ಎಲ್ಲರೂ ಹೊಸ ವರ್ಷದಲ್ಲಿ ಹೊಸ ಹೊಸ ಪೋಸ್ಟ್ ಹಾಕಿ ಅಭಿಮಾನಿಗಳಿಗೆ ವಿಶ್ ಮಾಡ್ತಿದ್ದರೇ ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಮಾತ್ರ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.

ಹೌದು ಮಿಲಿಯನ್ ಗಟ್ಟಲೆ ಅಭಿಮಾನಿಗಳನ್ನು ಹೊಂದಿರುವ ದೀಪಿಕಾ ಪಡುಕೋಣೆ ಇದ್ದಕ್ಕಿದ್ದಂತೆ ತಮ್ಮ ಟ್ವೀಟರ್ ಮತ್ತು ಇನ್ ಸ್ಟಾಗ್ರಾಂನ ಎಲ್ಲ ಹಳೆಯ ಪೋಸ್ಟ್ ಗಳನ್ನು ಡಿಲೀಟ್ ಮಾಡಿದ್ದಾರೆ.

ಡಿಸೆಂಬರ್ 31 ರ ರಾತ್ರಿ ದೀಪಿಕಾ ಪಡುಕೋಣೆ ಎಲ್ಲ ಪೋಸ್ಟ್ ಡಿಲೀಟ್ ಮಾಡಿದ್ದು, ಯಾಕೆ ಇಂಥ ನಿರ್ಧಾರ ಕೈಗೊಂಡ್ರು ಅನ್ನೋದು ಅಭಿಮಾನಿಗಳು ಹಾಗೂ ಬಾಲಿವುಡ್ ಮಂದಿಗೂ ಅಚ್ಚರಿ ಮೂಡಿಸಿದೆ.

ಮಧ್ಯರಾತ್ರಿಯೇ ಪೋಸ್ಟ್ ಗಳು ಡಿಲೀಟ್ ಆಗಿದ್ದರೂ ಈ ಬಗ್ಗೆ ದೀಪಿಕಾ ಯಾವುದೇ ಸ್ಪಷ್ಟನೆ ನೀಡಿಲ್ಲ. ಇನ್ ಸ್ಟಾಗ್ರಾಂನಲ್ಲಿ ಅಂದಾಜು 52.5 ಮಿಲಿಯನ್ ಹಾಗೂ ಟ್ವೀಟರ್ ನಲ್ಲಿ 27.7 ಮಿಲಿಯನ್ ಪಾಲೋವರ್ಸ್ ಹೊಂದಿರುವ ದೀಪಿಕಾ ವಿಶ್ವದ ಇನ್ ಸ್ಟಾ ರ್ಯಾಕಿಂಗ್ ನಲ್ಲೂ ಸ್ಥಾನ ಪಡೆದಿದ್ದಾರೆ.

ದೀಪಿಕಾ ಈ ನಡೆ ಸಾಕಷ್ಟು ಅನುಮಾನ ಮೂಡಿಸಿದ್ದು, ದೀಪಿಕಾ ಪಡುಕೋಣೆ ಸೋಷಿಯಲ್ ಮೀಡಿಯಾ ಅಕೌಂಟ್ ಗಳು ಹ್ಯಾಕ್ ಆಗಿದ್ಯಾ ಅಥವಾ ಬೇಕೆಂದೇ ದೀಪಿಕಾ ಹೀಗೆ ತಮ್ಮ ಸೋಷಿಯಲ್ ಮೀಡಿಯಾ ಪೋಸ್ಟ್ ಗಳನ್ನು ಡಿಲೀಟ್ ಮಾಡಿದ್ದಾರಾ ಅನ್ನೋದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ಸಧ್ಯ ಜೈಪುರ ದಲ್ಲಿ ಪತಿಯೊಂದಿಗೆ ವೆಕೆಶನ್ ಎಂಜಾಯ್ ಮಾಡ್ತಿರೋ ದೀಪಿಕಾ ಬಾಲಿವುಡ್ ನ ಹೆಸರಿಡದ ಚಿತ್ರವೊಂದರಲ್ಲಿ ನಟಿಸುತ್ತಿದ್ದು ಪ್ರಭಾಸ್ ಹಾಗೂ ಶಾರೂಕ್ ಜೊತೆಗಿನ ಇನ್ನೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ.

2020 ದೀಪಿಕಾ ಪಾಲಿಗೆ ಕಹಿನೆನಪಿನ ವರ್ಷವಾಗಿದ್ದು ಬಾಲಿವುಡ್ ಡ್ರಗ್ಸ್ ದಂಧೆಯಲ್ಲಿ ದೀಪಿಕಾ ಹೆಸರು ಕೇಳಿಬಂದಿತ್ತು. ಹೀಗಾಗಿ ಈ ನೆನಪುಗಳನ್ನು ಮುಂದಿನ ವರ್ಷಕ್ಕೆ ಕೊಂಡೊಯ್ಯೋದು ಬೇಡ ಎಂಬ ಕಾರಣಕ್ಕೆ ದೀಪಿಕಾ ತಮ್ಮ ಪೋಸ್ಟ್ ಗಳನ್ನು ಡಿಲೀಟ್ ಮಾಡಿದ್ದಾರೆ ಎಂದು ಹೇಳಲಾಗ್ತಿದೆ.

ಕಳೆದ ಮೂರು ಗಂಟೆಯ ಹಿಂದೆ ದೀಪಿಕಾ ಪಡುಕೋಣೆ ಹೊಸ ವರ್ಷದ ಶುಭಾಶಯದ ಜೊತೆ ಸೋಷಿಯಲ್ ಮೀಡಿಯಾಗೆ ಮರಳಿದ್ದು, ಪೋಸ್ಟ್ ಡಿಲೀಟ್ ಬಗ್ಗೆ ಏನು ಹೇಳಿಕೊಂಡಿಲ್ಲ