ಮಂಗಳವಾರ, ಏಪ್ರಿಲ್ 29, 2025
HomeBreakingಕೊರೋನಾ ಆಪ್ತರಕ್ಷಕನಿಗೆ ಸೋಂಕು…! ಸೋನುಸೂದ್ ಕೊರೋನಾ ಟೆಸ್ಟ್ ಪಾಸಿಟಿವ್…!!

ಕೊರೋನಾ ಆಪ್ತರಕ್ಷಕನಿಗೆ ಸೋಂಕು…! ಸೋನುಸೂದ್ ಕೊರೋನಾ ಟೆಸ್ಟ್ ಪಾಸಿಟಿವ್…!!

- Advertisement -

ಕೊರೋನಾ ಮೊದಲ ಅಲೆಯಿಂದ ಲಾಕ್ ಡಾನ್ ಆದಾಗ ಮುಂಬೈ ಸೇರಿದಂತೆ ದೇಶದ ವಿವಿಧೆಡೆಯ  ಜನತೆಗೆ ಸಹಾಯ ಹಸ್ತ ಚಾಚಿದ್ದ ಬಾಲಿವುಡ್ ಖಳನಟನಿಗೆ ಕೊರೋನಾ ಸೋಂಕು ತಗುಲಿದೆ. ಮುಂಬೈ ಹಾಗೂ ಮಹಾರಾಷ್ಟ್ರದಲ್ಲಿ ಕೊರೋನಾ ಸೋಂಕು ಉಲ್ಬಣಿಸಿ ಲಾಕ್ ಡೌನ್ ಜಾರಿಯಾದ ಬೆನ್ನಲ್ಲೇ ಸೋನು ಸೂದ್ ಕೂಡ ಕೊರೋನಾ ಪಾಸಿಟಿವ್ ಆಗಿದ್ದಾರೆ.

ನಟ ಸೋನು ಸೂದ್ ಕರೋನಾ ಮೊದಲ ಅಲೆಯಿಂದ ಲಾಕ್ ಡೌನ್ ಆದಾದ ಸಾವಿರಾರು ಜನರಿಗೆ ತಮ್ಮ ತಮ್ಮ ಊರುಗಳಿಗೆ ತೆರಳಲು ನೆರವಾಗಿದ್ದರು. ಅಷ್ಟೇ ಅಲ್ಲ ಸಾವಿರಾರು ಜನರಿಗೆ ವಿವಿಧ ಸಹಾಯ ಮಾಡಿದ್ದರು. ಆದರೆ ಎರಡನೇ ಅಲೆಯ ವೇಳೆ ಸ್ವತಃ ಸೋನು ಸೂದ್ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ.

‘ಈ ವಿಚಾರವನ್ನು ಸ್ವತಃ ಸೋನು ಸೂದ್ ಟ್ವೀಟರ್ ನಲ್ಲಿ ಹಂಚಿಕೊಂಡಿದ್ದಾರೆ. ನನ್ನ ಕೊರೋನಾ ಟೆಸ್ಟ್ ಪಾಸಿಟಿವ್ ಆಗಿದೆ.

ಚಿಂತೆಯ ಅಗತ್ಯವಿಲ್ಲ. ನನ್ನನ್ನು ನಾನು ಕ್ವಾರಂಟೈನ್ ಮಾಡಿಕೊಂಡಿದ್ದೇನೆ. ಈಗ ನನ್ನ ಬಳಿ ಮೊದಲಿಗಿಂತ ಜಾಸ್ತಿ ಸಮಯ ಸಿಗಲಿದೆ. ನಿಮ್ಮ ಸಹಾಯಕ್ಕೆ ಬರಲು. ಹೀಗಾಗಿ ನೆನಪಿರಲಿ ನಿಮ್ಮ ಯಾವುದೇ ಕಷ್ಟಕ್ಕೆ ನಾನಿದ್ದೇನೆ ಎಂದು ಸೂದ್ ಟ್ವೀಟ್ ಮಾಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಸೋನು ಸೂದ್ ಗೆ ಕರೋನಾ ತಗುಲಿದ ಸುದ್ದಿ ಪ್ರಚಾರವಾಗುತ್ತಿದ್ದಂತೆ ಅಭಿಮಾನಿಗಳು ಆತಂಕಿತರಾಗಿದ್ದು, ಆದಷ್ಟು ಬೇಗ ಗುಣಮುಖರಾಗಿ ಎಂದು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.

ಕೆಲದಿನಗಳಹಿಂದೆಯಷ್ಟೇ ಸ್ಪೈಸ್ ಜೆಟ್ ಸೋನು ಸೂದ್ ಸಮಾಜವೇಳೆ ಮನ್ನಿಸಿ ಫ್ಲೈಟ್ ಮೇಲೆ ಸೋನು ಸೂದ್ ಭಾವಚಿತ್ರ ಹಾರಿಸುವ ಮೂಲಕ ಗೌರವ ಸಲ್ಲಿಸಿತ್ತು. ಆದರೆ ಈಗ ಸೋನುಸೂದ್ ಕ್ವಾರಂಟೈನ್ ಆಗಿದ್ದು, ಅಗತ್ಯ ಮನವಿಗಳಿಗೆ ಸ್ಪಂದಿಸುತ್ತೇನೆ ಎಂಬ ಭರವಸೆ ನೀಡಿದ್ದಾರೆ.

RELATED ARTICLES

Most Popular