ಅಪ್ಪನ ಸ್ಥಾನಕ್ಕೆ ಮಗಳು ಉತ್ತರಾಧಿಕಾರಿ? ಬೆಳಗಾವಿಯಲ್ಲೂ ಕುಟುಂಬ ರಾಜಕಾರಣಕ್ಕೆ ಮಣೆ ಹಾಕುತ್ತಾ ಬಿಜೆಪಿ?!

ರಾಜಕೀಯ ಪಕ್ಷಗಳಲ್ಲಿ ಕುಟುಂಬ ರಾಜಕಾರಣ ತಲೆತಲಾಂತರಗಳಿಂದ ನಡೆಯುತ್ತಲೇ ಬಂದಿದೆ. ಆದರೆ ಬಿಜೆಪಿ ಅಂತಹ ಪರಿಪಾಠವಿಲ್ಲ ಅಂತ ಬಾಯಲ್ಲಿ ಹೇಳ್ತಿರೋ ಬಿಜೆಪಿ ಕೃತಿಯಲ್ಲಿ ಮಾತ್ರ ಅಪ್ಪನ ನಂತರ ಮಕ್ಕಳಿಗೆ ಮೀಸಲು ಕೊಡೋ ಪ್ರವೃತ್ತಿ ಬೆಳೆಸುತ್ತಿದೆ. ಒಂದೆಡೆ ಸಿಎಂ ಪುತ್ರ ವಿಜಯೇಂದ್ರ್  ನಾನು ಚುನಾವಣೆಗೆ ಸಿದ್ಧ ಅಂತಿದ್ದರೇ, ಅತ್ತ ಶೆಟ್ಟರ್ ಪುತ್ರಿ ಕೂಡ ಚುನಾವಣೆಗೆ ನಾನು ಟಿಕೇಟ್ ಆಕಾಂಕ್ಷಿ ಎನ್ನುತ್ತಿದ್ದಾರೆ.

ಕೇಂದ್ರ ಸಚಿವ ಸುರೇಶ್ ಅಂಗಡಿ ನಿಧನದಿಂದ ತೆರವಾದ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಚುನಾವಣೆ ಅಖಾಡ ಸಿದ್ಧವಾಗಿದೆ. ಕಾಂಗ್ರೆಸ್ ಅಳೆದು ಸುರಿದು ತೂಗಿ  ಮಾಜಿ ಸಚಿವ ಹಾಗೂ ಹಾಲಿ ಶಾಸಕ ಸತೀಶ್ ಜಾರಕಿಹೊಳಿಗೆ ಟಿಕೇಟ್ ನೀಡಿದೆ. ಇತ್ತ ಬಿಜೆಪಿಯಲ್ಲಿ ಇನ್ನೂ ಟಿಕೇಟ್ ಅಂತಿಮವಾಗಬೇಕಿದ್ದು, ನಿಧನರಾದ ಅಂಗಡಿ ಪುತ್ರಿ ಶೃದ್ಧಾ ಶೆಟ್ಟರ್ ಪ್ರಭಲ ಟಿಕೇಟ್ ಆಕಾಂಕ್ಷಿಯಾಗಿದ್ದಾರೆ.

ತಂದೆಯ ನಿಧನದ ನಂತರ ಕ್ಷೇತ್ರದಲ್ಲಿ ಓಡಾಟ ಹಾಗೂ ಕಾರ್ಯಕರ್ತರ ಭೇಟಿ ಹೊರತುಪಡಿಸಿದರೇ ವಿಶೇಷ ರಾಜಕೀಯ ಅನುಭವವಿಲ್ಲದ ಶೃದ್ಧಾ ಶೆಟ್ಟರ್  ಕರ್ನಾಟಕದ ಹಾಲಿ ಸಚಿವ ಜಗದೀಶ್ ಶೆಟ್ಟರ್ ಸೊಸೆ. ಇದೇ ಕಾರಣಕ್ಕೆ ಬಿಜೆಪಿ ಟಿಕೇಟ್ ಗಿಟ್ಟಿಸುವ ಪ್ರಯತ್ನ ಸುಲಭ ಎಂದುಕೊಂಡು ಟಿಕೇಟ್ ಆಕಾಂಕ್ಷಿಗಳ ಸಾಲಿನಲ್ಲಿ ನಿಂತತಿದೆ.

ಆದರೆ ಬಿಜೆಪಿ ಕುಟುಂಬ ರಾಜಕಾರಣಕ್ಕೆ ಮಣೆ ಹಾಕೋದಿಲ್ಲ ಎಂದು ಹಲವಾರು ಭಾರಿ ಘೋಷಿಸಿದ್ದು, ಶೃದ್ಧಾ ಶೆಟ್ಟರ್ ಗೆ ಟಿಕೇಟ್ ನೀಡಿದರೆ ಹೇಳೊದೊಂದು ಮಾಡೊದೊಂದು ಎಂಬುದು ಬಹುತೇಕ ಖಚಿತವಾಗಲಿದೆ. ಶೃದ್ಧಾ ಶೆಟ್ಟರ್ ಈಗಾಗಲೇ ಹೈಕಮಾಂಡ್ ಸೇರಿದಂತೆ ಹಲವು ಬಿಜೆಪಿ ನಾಯಕರನ್ನು ಭೇಟಿ ಮಾಡಿದ್ದು, ತಾವು ತಂದೆಯ ಕ್ಷೇತ್ರದ ಟಿಕೇಟ್ ಆಕಾಂಕ್ಷಿ ಎಂಬುದನ್ನು ಮನವರಿಕೆ ಮಾಡಿಸಿದ್ದಾರೆ ಎನ್ನಲಾಗಿದೆ.

ಈ ಮಧ್ಯೆ ಹಿಂದೂಪರ ಸಂಘಟನೆಯ ಮುಖ್ಯಸ್ಥ ಹಾಗೂ ಹೋರಾಟಗಾರ ಪ್ರಮೋದ್ ಮುತಾಲಿಕ್ ಬಿಜೆಪಿಯಿಂದ ಟಿಕೇಟ್ ಗೆ ಆಕಾಂಕ್ಷಿಯಾಗಿದ್ದು, ನನ್ನ ಇದುವರೆಗಿನ ಹೋರಾಟದ ಕರ್ಮಭೂಮಿ ಬೆಳಗಾವಿ.ಇದನ್ನೆಲ್ಲ ಪರಿಗಣಿಸಿ ಬಿಜೆಪಿ ನನಗೆ ಟಿಕೇಟ್ ನೀಡಬೇಕೆಂದು ನಾನು ಬಯಸುತ್ತೇನೆ ಎಂದಿದ್ದಾರೆ.

ಸಧ್ಯ ಬಿಜೆಪಿ ಹೈಕಮಾಂಡ್ ಬೆಳಗಾವಿ ಕ್ಷೇತ್ರದಲ್ಲಿ ಯಾರಿಗೆ ಟಿಕೇಟ್ ಎಂಬುದನ್ನು ಅನೌನ್ಸ್ ಮಾಡಿಲ್ಲ. ಹೀಗಾಗಿ ಒಂದೆಡೆ ಶೃದ್ಧಾ ಪರ ಬ್ಯಾಟಿಂಗ್ ನಡೆದಿದ್ದರೇ ಇನ್ನೊಂದೆಡೆ ಮುತಾಲಿಕ್ ಪರ ಸಹ ಕೆಲ ನಾಯಕರು ಹೈಕಮಾಂಡ್ ಗೆ ಮನವಿ ಸಲ್ಲಿಸಲಿದ್ದಾರೆ ಎನ್ನಲಾಗಿದೆ.

ಇನ್ನು ಸಿಎಂ ಪುತ್ರ ಹಾಗೂ ರಾಜ್ಯ ಬಿಜೆಪಿ ಯುವನಾಯಕ ವಿಜಯೇಂದ್ರ್ ಹೆಸರು ಕೂಡ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಕೇಳಿಬಂದಿದೆ. ಇದಕ್ಕೆ ಪೂರಕ ಎಂಬಂತೆ ಸಭೆಯೊಂದರಲ್ಲಿ ಮಾತನಾಡಿದ ವಿಜಯೇಂದ್ರ್ ಪಕ್ಷ ಕರ್ನಾಟಕದ ಯಾವ ಪ್ರದೇಶದಿಂದ  ಟಿಕೇಟ್ ನೀಡಿದರೂ ಚುನಾವಣೆಗೆ ಸ್ಪರ್ಧಿಸಲು ಸಿದ್ಧ ಎಂದಿದ್ದಾರೆ.

ಹೀಗಾಗಿ ಬೆಳಗಾವಿ ಲೋಕಸಭಾ ಕ್ಷೇತ್ರದ ವಿಚಾರದಲ್ಲಿ ಬಿಜೆಪಿ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಣಯ ಹಲವು ಕುತೂಹಲ ಮೂಡಿಸಿದೆ. ಅಷ್ಟೇ ಅಲ್ಲ ಹಲವು ಕ್ಷೇತ್ರಗಳ ಚುನಾವಣೆ ಸಂದರ್ಭದಲ್ಲಿ ತೆರೆಮರೆ ಕಾಯಿಯಂತೆ ಇದ್ದವರಿಗೆ ಟಿಕೇಟ್ ನೀಡಿ ಅಚ್ಚರಿ ಮೂಡಿಸಿದ ಬಿಜೆಪಿ ಹೈಕಮಾಂಡ್ ಬೆಳಗಾವಿ ಕ್ಷೇತ್ರದಲ್ಲಿ ಕುಟುಂಬ ರಾಜಕಾರಣಕ್ಕೆ ಮಣೆ ಹಾಕುತ್ತಾ? ಅಥವಾ ಪಕ್ಷದ ಸಿದ್ಧಾಂತಕ್ಕೆ ಒತ್ತು ನೀಡುತ್ತಾ ಅನ್ನೋದನ್ನು ಕಾದು ನೋಡಬೇಕಿದೆ.

Comments are closed.