ಗ್ಲೋಬಲ್ ಇನ್ ಸ್ಟಾ ರ್ಯಾಂಕ್ ನಲ್ಲೂ ಕ್ಯಾಪ್ಟನ್ ಹವಾ…! ಪ್ರಧಾನಿ ಮೋದಿ ಹಿಂದಿಕ್ಕಿದ ಕೊಹ್ಲಿ…!!

ನವದೆಹಲಿ: ಬ್ಯಾಟ್ ಹಿಡಿದು ಕ್ರೀಡಾಂಗಣಕ್ಕಿಳಿದರೇ ರೆಕಾರ್ಡ್ ಮೇಲೆ‌ ರೆಕಾರ್ಡ್ ಬರೆಯೋ ಟೀಂ ಇಂಡಿಯಾ ಕ್ಯಾಪ್ಟನ್ ಕೊಹ್ಲಿ ಈ ಭಾರಿ ಕ್ರೀಡಾಂಗಣದ ಹೊರಗೂ ಸಾಧನೆ ಮಾಡಿದ್ದಾರೆ.

ಗ್ಲೋಬಲ್‌ ಇನ್ ಸ್ಟಾ ಗ್ರಾಂನಲ್ಲಿ 8 ಕೋಟಿ ಅಭಿಮಾನಿಗಳನ್ನು ಹೊಂದಿದ ಕಾರಣಕ್ಕೆ 11 ನೇ ಸ್ಥಾನ ಪಡೆದಿರುವ ಕೊಹ್ಲಿ ವಿಶ್ವದ ನಾಯಕರಾಗಿ ಬೆಳೆಯುತ್ತಿರುವ ಮೋದಿಯನ್ನು ಹಿಂದಿಕ್ಕಿದ್ದಾರೆ.

ಫಾಲೋವರ್ಸ್ ಗಳ ಸಂಖ್ಯೆ ಆಧರಿಸಿ ಇನ್ ಸ್ಟಾಗ್ರಾಂ ಪ್ರಕಟಿಸುವ ವಿಶ್ವದ 25 ಜನಪ್ರಿಯ ವ್ಯಕ್ತಿಗಳ ಪಟ್ಟಿಯಲ್ಲಿ ಕ್ಯಾಪ್ಟನ್ ಕೊಹ್ಲಿ 11 ಸ್ಥಾನ ಪಡೆದಿದ್ದು ಈ ಸಾಧನೆಗೈಯ್ದ ಮೊದಲ ಭಾರತೀಯ ಎಂಬ ಖ್ಯಾತಿಗೂ ಭಾಜನರಾಗಿದ್ದಾರೆ‌.

ಈ ಪಟ್ಟಿಯಲ್ಲಿ ಮೊದಲ ಸ್ಥಾನ ಪುಟ್ಬಾಲ್ ಆಟಗಾರ ಕ್ರಿಸ್ಟಿನೋ ರೋನಾಲ್ಡ್ ಪಾಲಾಗಿದ್ರೇ, 5 ಕೋಟಿ ಅನುಯಾಯಿಗಳನ್ನು ಹೊಂದಿರುವ ಮೋದಿ 17 ಮತ್ತು 4 ಕೋಟಿ ಅಭಿಮಾನಿಗಳನ್ನು ಹೊಂದಿರುವ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ 24 ನೇ ಸ್ಥಾನದಲ್ಲಿದ್ದಾರೆ.

ಈ ಸಾಧನೆಗೈಯ್ದ ವಿರಾಟ ಕೊಹ್ಲಿ ಭಾರತದ ಪ್ರಧಾನಿ ಮೋದಿ, ಉದ್ಯಮಿಗಳು, ಕ್ರೀಡಾಪಟುಗಳು ಹಾಗೂ ಬಾಲಿವುಡ್ ನಟ-ನಟಿಯರನ್ನೇ ಹಿಂದಕ್ಕಿದ್ದು, ಎಲ್ಲರನ್ನು ಹುಬ್ಬೇರಿಸುವಂತೆ ಮಾಡಿದೆ.

ಕೇವಲ ಕೊಹ್ಲಿ ಮಾತ್ರವಲ್ಲ ಅನುಷ್ಕಾ ಕೂಡಾ ಟಾಪ್ 25 ಯಲ್ಲಿ ಸ್ಥಾನ ಪಡೆಯುವ ಮೂಲಕ ಗ್ಲೋಬಲ್ ಇನ್ ಸ್ಟಾ ದ ಟಾಪ್ 25 ಯಲ್ಲಿ ಸ್ಥಾನ ಪಡೆದ ಮೊದಲ ಭಾರತೀಯ ಕಪಲ್ಸ್ ಎಂಬ ಖ್ಯಾತಿಗೂ ಭಾಜನರಾಗಿದ್ದಾರೆ.

ಕೇವಲ ಇನ್ ಸ್ಟಾ ಗ್ರಾಂ ಮಾತ್ರವಲ್ಲ ಫೇಸ್ ಬುಕ್,ಟ್ವೀಟ್ ನಲ್ಲೂ ಕೊಹ್ಲಿ ಹವಾ ಇದ್ದು, ಟ್ವೀಟರ್ ನಲ್ಲಿ 3.9, ಫೇಸ್ ಬುಕ್ ನಲ್ಲಿ 4.3 ಕೋಟಿ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ.

ಇತ್ತೀಚಿಗಷ್ಟೇ ಮೂರನೇ ವಿವಾಹ ವಾರ್ಷಿಕೋತ್ಸವ ಆಚರಿಸಿದ ಈ ಜೋಡಿ ಮುಂದಿನ ತಿಂಗಳು ಚೊಚ್ಚಲ ಮಗುವಿನ ನೀರಿಕ್ಷೆಯಲ್ಲಿದೆ.

Comments are closed.