ಸೋಮವಾರ, ಏಪ್ರಿಲ್ 28, 2025
HomeBreakingಎದುರಾಳಿಯ ರಕ್ತ ಚಿಮ್ಮಿಸಿದ ಲೇಡ್ ಫೈರ್ ಬ್ರ್ಯಾಂಡ್ …! ವೈರಲ್ ಆದ ಕಂಗನಾ ಪೋಟೋದ ಸತ್ಯವೇನು...

ಎದುರಾಳಿಯ ರಕ್ತ ಚಿಮ್ಮಿಸಿದ ಲೇಡ್ ಫೈರ್ ಬ್ರ್ಯಾಂಡ್ …! ವೈರಲ್ ಆದ ಕಂಗನಾ ಪೋಟೋದ ಸತ್ಯವೇನು ಗೊತ್ತಾ?!

- Advertisement -

ಇತ್ತೀಚಿನ ದಿನಗಳಲ್ಲಿ ವಿವಾದಾತ್ಮಕ ಟ್ವೀಟ್ ಹಾಗೂ ನೇರನುಡಿಯಿಂದ ವಿವಾದ ಸೃಷ್ಟಿಸಿದ ಬೆಡಗಿ ಕಂಗನಾ ರನಾವುತ್.ಮಹಾರಾಷ್ಟ್ರ ಸರ್ಕಾರದ ವಿರುದ್ಧ ಫೈರ್ ಬ್ರ್ಯಾಂಡ್ ನಂತೆ ಸಿಡಿದ ಕಂಗನಾ ರಕ್ತಸಿಕ್ತ ಪೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇಷ್ಟಕ್ಕೂ ಕಂಗನಾ ಕೊಲೆ ಮಾಡಿದ್ದು ಯಾರನ್ನು ಅನ್ನೋ ಪ್ರಶ್ನೆ ಸೃಷ್ಟಿಯಾಗಿದೆ.

ಸುತ್ತಚೆಲ್ಲಿದ ರಕ್ತ ಹಾಗೂ ಕೈಯಲ್ಲಿ ಕತ್ತಿ. ಇದು ವೈರಲ್ ಆಗಿರೋ ಕಂಗನಾ ಹೊಸ ಅವತಾರದ ಪೋಟೋ. ಹಾಗಂತ  ಈ ಪೋಟೋನೋಡಿ ಕಂಗನಾ ಯಾರನ್ನು ಕೊಲೆ ಮಾಡಿದ್ರು? ಅಂತ ಟೆನ್ಸನ್ ಆಗಬೇಡಿ.ಕಂಗನಾರ ಬಹುನೀರಿಕ್ಷಿತ ಹೊಸ ಚಿತ್ರ ಧಾಕಡ್ ನ ಫರ್ಸ್ಟ್ ಲುಕ್ ನಲ್ಲಿ ಕಂಗನಾ ಇಂತಹದೊಂದು ರೌದ್ರಾವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

ಧಾಕಡ್ ವಿಭಿನ್ನಿ ಶೀರ್ಷಿಕೆಯ  ಈ ಸಿನಿಮಾ, ಚಿತ್ರತಂಡದ ಹೇಳಿಕೆ ಪ್ರಕಾರ ಅಂತಾರಾಷ್ಟ್ರೀಯ ಮಟ್ಟದ ಸ್ಪೈಥ್ರಿಲ್ಲರ್ ಸಿನಿಮಾ ಆಗಿದ್ದು, ಇದರಲ್ಲಿ ಕಂಗನಾ ಅಗ್ನಿ ಎನ್ನುವ ಸ್ಪೈ ಏಜೆಂಟ್ ರೂಪದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಚಿತ್ರದ ಫರ್ಸ್ಟ್ ಲುಕ್ ಪೋಸ್ಟರ್ ಜೊತೆ ಚಿತ್ರತಂಡ ಸಿನಿಮಾ ರಿಲೀಸ್ ಡೇಟ್ ಕೂಡ ಅನೌನ್ಸ್ ಮಾಡಿದೆ. ಚಿತ್ರ 2021 ರ ಅಕ್ಟೋಬರ್ 1 ರಂದು ತೆರೆಗೆ ಬರಲಿದೆ.

ಪೋಸ್ಟರ್ ನಲ್ಲಿ  ಕತ್ತಿಯಿಂದ ರಕ್ತ ಚಿಮ್ಮಿಸುತ್ತಿರುವ ಕಂಗನಾ ಪೋಸು ನೀಡಿದ್ದು,  ಭಯವಿಲ್ಲದವಳು, ಅಗ್ನಿಯಂತೆ ಉರಿಯುವವಳು, ಅವಳು ಭಾರತದ ಮೊದಲ ಸ್ಫೈ ಎಜೆಂಟ್ ಎಂಬರ್ಥದಲ್ಲಿ ಪೋಸ್ಟ್ ಮಾಡಲಾಗಿದೆ.

ಈ ಚಿತ್ರದಲ್ಲಿ ಅಂತಾರಾಷ್ಟ್ರೀಯ ತಂತಜ್ಞರು ಸೆಟ್ ಸೇರಿದಂತೆ ವಿವಿಧ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದು, ಈ ಮಹಿಳಾ ಪ್ರಧಾನ ಸಿನಿಮಾ ಸಾಕಷ್ಟು ಸದ್ದು ಮಾಡುತ್ತಿದೆ. ಧಾಕಡ್ ಜೊತೆ ಕಂಗನಾ ಜಯಲಲಿತಾ ಬಯೋಪಿಕ್ ತಲೈವಿಯಲ್ಲೂ ನಟಿಸಿದ್ದು, ಈ ಚಿತ್ರ ಬಹುತೇಕ ರಿಲೀಸ್ ಗೆ ಸಿದ್ಧವಾಗಿದೆ.

RELATED ARTICLES

Most Popular