ಸೋಮವಾರ, ಏಪ್ರಿಲ್ 28, 2025
HomeBreakingಬೈಕ್ ಮಾರಿ ಜನರಿಗೆ ಆಕ್ಸಿಜನ್ ಒದಗಿಸುತ್ತೇನೆ….! ಮೆಚ್ಚುಗೆಗೆ ಪಾತ್ರವಾಯಿತು ಬಾಲಿವುಡ್ ನಟನ ನಿರ್ಧಾರ…!!

ಬೈಕ್ ಮಾರಿ ಜನರಿಗೆ ಆಕ್ಸಿಜನ್ ಒದಗಿಸುತ್ತೇನೆ….! ಮೆಚ್ಚುಗೆಗೆ ಪಾತ್ರವಾಯಿತು ಬಾಲಿವುಡ್ ನಟನ ನಿರ್ಧಾರ…!!

- Advertisement -

ಕೊರೋನಾ ಎರಡನೇ ಅಲೆ ದೇಶವನ್ನು ನಲುಗಿಸಿದ್ದು, ಜನರು ವೈದ್ಯಕೀಯ ಸೌಲಭ್ಯಗಳಿಗಾಗಿ ಪರದಾಡುತ್ತಿದ್ದಾರೆ. ಈ ಮಧ್ಯೆ ಜನರ ಸಂಕಷ್ಟಕ್ಕೆ ಕೆಲ ನಟ-ನಟಿಯರು ಮಿಡಿದಿದ್ದು, ಕೈಲಾದ ಸಹಾಯ ಮಾಡುತ್ತಿದ್ದಾರೆ. ಸೋನುಸೂದ್, ಅಜಯ್ ದೇವಗನ್,ಸ್ಯಾಂಡಲ್ ವುಡ್ ನ ಜಗ್ಗೇಶ್, ಸುನಿಲ್ ಶೆಟ್ಟಿ ಸಹಾಯ ಹಸ್ತ ಚಾಚಿದ ಬೆನ್ನಲ್ಲೇ ಬಾಲಿವುಡ್ ನಟನೊಬ್ಬ ಬೈಕ್ ಮಾರಿ ಅಗತ್ಯ ಉಳ್ಳವರಿಗೆ ನೆರವಾಗಲು ಮುಂಧಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿ ಗಮನ ಸೆಳೆದಿದ್ದಾರೆ.

https://kannada.newsnext.live/breaking/bihar-patna-marriage-corona-effect-stick-exchange-hara/amp/

ಹಿಂದಿ ಹಾಗೂ ತೆಲುಗು ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ  ನಟ ಹರ್ಷವರ್ಧನ್ ರಾಣೆ ಬಡವರಿಗೆ ಆಕ್ಸಿಜನ್ ಸಿಲಿಂಡರ್ ಖರೀದಿಸಲು ತಮ್ಮ ಬೆಲೆಬಾಳುವ ಬೈಕ್ ಮಾರುವುದಾಗಿ ಘೋಷಿಸಿದ್ದಾರೆ. 

ಈ ಬಗ್ಗೆ ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿರುವ ಹರ್ಷವರ್ಧನ್, ಕೊರೋನಾ ವೈರಸ್ ಎರಡನೇ ಅಲೆಗೆ ಜನರು ಕಂಗಾಲಾಗಿದ್ದಾರೆ.  ಆಸ್ಪತ್ರೆಯಲ್ಲಿ ಬೆಡ್ ಸಿಗದಷ್ಟು ಪರಿಸ್ಥಿತಿ ಕೆಟ್ಟು ಹೋಗಿದೆ. ಸೆಲೆಬ್ರೆಟಿಗಳು ಜನರ ಕಷ್ಟಕ್ಕೆ ನೆರವಾಗುತ್ತಿದ್ದಾರೆ. ನಾನು ಕೈಲಾದ ಸಹಾಯ ಮಾಡಲು ಬಯಸುತ್ತೇನೆ. ಆಕ್ಸಿಜನ್ ಖರೀದಿಸಿ ಅಗತ್ಯ ಉಳ್ಳವರಿಗೆ ನೀಡಲು ನನ್ನ ಬೈಕ್ ಮಾರಲು ಸಿದ್ಧವಾಗಿದ್ದೇನೆ ಎಂದಿದ್ದಾರೆ.

ಅಷ್ಟೇ ಅಲ್ಲ ಹೈದ್ರಾಬಾದ್ ನಲ್ಲಿ ಉತ್ತಮವಾದ ಆಕ್ಸಿಜನ್ ಸಾಂದ್ರಕಗಳನ್ನು ಖರೀದಿಸಲು ನನಗೆ ಸಹಾಯ ಮಾಡಿ ಎಂದು ಹರ್ಷವರ್ಧನ್ ಪೋಸ್ಟ್ ಹಾಕಿದ್ದಾರೆ. ಅಷ್ಟೇ ಅಲ್ಲ ತಮ್ಮ ಬೈಕ್ ಪೋಟೋವನ್ನು  ಇನ್ ಸ್ಟಾಗ್ರಾಂನಲ್ಲಿ ಹರ್ಷವರ್ಧನ್ ಹಂಚಿಕೊಂಡಿದ್ದಾರೆ.

https://kannada.newsnext.live/corona/oxigen-shortage-23-death-chamarajanagar-sureshkumar-negligency/amp/

ಕೇವಲ ಹರ್ಷವರ್ಧನ್ ಮಾತ್ರವಲ್ಲದೇ ಹಲವರು ಜನರಿಗೆ ನೆರವಾಗಲು ಸಿದ್ಧವಾಗಿದ್ದು, ಸ್ಯಾಂಡಲ್ ವುಡ್ ನ ಜಗ್ಗೇಶ್ ಆಕ್ಸಿಜನ್ ಸಿಲಿಂಡರ್ ಒದಗಿಸಲು ತಾವೇ ಕೆಲಸ ಮಾಡುತ್ತಿದ್ದರೇ, ಸುನಿಲ್ ಶೆಟ್ಟಿ ಬೆಂಗಳೂರಿನ ಜನರಿಗೆ ಆಕ್ಸಿಜನ್ ಒದಗಿಸಲು ಸಿದ್ಧವಾಗಿದ್ದಾರೆ. ಇನ್ನು ಯುವರತ್ನ ಖ್ಯಾತಿಯ ನಟ ಅರ್ಜುನ್ ಗೌಡ ಆಂಬ್ಯುಲೆನ್ಸ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದಾರೆ.

https://kannada.newsnext.live/breaking/sandalwood-meghanaraj-jr-chiru-chiranjivi-sarja-photo-playing/amp/

ಸೋನು ಸೂದ್ ಹಾಗೂ ಅಜಯ್ ದೇವಗನ್ ಮುಂಬೈನಲ್ಲೇ ಸಹಾಯವಾಣಿ ಸ್ಥಾಪಿಸಿ ಜನರಿಗೆ ನೆರವಾಗುತ್ತಿದ್ದಾರೆ.  

RELATED ARTICLES

Most Popular