ಸುದೀಪ್ ಸಿನಿಮಾಕ್ಕೆ ಎದುರಾಯ್ತಾ ಟೈಟಲ್ ಕಾಟ….?! ಬದಲಾಗುತ್ತಾ ಫ್ಯಾಂಟಮ್ ಅದೃಷ್ಟ….!!

ಸ್ಯಾಂಡಲ್ ವುಡ್ ಅಭಿನಯ ಚಕ್ರವರ್ತಿ ಸುದೀಪ್ ಬಹುನೀರಿಕ್ಷಿತ ಚಿತ್ರ ಫ್ಯಾಂಟಮ್. ಈಗಾಗಲೇ ಫರ್ಸ್ಟ್ ಲುಕ್ ಮೂಲಕ ಸಾಕಷ್ಟು ಕುತೂಹಲ ನೀರಿಕ್ಷೆ ಮೂಡಿಸಿರುವ  ಈ ಚಿತ್ರತಂಡ ಜ.21 ರಂದು ಬಿಗ್ ಬ್ರೇಕಿಂಗ್ ನೀಡೋದಾಗಿ ಹೇಳಿದೆ. ಆದರೆ ಇದಕ್ಕೂ ಮುನ್ನವೇ ಫ್ಯಾಂಟಮ್ ಟೈಟಲ್ ಬದಲಾವಣೆಯ ಸುದ್ಧಿ ಗಾಂಧಿನಗರದಲ್ಲಿ ಕೇಳಿಬಂದಿದೆ.

ನಟ ಸುದೀಪ್ ಅಭಿನಯದ ವಿಭಿನ್ನ ಕಥಾಹಂದರದ ಸಿನಿಮಾ ಫ್ಯಾಂಟಮ್. ರಂಗಿತರಂಗ ಖ್ಯಾತಿಯ ಅನೂಪ್ ಭಂಡಾರಿ ನಿರ್ದೇಶನದ  ಈ ಸಿನಿಮಾ ಅಂಗಳದಿಂದ  ಈಗ ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದೆ. ಹೌದು ಫ್ಯಾಂಟಮ್ ಟೈಟಲ್ ಬದಲಾಗಲಿದೆಯಂತೆ.

ಯಾವ ಕಾರಣಕ್ಕಾಗಿ ಸಿನಿಮಾ ಟೈಟಲ್ ಬದಲಾಗಲಿದೆ? ನಿಜವಾಗಿಯೂ ಶೂಟಿಂಗ್ ಮುಗಿಸಿ ಬಿಡುಗಡೆ ಹಂತದಲ್ಲಿರೋ ಫ್ಯಾಂಟಮ್ ಟೈಟಲ್ ಬದಲಾವಣೆಯಾಗುತ್ತಾ ಅನ್ನೋ ಪ್ರಶ್ನೆಗಳಿಗೆ ಡೈರೈಕ್ಟರ್ ಅನೂಪ್ ಉತ್ತರಿಸಲು ನಿರಾಕರಿಸಿದ್ದು, ಜ.21 ರ ತನಕ ಕಾಯಲೇ ಬೇಕು ಎಂದಿದ್ದಾರೆ.

ಸುದೀಪ್ ಜ.21 ರಂದು ಬಿಗ್ ಅನೌನ್ಸ್ಮೆಂಟ್ ಇದೆ ಫ್ಯಾಂಟಮ್ ತಂಡದಿಂದ ಎಂದಾಗ ಟೀಸರ್ ರಿಲೀಸ್ ಡೇಟ್ ಇರಬಹುದು ಎಂದು ನೀರಿಕ್ಷಿಸಲಾಗಿತ್ತು. ಆದರೆ ಈಗ ಚಿತ್ತತಂಡ ಅಂದೇ ಟೈಟಲ್ ಬದಲಾವಣೆ ಘೋಷಿಸಲಿದೆ ಎನ್ನಲಾಗುತ್ತಿದೆ. ಚಿತ್ರದಲ್ಲಿ ಸುದೀಪ್ ಕ್ಯಾರೇಕ್ಟರ್ ನೇಮ್ ವಿಕ್ರಾಂತ್ ರೋಣಾ.

ಈ ಕ್ಯಾರೆಕ್ಟರ್ ಸಿನಿಮಾ ಟೈಟಲ್ ಗಿಂತ ಹೆಚ್ಚು ಪ್ರಸಿದ್ಧಿ ಪಡೆದುಕೊಂಡಿರೋದರಿಂದ ಚಿತ್ರತಂಡ  ಫ್ಯಾಂಟಮ್ ಬದಲಿಗೆ ಚಿತ್ರಕ್ಕೆ ವಿಕ್ರಾಂತ್ ರೋಣ ಎಂದೇ ಹೆಸರಿಡಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಎಲ್ಲ ಉಹಾಪೋಹಗಳಿಗೆ ಜ.21 ರಂದು ತೆರೆ ಬೀಳಲಿದ್ದು, ಯಾವುದಕ್ಕೂ ಇನ್ನೆರಡು ದಿನ ಕಾಯಲೇಬೇಕು.

Comments are closed.