ಹಿಂದಿ ಕಿರುತೆರೆ ಲೋಕದಲ್ಲಿ ತನ್ನ ಸೌಂದರ್ಯ ಹಾಗೂ ನಟನೆಯಿಂದಲೇ ಗುರುತಿಸಿಕೊಂಡ ನಟಿ ನಿಖಿತಾ ಶರ್ಮಾ ಯಾವ ಬಾಲಿವುಡ್ ಬೆಡಗಿಗೂ ಟಕ್ಕರ್ ಕೊಡಬಲ್ಲ ಅಂದಗಾತಿ.

ಹಲವು ಸೌಂದರ್ಯ ಸ್ಪರ್ಧೆಯ ಕಿರೀಟ ಹೊತ್ತಿರುವ ನಿಖಿತಾ ಲಾಕ್ಡೌನ್ ಸಮಯದಲ್ಲಿ ತಮ್ಮ ಹಾಟ್ ಪೋಟೋಗಳನ್ನು ಅಭಿಮಾನಿಗಳಿಗಾಗಿ ರಿಲೀಸ್ ಮಾಡಿದ್ದಾರೆ.

ಒಂದಕ್ಕಿಂತ ಒಂದು ಕಣ್ಸೆಳೆಯೋ ಪೋಟೋಗಳ ಜೊತೆ ಮಿಂಚುತ್ತಿರೋ ನಿಖಿತಾ, ದೋ ದಿಲ್ ಏಕ್ ಜಾನ್ ಸೀರಿಯಲ್ ಮೂಲಕ ಹಿಂದಿ ಕಿರುತೆರೆ ಕ್ಷೇತ್ರಕ್ಕೆ ಕಾಲಿರಿಸಿದ್ದರು.

ಇದುವರೆಗೂ 10 ಕ್ಕೂ ಹೆಚ್ಚು ಹಿಂದಿ ಸೀರಿಯಲ್ ಗಳ ಲೀಡ್ ರೋಲ್ ಗಳಲ್ಲಿ ಮಿಂಚಿರುವ ನಿಖಿತಾ, 2008 ರಲ್ಲಿ ಮಿಸ್ ಏರ್ ಹೊಸ್ಟೇಸ್ ಟೈಟಲ್ ಕೂಡ ಗೆದ್ದಿದ್ದಾರೆ.

ಇಂಡಿಯನ್ ಪ್ರಿನ್ಸೆಸ್ ಬ್ಯೂಟಿ ಕ್ರೌನ್ ಕೂಡ ಗೆದ್ದಿರುವ ನಿಖಿತಾ, ಪ್ರತಿಷ್ಠಿತ ಎನ್ಲೈಟನ್ ಇಂಡಿಯಾ ಮ್ಯಾಗಜೀನ್ ನ ಕವರ್ ಪೇಜ್ ಕೂಡ ಅಲಂಕರಿಸಿದ್ದಾರೆ.

ಶ್ರೀಮಂತ ಉದ್ಯಮಿ ಮಗಳಾಗಿ ನವದೆಹಲಿಯಲ್ಲಿ ಜನಿಸಿದ ನಿಖಿತಾ ಶರ್ಮಾ ತಮ್ಮದೇ ಆದ ಉದ್ಯಮವನ್ನು ಹೊಂದಿದ್ದು, ಬೇಕರಿ ಉದ್ಯಮದಲ್ಲಿ ಹೆಸರುಗಳಿಸಿದ್ದಾರೆ.

ಇತ್ತೀಚಿಗೆ ಬ್ಲ್ಯಾಕ್ ವಯೋಲಿನ್ ಎಂಬ ಸಿನಿಮಾಗೂ ಬಣ್ಣಹಚ್ಚಿದ್ದಾರೆ ಲಿಖಿತಾ. ಈ ಸಿನಿಮಾ ಓಓಟಿ ಫ್ಲ್ಯಾಟ್ ಯಲ್ಲಿ ರಿಲೀಸ್ ಆಗಲಿದೆ ಎನ್ನಲಾಗುತ್ತಿದೆ.