ಸದಾ ಒಂದಿಲ್ಲೊಂದು ವಿವಾದಗಳಿಂದಲೇ ಸುದ್ದಿಯಾಗುವ ನಟಿ ಕಂಗನಾ ರನಾವುತ್ ಮತ್ತೊಮ್ಮೆ ವಿವಾದ ಸೃಷ್ಟಿಸಿದ್ದು, ಇಂಡಿಯಾ ಎಂಬುದು ಗುಲಾಮರು ನೀಡಿದ ಹೆಸರು. ದಯವಿಟ್ಟು ಇದನ್ನು ಬದಲಾಯಿಸುವ ಪ್ರಯತ್ನ ಮಾಡಬಹುದೇ ಎಂಬರ್ಥದಲ್ಲಿ ಪೋಸ್ಟ್ ಹಾಕಿ ಹೊಸ ಚರ್ಚೆ ಹುಟ್ಟುಹಾಕಿದ್ದಾರೆ.

ವಿವಾದಾತ್ಮಕ ಟ್ವೀಟ್ ಗಳ ಕಾರಣಕ್ಕೆ ಟ್ವೀಟ್ ಅಕೌಂಟ್ ಕಳೆದುಕೊಂಡಿರುವ ಕಂಗನಾ ಸದ್ಯ ಇನ್ ಸ್ಟಾಗ್ರಾಂನಲ್ಲಿ ಸಕ್ರಿಯವಾಗಿದ್ದಾರೆ. ಹೀಗಾಗಿ ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿರುವ ಕಂಗನಾ, ಇಂಡಿಯಾ ಎಂಬುದು ಗುಲಾಮರು ಕೊಟ್ಟ ಹೆಸರು. ಇದನ್ನು ನಾವು ಬದಲಾಯಿಸಬಹುದಲ್ಲವೇ ಎಂಬರ್ಥದಲ್ಲಿ ಪೋಸ್ಟ್ ಬರೆದಿದ್ದಾರೆ.

ಇನ್ನು ಇದೇ ಪೋಸ್ಟ್ ನಲ್ಲಿ ಭಾರತ್ ಎಂಬ ಹೆಸರನ್ನು ವಿಶ್ಲೇಷಿಸಿರುವ ಕಂಗನಾ, ಭಾವ,ರಾಗ್ ಹಾಗೂ ಥಾಲ್ ಮೂರು ಶಬ್ದಗಳಿಂದ ಭಾರತ ಶಬ್ದದ ಉತ್ಪತ್ತಿಯಾಗಿದೆ ಎಂದಿದ್ದಾರೆ.

ಅಲ್ಲದೇ, ಇಂಡಿಯಾ ತನ್ನ ಪ್ರಾಚೀನ ಆಧ್ಯಾತ್ಮಿಕತೆ ಮತ್ತು ಬುದ್ಧಿವಂತಿಕೆಯಿಂದ ಬೇರೂರಿದ್ದರೇ ಮಾತ್ರ ಅದು ನಮ್ಮ ಉನ್ನತ ನಾಗರೀಕತೆಯ ಆತ್ಮ.ಭಾರತದ ಪ್ರತಿಯೊಬ್ಬರಲ್ಲೂ ಯೋಗ ಆಧ್ಯಾತ್ಮದ ಗೀತೆಯ ಬಗ್ಗೆ ಆಸಕ್ತಿ ಆಳವಾಗಿ ಬೇರೂರಿರಬೇಕು.ಅವಾಗಲೇ ನಾವು ವಿಶ್ವನಾಯಕರಾಗಿ ಹೊರಹೊಮ್ಮಲು ಸಾಧ್ಯ ಎಂದಿದ್ದಾರೆ.

ಇಂಡಿಯಾ ಎಂಬ ಶಬ್ದದ ಶಬ್ದಶಃ ಅರ್ಥ ಸಿಂಧೂ ನದಿಯ ಪೂರ್ವ ಎಂದು. ಇನ್ನಾದರೂ ನಾವು ಈ ಗುಲಾಮರು ಕೊಟ್ಟ ಹೆಸರನ್ನು ಬದಲಾಯಿಸೋಣ ಎಂದಿದ್ದಾರೆ.ಕಂಗನಾ ಈ ಪೋಸ್ಟ್ ಹೊಸ ಚರ್ಚೆ ಹುಟ್ಟುಹಾಕಿದ್ದು ಸೋಷಿಯಲ್ ಮೀಡಿಯಾದಲ್ಲಿ ಪರ ವಿರೋಧ ಅಭಿಪ್ರಾಯ ವ್ಯಕ್ತವಾಗುತ್ತಿದೆ.