್ಯಾಯಾಮದ ನಡುವೆ ನೀವು ಬೀಟ್ರೂಟ್ ರಸವನ್ನು ತೆಗೆದುಕೊಳ್ಳಬಹುದು. ವ್ಯಾಯಾಮದ ನಡುವೆ ಸಿಹಿ ರಸವನ್ನು ಸೇವಿಸುವುದರಿಂದ ತಾಲೀಮು(ವ್ಯಾಯಾಮ) ಕಾರ್ಯಕ್ಷಮತೆಯನ್ನು ಹೆಚ್ಚಾಗುವಂತೆ ಮಾಡುತ್ತದೆ. ಆರೋಗ್ಯವಾಗಿ ಫಿಟ್ ಆಗಿರಲು ವ್ಯಾಯಾಮದ ಜೊತೆಗೆ ಆಹರವು ಕೂಡ ಅಗತ್ಯ. ಹಾಗಾಗಿ ಬಿಟ್ರೋಟ್ ರಸ ಸೇವನೆ ಮಾಡಿದರೆ ಉತ್ತಮ.
ಬೆಳಿಗ್ಗೆ ಕಾಲಿ ಹೊಟ್ಟೆಯಲ್ಲಿ ಸೇವನೆ ಮಾಡಿ
ಬೆಳಿಗ್ಗೆ ತಿಂಡಿ ತಿನ್ನುವ ಮೊದಲು ಈ ಬಿಟ್ರೋಟ್ ರಸ ಕುಡಿಯುವುದರಿಂದ ಹಲವು ಆರೋಗ್ಯದ ಪ್ರಯೋಜನವನ್ನು ಪಡೆದುಕೊಳ್ಳಬಹುದು.
ಇದನ್ನೂ ಓದಿ:Tips for diabetes: ಈ ಸಲಹೆ ಪಾಲಿಸಿ ಮಧುಮೇಹವನ್ನು ನಿಯಂತ್ರಣದಲ್ಲಿಡಿ
ಇದನ್ನೂ ಓದಿ:Benefits Of Sunlight:ದೇಹದಲ್ಲಿ ವಿಟಮಿನ್ ಡಿ ಹೆಚ್ಚಿಸುವ ಸೂರ್ಯನ ಕಿರಣದಿಂದ ಹಲವು ಪ್ರಯೋಜನ
ಬಿಟ್ರೋಟ್ ಆರೋಗ್ಯ ಪ್ರಯೋಜನಗಳು:
- ಬೀಟ್ರೂಟ್ ಅನ್ನು ಯಾವುದೇ ರೂಪದಲ್ಲಿ ಸೇವನೆ ಮಾಡುವುದರಿಂದ ದೇಹದ ರೋಗನಿರೋಧಕ ಶಕ್ತಿ ಹೆಚ್ಚಾಗುವಂತೆ ಮಾಡುತ್ತದೆ.
- ಬಿಟ್ರೋಟ್ ನಲ್ಲಿ ಅಧಿಕ ಪ್ರಮಾಣದ ಫೈಬರ್ ಅಂಶಗಳನ್ನು ಹೊಂದಿರುವುದರಿಂದ ಹೊಟ್ಟೆಯನ್ನು ಸ್ವಚ್ಛವಾಗಿಡಲು ಸಹಾಯ ಮಾಡುತ್ತದೆ.
- ಅಧಿಕ ರಕ್ತದೊತ್ತಡದ ಇರುವವರು ಬೀಟ್ರೂಟ್ ಜ್ಯೂಸ್ ಮಾಡಿ ಕುಡಿಯುವುದರಿಂದ ಇದನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಸಹಾಯ ಮಾಡುತ್ತದೆ.
- ಬೀಟ್ರೂಟ್ ಅನ್ನು ಯಾವುದೇ ರೂಪದಲ್ಲಿ ಸೇವನೆ ಮಾಡುವುದರಿಂದ ಬಿಪಿ ನಿಯಂತ್ರಣದಲ್ಲಿರುತ್ತದೆ.
- ಬಿಟ್ರೋಟ್ ಜ್ಯೂಸ್ ಮತ್ತು ಬಿಟ್ರೋಟ್ ಹಾಗೆ ಬೆಯಿಸಿ ತಿನ್ನುವುದರಿಂದ ಸುಸ್ತಾಗುವಂತಹ ಲಕ್ಷಣಗಳಿದ್ದರೆ ಮತ್ತು ರಕ್ತದ ಕೊರತೆ ಇದ್ದರೆ ಇಂತಹ ಸಮಸ್ಯೆಗಳನ್ನು ನಿವಾರಣೆ ಮಾಡುತ್ತದೆ.
- ಬಿಟ್ರೋಟ್ ಸೇವನೆ ಮಾಡುವುದರಿಂದ ಚರ್ಮದ ಕಾಂತಿ ಹೆಚ್ಚಾಗುವಂತೆ ಮಾಡುತ್ತದೆ ಮತ್ತು ಕೂದಲನ್ನು ಬಲಪಡಿಸುತ್ತದೆ.
- ಬಿಟ್ರೋಟ್ ಸೇವನೆ ಮಾಡುವುದರಿಂದ ನೆನಪಿನ ಶಕ್ತಿ ಕ್ಷಿಣಿಸದಂತೆ ನೋಡಿಕೊಳ್ಳುತ್ತದೆ
- ಬಿಟ್ರೋಟ್ ಸೇವನೆ ಮಾಡುವುದರಿಂದ ಆರೋಗ್ಯವಾಗಿ ದೇಹದ ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
Beetroot Health Benefits Consume beetroot and get health benefits