ಸೋಮವಾರ, ಏಪ್ರಿಲ್ 28, 2025
HomeBreakingKareena kapoor:ಕೊನೆಗೂ ಬಯಲಾಯ್ತು ಕರೀನಾ ಎರಡನೇ ಪುತ್ರನ ಹೆಸರು…! ತೈಮೂರ್ ತಮ್ಮನಿಗೆ ಜೆಹ್ ಎಂದು ನಾಮಕರಣ…!!

Kareena kapoor:ಕೊನೆಗೂ ಬಯಲಾಯ್ತು ಕರೀನಾ ಎರಡನೇ ಪುತ್ರನ ಹೆಸರು…! ತೈಮೂರ್ ತಮ್ಮನಿಗೆ ಜೆಹ್ ಎಂದು ನಾಮಕರಣ…!!

- Advertisement -

ಬಾಲಿವುಡ್ ನ ತಾರಾ ದಂಪತಿ ಕರೀನಾ ಕಪೂರ್ ಹಾಗೂ ಸೈಫ್ ಅಲಿಖಾನ್ ಸಂಸಾರದ ವಿಷಯ ಅಂದ್ರೇ ಸೋಷಿಯಲ್ ಮೀಡಿಯಾ ಮಂದಿಗೆ ಭಾರಿ ಕುತೂಹಲ. ಕರೀನಾ ಎರಡನೇ ಪುತ್ರನ ಹೆಸರೇನು ಎಂದು ಕುತೂಹಲದಿಂದ ಹುಡುಕುತ್ತಿದ್ದ ನೆಟ್ಟಿಗರಿಗೆ ಕೊನೆಗೂ ಉತ್ತರ ಸಿಕ್ಕಿದ್ದು, ಕರೀನಾ-ಸೈಫ್ ಎರಡನೇ ಪುತ್ರನಿಗೆ ಜೆಹ್ ಎಂದು ನಾಮಕರಣ ಮಾಡಲಾಗಿದೆ.

ಕರೀನಾ ಕಪೂರ್ ಹಾಗೂ ಸೈಫ್ ಅಲಿಖಾನ್ 2012 ರಲ್ಲಿ ಮದುವೆಯಾಗಿದ್ದರು. ನಟ ಸೈಫ್ ಅಲಿಖಾನ್ ಗೆ ಇದು ಎರಡನೇ ಮದುವೆ. 2016 ರಲ್ಲಿ ಸೈಫ್ ಅಲಿಖಾನ್ ಹಾಗೂ ಕರೀನಾಗೆ ಮೊದಲ ಮಗು ಜನಿಸಿತ್ತು. ಗಂಡುಮಗುವಿಗೆ ತೈಮೂರ್ ಎಂದು ನಾಮಕರಣ ಮಾಡಿದ್ದರು.

ಈ ವೇಳೆ ತೈಮೂರ್ ಎಂಬುದು  ಭಾರತದ ಮೇಲೆ ದಾಳಿ ಮಾಡಿದ  ಮುಸ್ಲಿಂ ರಾಜನ ಹೆಸರು ಎಂಬ ಕಾರಣಕ್ಕೆ ವಿವಾದಕ್ಕೆ ಕಾರಣವಾಗಿತ್ತು. ಇದೀಗ 2022 ಫೆಬ್ರವರಿ 21 ರಂದು ಕರೀನಾ ಎರಡನೇ ಮಗುವಿಗೆ ಜನ್ಮ ನೀಡಿದ್ದರು.

https://www.instagram.com/p/COo_jvIp5ZF/?utm_medium=copy_link

ಕರೀನಾಗೆ ಎರಡನೇ ಮಗು ಜನಿಸಿದಾಗಿನಿಂದ ಮಗುವಿಗೆ ಯಾವ ಹೆಸರಿಡಬಹುದೆಂಬ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ಜೋರಾಗಿತ್ತು. ಇದೀಗ ಮಗು ಜನಿಸಿದ 5 ತಿಂಗಳ ಬಳಿಕ ಕರೀನಾ-ಸೈಫ್ ದಂಪತಿ ಮಗುವಿಗೆ ಜೆಹ್ ಎಂದು ನಾಮಕರಣ ಮಾಡಿದ್ದಾರೆ.

ಈ ವಿಚಾರವನ್ನು ಕರೀನಾ ತಂದೆ ರಣಧೀರ್ ಕಪೂರ್ ಖಚಿತಪಡಿಸಿದ್ದಾರೆ. ಜೆಹ್ ಎಂದರೆ ಬ್ಲೂ ಕ್ರೆಸ್ಟೆಡ್ ಬರ್ಡ್ ಎಂದರ್ಥ. ಇದರರ್ಥ ಶುಭವ ತರುವ ಎಂದಾಗಿದ್ದು, ಜೆಹ್ ಎಂಬ ಹೆಸರು ಸಖತ್ ಟ್ರೆಂಡಿಯಾಗಿದೆ ಎನ್ನಲಾಗುತ್ತಿದೆ.

ಒಟ್ಟಿನಲ್ಲಿ ಸೋಷಿಯಲ್ ಮೀಡಿಯಾ ಮಂದಿ ಕುತೂಹಲಕ್ಕೆ  ಕೊನೆಗೂ ತೆರೆ ಬಿದ್ದಿದ್ದು, ತೈಮೂರ್ ತಮ್ಮ ಜೆಹ್ ಎಂಬ ಸಂಗತಿ ಹೊರಬೀಳುತ್ತಿದ್ದಂತೆ ಜೆಹ್ ಪದದ ಅರ್ಥದ ಹಿಂದೆ ಬಿದ್ದಿದ್ದಾರೆ.

RELATED ARTICLES

Most Popular