ತಮಿಳು.ತೆಲುಗು,ಹಿಂದಿ ಮಲೆಯಾಳಂ ಚಿತ್ರರಂಗದಲ್ಲಿ ಮಿಂಚಿದ ಈ ಚೆಲುವೆಗೆ ಈಗ 44 ಹರೆಯ. ಆದರೆ ವಯಸ್ಸು ಅನ್ನೋದು ಕೇವಲ ನಂಬರ್ ಅನ್ನೋದನ್ನು ಸಾಬೀತುಮಾಡುವಂತಿದೆ ಇವರ ಮಾದಕ ಪೋಟೋಗಳು.

ಲಾಕ್ ಡೌನ್ ಫ್ರೀ ಟೈಂನಲ್ಲಿ ತಮ್ಮ ಬಿಕನಿ ಪೋಟೋಗಳನ್ನು ಇನ್ ಸ್ಟಾಗ್ರಾಂ ನಲ್ಲಿ ಪೋಸ್ಟ್ ಮಾಡುತ್ತ ಸಮಯ ಕಳೆಯುತ್ತಿದ್ದಾರೆ ಫೆಮಿನಾ ಮಿಸ್ ಇಂಡಿಯಾ ಇಂಟರ್ ನ್ಯಾಷನಲ್ ಖ್ಯಾತಿಯ ಪೂಜಾ ಬಾತ್ರಾ .

ಪೂಜಾಬಾತ್ರಾ ಮಾದಕ ಮೈಮಾಟದ, ಹಾಟ್ ಪೋಟೋಗಳನ್ನು ನೋಡಿದವರ್ಯಾರು ಆಕೆಗೆ 44 ವರ್ಷ ವಯಸ್ಸು ಎಂದರೇ ನಂಬಲು ಸಾಧ್ಯವಿಲ್ಲ. 20 ಹರೆಯದ ಯುವತಿಯರನ್ನು ನಾಚಿಸುವಂತ ಸೌಂದರ್ಯದೊಂದಿಗೆ ಯುವಹೃದಯಗಳ ಮನ ಗೆದ್ದಿದ್ದಾರೆ ಪೂಜಾ.

ಉತ್ತರ ಪ್ರದೇಶದ ಫಾಜಿಯಾಬಾದ್ ಮೂಲದ ಪೂಜಾ ಬಾತ್ರಾ ನಟಿಯಾಗಿ,ಮಾಡೆಲ್ ಹಾಗೂ ಹಲವು ಸೌಂದರ್ಯ ಸ್ಪರ್ಧೆಗಳ ಟೈಟಲ್ ಹೋಲ್ಡರ್ ಆಗಿ ಮೆರೆದವರು.

1997 ರಲ್ಲಿ ವಿಶ್ವವಿದಾತಾ ಸಿನಿಮಾದ ಮೂಲಕ ಬಾಲಿವುಡ್ ಪ್ರವೇಶಿಸಿದ ಪೂಜಾ ಬಾತ್ರಾ, ತಮಿಳು,ತೆಲುಗು,ಮಲೆಯಾಳಂ,ಪಂಜಾಬಿ ಭಾಷೆಯಲ್ಲಿ ನಟಿಸಿದ್ದಾರೆ.

1998 ರಲ್ಲಿ ವಿರಾಸತ್ ಚಿತ್ರದ ಅಭಿನಯಕ್ಕಾಗಿ ಫಿಲಂಫೇರ್ ಅವಾರ್ಡ್ ಪಡೆದ ಪೂಜಾ ಬಾತ್ರಾ ಬಹುಕಾಲ ಸಿನಿರಂಗದಲ್ಲಿ ಉಳಿಯಲಿದ್ದರೂ ತಮ್ಮ ಮಾದಕ ಸೌಂದರ್ಯದಿಂದ ಇಂದಿಗೂ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸುತ್ತಿದ್ದಾರೆ.