ಕೊರೋನಾ ಲಾಕ್ ಡೌನ್ ವೇಳೆ ನಾಯಕತ್ವ ಹಾಗೂ ಮಾನವೀಯತೆ ಮೂಲಕ ವಿಶ್ವದ ಗಮನ ಸೆಳೆದ ಬಾಲಿವುಡ್ ನ ಖಳನಾಯಕ ಸೋನು ಸೂದ್ ರೀಲ್‌ನಲ್ಲಿ ಹಿರೋ ಸ್ಥಾನಕ್ಕೆ ಪ್ರಮೋಶನ್ ಪಡೆದಿದ್ದಾರೆ.

ಬಾಲಿವುಡ್ ಚಿತ್ರವೊಂದರಲ್ಲಿ ಸೋನು ಸೂದ್ ನಾಯಕನಾಗಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಕಿಸಾನ್ ಎಂಬ ಚಿತ್ರದಲ್ಲಿ ಸೋನು ಸೂದ್ ಮೊದಲ ಬಾರಿಗೆ ನಾಯಕನಾಗಿ ನಟಿಸಲಿದ್ದಾರೆ.

ಟೈಟಲ್ ನಲ್ಲೇ ಹೇಳಿರುವಂತೆ ಇದೊಂದು ರೈತರ ಕತೆಯಾಗಿದ್ದು, ಸೋನು ಸೂದ್ ನಾಯಕರಾಗಿ ತೆರೆಮೇಲೆಬರಲಿದ್ದಾರೆ.
ನಿವಾಸ್ ನಿರ್ದೇಶನದಲ್ಲಿ ಮೂಡಿ ಬರಲಿರುವ ಈ ಚಿತ್ರವನ್ನು ರಾಜ್ ಶಾಂಡಿಲ್ಯ ನಿರ್ಮಿಸಲಿದ್ದಾರೆ.ಸೋನು ಸೂದ್ ನಾಯಕರಾಗುತ್ತಿರುವ ಸಂಗತಿ ಅಧಿಕೃತವಾಗುತ್ತಿದ್ದಂತೆ ಬಾಲಿವುಡ್ ಬಿಗ್ ಬೀ ಅಮಿತಾಬ್ ಬಚ್ಚನ್ ಸೋನು ಸೂದ್ ಗೆ ಟ್ವೀಟ್ ಮೂಲಕ ಶುಭಹಾರೈಸಿದ್ದಾರೆ.
ಲಾಕ್ ಡೌನ್ ವೇಳೆ ಜನರ ನೆರವಿಗೆ ಧಾವಿಸಿದ್ದ ಸೋನು ಸೂದ್ ಬರೋಬ್ಬರಿ ೭ ಲಕ್ಷ ಜನರನ್ನು ಅವರ ಮನೆಗಳಿಗೆ ಕಳುಹಿಸಲು ನೆರವಾಗಿದ್ದಲ್ಲದೇ, ಮುಂಬೈನಲ್ಲಿ 45 ಸಾವಿರ ಜನರಿಗೆ ಪ್ರತಿನಿತ್ಯ ಆಹಾರ ಒದಗಿಸಿದ್ದರು.

ದೇಶದಾದ್ಯಂತ ಕೆಲಸ ಕಳೆದುಕೊಂಡವರಿಗೆ,ಕೃಷಿಕರಿಗೆ,ಅನ್ನದಾತರಿಗೆ,ಬಡ ಹೆಣ್ಣುಮಕ್ಕಳಿಗೆ ನೆರವಾಗಿದ್ದರು.