ಭಾನುವಾರ, ಏಪ್ರಿಲ್ 27, 2025
HomeBreakingಇಂದಿರಾ ಗಾಂಧಿಯಾಗಿ ಕಂಗನಾ…! ತೆರೆಗೆ ಬರಲಿದೆ ಉಕ್ಕಿನ ಮಹಿಳೆಯ ರಾಜಕೀಯ ಚರಿತ್ರೆ…!!

ಇಂದಿರಾ ಗಾಂಧಿಯಾಗಿ ಕಂಗನಾ…! ತೆರೆಗೆ ಬರಲಿದೆ ಉಕ್ಕಿನ ಮಹಿಳೆಯ ರಾಜಕೀಯ ಚರಿತ್ರೆ…!!

- Advertisement -

ಬಾಲಿವುಡ್ ನ ಫೈರ್ ಬ್ರ್ಯಾಂಡ್ ಖ್ಯಾತಿಯ ‌ಕಂಗನಾ ರನಾವುತ್ ವಿವಾದ ಮಾತ್ರವಲ್ಲ ಸಾಲು ಸಾಲು ಚಿತ್ರಗಳಲ್ಲೂ ಬ್ಯುಸಿಯಾಗಿದ್ದಾರೆ. ತಲೈವಿ ಜೀವನಾಧಾರಿತ ಚಿತ್ರದ ಬಳಿಕ ಈಗ ಕಂಗನಾಗೆ ಮತ್ತೊಂದು ಬಯೋಗ್ರಫಿ ಮೂವಿ ಅವಕಾಶ ದಕ್ಕಿದೆ.

ಬಾಲಿವುಡ್ ಸುಶಾಂತ್ ಸಿಂಗ್ ಸಾವಿನ ಬಳಿಕ ಸಾಲು ಸಾಲು ವಿವಾದದಲ್ಲಿ ಹೆಸರು ಮಾಡಿದ ಕಂಗನಾ ರನಾವುತ್ ಈಗ ಸಿಕ್ಕಾಪಟ್ಟೆ ಬ್ಯುಸಿ. ಜಯಲಲಿತಾ ಲೈಫ್ ಸ್ಟೋರಿ ಯಲ್ಲಿ ಅಮ್ಮನಾಗಿ ಕಾಣಿಸಿಕೊಂಡಿದ್ದ ಕಂಗನಾ ಈಗ ಕಾಂಗ್ರೆಸ್ ಮೂಲಬೇರು, ದೇಶದ ಮೊದಲ ಮಹಿಳಾ ಪ್ರಧಾನಿ ಖ್ಯಾತಿಯ ಇಂದಿರಾಗಾಂಧಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಮಾಜಿ ಪ್ರಧಾನಿ ಇಂದಿರಾಗಾಂಧಿ ಕುರಿತಾದ ಈ ಚಿತ್ರವನ್ನು ಸಾಯಿಕಬೀರ್ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರ ಇಂದಿರಾಗಾಂಧಿಯವರ ವೈಯಕ್ತಿಕ ಬದುಕಿನ ಚಿತ್ರಣವಲ್ಲ.‌ಬದಲಾಗಿ ರಾಜಕೀಯ ಮುತ್ಸದ್ಧಿತನದ ಚಿತ್ರ ಎಂದು ಸಿನಿಮಾತಂಡ ಹೇಳಿಕೊಂಡಿದೆ‌.

ಆಫರೇಶನ್ ಬ್ಲೂಸ್ಟಾರ್, ಎಮರ್ಜೆನ್ಸಿ ಸೇರಿದಂತೆ ಇಂದಿರಾಗಾಂಧಿಯ ರಾಜಕೀಯ ಬದುಕಿನ ಸಾಧನೆಯನ್ನು ಈ ಚಿತ್ರ ಬಿಂಬಿಸಲಿದೆ.ಇಂದಿರಾ ಗಾಂಧಿ ನ ಚಿತ್ರದಲ್ಲಿ ರಾಜೀವಗಾಂಧಿ, ಸಂಜಯ್ ಗಾಂಧಿ ,ಮೊರಾರ್ಜಿ ದೇಸಾಯಿ,ಲಾಲ್‌ಬಹಾದ್ದೂರ ಶಾಸ್ತ್ರಿ ಸೇರಿದಂತೆ ದೇಶದ ಹಲವು ಪ್ರಮುಖ ರಾಜಕೀಯ ನಾಯಕರ ಪಾತ್ರ ಇರಲಿದೆ.

ಸ್ಕ್ರಿಪ್ಟ್ ಅಂತಿಮ‌ಹಂತದಲ್ಲಿದ್ದು ಪಾತ್ರಕ್ಕಾಗಿ ನಟ-ನಟಿಯರ ಆಯ್ಕೆ ನಡೆದಿದೆ. ಕಂಗನಾ ರನ್ನು ಇಂದಿರಾರಂತೆ ಸಿದ್ಧಪಡಿಸಲು ಮೇಕಪ್ ಆರ್ಟಿಸ್ಟ್ ಗಳು ಸಿದ್ಧತೆ ನಡೆಸಿದ್ದಾರೆ.

ಕಂಗನಾ ಕೂಡ ಕತೆ ಕೇಳಿ ಆಸಕ್ತಿಯಿಂದ ಚಿತ್ರ ಒಪ್ಪಿಕೊಂಡಿದ್ದಾರಂತೆ.‌ಒಟ್ಟಿನಲ್ಲಿ ಜಯಲಲಿತಾ ಬಳಿಕ ಕಂಗನಾ ಇಂದಿರಾಗಾಂಧಿಯಾಗಿ ಮಿಂಚಲಿದ್ದಾರೆ.

RELATED ARTICLES

Most Popular