Heatwave:ಕೊರೋನಾ ಬೆನ್ನಲ್ಲೇ ಕಾದಿದೆ ಬಿಸಿಗಾಳಿ ಆತಂಕ….! ಬೆಚ್ಚಿಬೀಳಿಸುವಂತಿದೆ ವಿಶ್ವಸಂಸ್ಥೆ ವರದಿ…!!

ಕೊರೋನಾದಿಂದ ನಲುಗಿ ಹೋಗಿರುವ ಮನುಕುಲಕ್ಕೆ ಮತ್ತೊಂದು ಮಾರಣಾಂತಿಕ ಆಘಾತ ಕಾದಿದೆ ಎಂಬ ಆತಂಕಕಾರಿ ಅಂಶವನ್ನು ವಿಶ್ವಸಂಸ್ಥೆ ಧೃಡಪಡಿಸಿದ್ದು, ಸದ್ಯದಲ್ಲೇ ಜಾಗತಿಕ ತಾಪಮಾನ ಹೆಚ್ಚಳದ ಫಲವಾಗಿ ಜಗತ್ತು ಬಿಸಿಗಾಳಿ ಭೀಕರ ಪರಿಣಾಮ ಎದುರಿಸುವಂತಾಗಬಹುದು ಎಂದಿದೆ.

ವಿಶ್ವದಲ್ಲಿ ಜಾಗತಿಕ ತಾಪಮಾನ ಇದೇ ಪ್ರಮಾಣದಲ್ಲಿ ಏರಿಕೆಯಾಗುತ್ತಲೇ ಇದ್ದರೇ, ಇಂಗಾಲದ ಪ್ರಮಾಣವೂ ಹೆಚ್ಚಿ ಮನುಷ್ಯರು ತಡೆದುಕೊಳ್ಳಲು ಸಾಧ್ಯವಾಗದಂತಹ ಬಿಸಿಗಾಳಿಯ ಅಲೆ ಸೃಷ್ಟಿಯಾಗುವ ಸಾಧ್ಯತೆಯನ್ನು ವಿಶ್ವಸಂಸ್ಥೆ ಅಧ್ಯಯನ ವರದಿ ದಾಖಲಿಸಿದೆ.  

ವಿಶ್ವಸಂಸ್ಥೆಯ ಹವಾಮಾನ ಬದಲಾವಣೆಯ ಕುರಿತು ಅಧ್ಯಯನ ನಡೆಸಿದ ಅಂತರ ಸರ್ಕಾರಿ ಸಮಿತಿಯು ಈ ಕುರಿತು ವರದಿ ಸಿದ್ಧಪಡಿಸಿದ್ದು, ಅದರಲ್ಲಿ ಬಿಸಿಗಾಳಿ ಆತಂಕವಿದೆ ಎಂಬ ಅಂಶವನ್ನು ದಾಖಲಿಸಿದೆ. ಈ ವರದಿ 2022 ರ ಫೆಬ್ರವರಿಯಲ್ಲಿ ಸಲ್ಲಿಕೆಯಾಗಲಿದೆ.

ಈ ಕುರಿತು ಆಳವಾದ ಅಧ್ಯಯನ ನಡೆಸಿದ ಸಮಿತಿಯು ಅಂದಾಜು 4 ಸಾವಿರ ಪುಟಗಳ ವರದಿ ಸಿದ್ಧಪಡಿಸಿದೆ. ಈ ಹಿಂದೆಯೂ ವಿಶ್ವದ ಹಲವು ರಾಷ್ಟ್ರಗಳು ಬಿಸಿಗಾಳಿ ಸಮಸ್ಯೆ ಎದುರಿಸಿ ಸಾವುನೋವು ಕಂಡಿವೆ.

ದಾಖಲೆಗಳ ಪ್ರಕಾರ 2015 ರಲ್ಲಿ ಭಾರತ ಹಾಗೂ ಪಾಕಿಸ್ತಾನ ಬಿಸಿಗಾಳಿ ಸಮಸ್ಯೆಯಿಂದ 4 ಸಾವಿರ ನಾಗರೀಕರನ್ನು ಕಳೆದುಕೊಂಡಿದ್ದರೇ, 2003 ರಲ್ಲಿ ಪಶ್ಚಿಮ ಯುರೋಪ್ ನಲ್ಲಿ ಬಿಸಿಗಾಳಿಯಿಂದ 50 ಸಾವಿರ ಜನರು ಜೀವ ಕಳೆದುಕೊಂಡಿದ್ದರು.

Comments are closed.