ಇಂದು ವಿಶ್ವ ಯೋಗ ದಿನಾಚರಣೆ. ಯೋಗಾಭ್ಯಾಸದಲ್ಲಿ ಬಾಲಿವುಡ್, ಸ್ಯಾಂಡಲ್ ವುಡ್ ಸೆಲೆಬ್ರೆಟಿಗಳು ಹಿಂದೆ ಬಿದ್ದಿಲ್ಲ. ಬಾಲಿವುಡ್ ನಟಿ ರಾಧಿಕಾ ಮದನ್ ಈಜುಕೊಳದಲ್ಲಿ ಯೋಗಾಭ್ಯಾಸ ಮಾಡೋ ವಿಡಿಯೋ ಮೂಲಕ ಯೋಗದಿನಕ್ಕೂ ಮಾದಕತೆ ಟಚ್ ನೀಡಿದ್ದಾರೆ.

ಯೋಗವನ್ನು ಎಲ್ಲಾದ್ರೂ ಮಾಡಬಹುದು ಎಂಬ ಮಾತನ್ನು ರಾಧಿಕಾ ಮದನ್ ಸರಿಯಾಗಿ ಉಪಯೋಗಿಸಿಕೊಂಡಿದ್ದಾರೆ. ಈಜುಕೊಳದಲ್ಲಿ ಶವಾಸನ ಸೇರಿದಂತೆ ಹಲವು ಯೋಗ ಭಂಗಿಯಲ್ಲಿ ಕಾಣಿಸಿಕೊಂಡು ಅಭಿಮಾನಿಗಳಿ ಎದೆ ಬಡಿತ ಹೆಚ್ಚಿಸಿದ್ದಾರೆ.

ವರ್ಕೌಟ್ ಮಿಸ್ ಮಾಡಲ್ಲ ಎಂಬ ತಲೆಬರಹದೊಂದಿಗೆ ಈಜುಕೊಳದಲ್ಲಿ ವರ್ಕೌಟ್ ಮಾಡ್ತಿರೋ ವಿಡಿಯೋವನ್ನು ಇನ್ ಸ್ಟಾಗ್ರಾಂನಲ್ಲಿ ರಾಧಿಕಾ ಮದನ್ ಪೋಸ್ಟ್ ಮಾಡಿದ್ದಾರೆ.

ರಾಧಿಕಾ ಮದನ್ ವರ್ಕೌಟ್ ವಿಡಿಯೋಗೆ ಸಖತ್ ರೆಸ್ಪಾನ್ಸ್ ವ್ಯಕ್ತವಾಗಿದ್ದು, ಲಕ್ಷಾಂತರ ಅಭಿಮಾನಿಗಳು ಪೋಸ್ಟ್ ಗೆ ಲೈಕ್,ಕಮೆಂಟ್ ಮಾಡಿದ್ದಾರೆ.
https://www.instagram.com/reel/CQQzZVGDKo_/?utm_medium=copy_link
ಅಂಗ್ರೇಜಿ ಮೀಡಿಯಂ ಚಿತ್ರದ ಮೂಲಕ ಬಾಲಿವುಡ್ ಗೆ ಕಾಲಿಟ್ಟ ರಾಧಿಕಾ ಮದನ್ ತಮ್ಮ ಮೈಮಾಟ,ಫಿಟನೆಸ್ ನಿಂದಲೇ ಗುರುತಿಸಿಕೊಂಡಿದ್ದು, ಮಾಡೆಲ್ ಆಗಿಯೂ ರ್ಯಾಂಪ್ ಮೇಲೆ ಹವಾ ಸೃಷ್ಟಿಸಿದ್ದಾರೆ.