ಬುದ್ಧಿವಂತರ ಕ್ರೀಡೆ ಎಂದೇ ಕರೆಸಿಕೊಳ್ಳೋ ಚೆಸ್ ಕ್ಷೇತ್ರದಲ್ಲಿ ಅಸಾಧಾರಣ ಸಾಧನೆಗೈಯ್ದ ವಿಶ್ವನಾಥನ್ ಆನಂದ್ ಕತೆ ಸಿನಿಮಾ ರೂಪದಲ್ಲಿ ತೆರೆಗೆ ಬರಲಿದೆ.ವಿಶ್ವನಾಥ್ ಆನಂದ ಬಯೋಪಿಕ್ ಗೆ ಸಿದ್ಧತೆ ನಡೆದಿದ್ದು, ಮಾಸ್ಟರ್‌ಮೈಂಡ್ ವಿಶ್ವನಾಥನ್ ಕತೆಯನ್ನು ತೆರೆಗೆ ತರಲು ಆನಂದ ಎಲ್ ರೈ ಟೀಂ ಸಜ್ಜಾಗಿದೆ.

ಹಲವು ವರ್ಷಗಳಿಂದ ಚೆಸ್ ಕಿಂಗ್ ವಿಶ್ವನಾಥ್ ಆನಂದ ಕಥೆ ಸಿನಿಮಾ ಆಗಲಿದೆ ಎನ್ನುವ ಮಾತು ಕೇಳಿಬಂದಿತ್ತಾದರೂ ಬಯೋಪಿಕ್ ನಿರ್ಮಾಣಕ್ಕೆ ವಿಶ್ವನಾಥ್ ಆನಂದ ಯಾರಿಗೂ ಅನುಮತಿ ನೀಡಿರಲಿಲ್ಲ. ಈಗ ಆನಂದ್ ಗೆ ಗ್ರೀನ್ ಸಿಗ್ನಲ್ ನೀಡಿದ್ದು, ೨೦೨೧ ರಲ್ಲಿ ಚಿತ್ರ ನಿರ್ಮಾಣವಾಗಲಿದೆ.

ಚೆಸ್ ಮಾಂತ್ರಿಕ ವಿಶ್ಚನಾಥ್ ಆನಂದ್ ಮೊಟ್ಟ ಮೊದಲ ಚೆಸ್ ಗ್ರ್ಯಾಂಡ್ ,ಮಾಸ್ಟರ್ ಜರ್ನಿ,ಅವರ ಬಾಲ್ಯ,ಮೂರು ದಶಕಗಳ ಸುಧೀರ್ಘ ಚೆಸ್ ಕೆರಿಯರ್,ಅವರಿಗೆ ಸಂದ ಗೌರವಗಳು ಸೇರಿದಂತೆ ಸಮಗ್ರವಾದ ಚಿತ್ರಣ ಕತೆಯಲ್ಲಿ ಇರಲಿದ್ದು ಸಿನಿಮಾ ರೂಪದಲ್ಲಿ ಪ್ರೇಕ್ಷಕರಿಗೆ ಸಾಧನೆಯ ಹಾದಿಯ ಚಿತ್ರಣ ನೀಡಲಿದೆ.

ಚಿತ್ರಕ್ಕೆ ಹೆಸರು,ಪಾತ್ರಗಳಿಗೆ ನಟರ ಆಯ್ಕೆ ಪ್ರಕ್ರಿಯೆ ಆರಂಭವಾಗಿದ್ದು 2022 ರ ಆರಂಭದಲ್ಲಿ ಚಿತ್ರ ತೆರೆಗೆ ಬರುವ ನೀರಿಕ್ಷೆ ಇದೆ. ಮೂಲಗಳ ಮಾಹಿತಿ ಪ್ರಕಾರ ತಮಿಳು ನಟ ಧನುಷ್ ವಿಶ್ವನಾಥ್ ಆನಂದ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ.

ಒಟ್ಟಿನಲ್ಲಿ ಬಯೋಪಿಕ್ ಸಾಲಿಗೆ ಚೆಸ್ ಮಾಸ್ಟರ್ ಮೈಂಡ್ ಸ್ಟೋರಿ ಹೊಸ ಸೇರ್ಪಡೆಯಾಗಿದ್ದು ಕ್ರೀಡಾಲೋಕದಲ್ಲಿ ಸದ್ದು ಮಾಡುವ ಸಾಧ್ಯತೆ ಇದೆ