ಮಧುರ ಕಂಠದ ಗಾಯಕಿ ಶ್ರೇಯಾ ಘೋಷಾಲ್ ತಾಯ್ತನದ ಸಂಭ್ರಮದಲ್ಲಿದ್ದಾರೆ. ಆದರೆ ಕೊರೋನಾ ಶ್ರೇಯಾ ತಾಯ್ತನದ ಸಂಭ್ರಮ ಕಸಿದುಕೊಂಡಿದೆ. ಹೀಗಾಗಿ ಶ್ರೇಯಾ ಘೋಷಾಲ್ ವರ್ಚುವಲ್ ಸೀಮಂತ ಆಚರಿಸಿಕೊಂಡಿದ್ದು, ತಮ್ಮಿಷ್ಟದ ಬಂಗಾಲಿ ಅಡುಗೆಗಳನ್ನು ಸವಿದು ಸಂಭ್ರಮಿಸಿದ್ದಾರೆ.

ಮದುವೆಯಾಗಿ ಹಲವು ವರ್ಷಗಳ ಬಳಿಕ ಗಾಯಕಿ ಶ್ರೇಯಾ ಘೋಷಾಲ್ ತಾಯ್ತನ ದ ಸಂಭ್ರಮದಲ್ಲಿದ್ದಾರೆ. ಇತ್ತೀಚಿಗಷ್ಟೇ ಶ್ರೇಯಾ ಘೋಷಾಲ್ ಸೋಷಿಯಲ್ ಮೀಡಿಯಾದಲ್ಲಿ ಬೇಬಿಬಂಪ್ ಪೋಟೋ ಜೊತೆ ಈ ಖುಷಿ ವಿಚಾರವನ್ನು ಹಂಚಿಕೊಂಡಿದ್ದರು.

ಆದರೆ ತಾಯ್ತನದ ಸಂಭ್ರಮವನ್ನು ಹೆಚ್ಚಿಸುವ ಸೀಮಂತ ಕಾರ್ಯಕ್ರಮ ಆಚರಿಸಿಕೊಳ್ಳಲು ಶ್ರೇಯಾಗೆ ಕೊರೋನಾ ಅಡ್ಡಿಯಾಗಿದೆ.

ಆದರೆ ಶ್ರೇಯಾ ಸ್ನೇಹಿತೆಯರು ಹಾಗೂ ಬಂಧುಗಳು ಕೊರೋನಾ ನಡುವೆಯೂ ಶ್ರೇಯಾಗೆ ವರ್ಚುವಲ್ ಬೇಬಿಶೋವರ್ ನಡೆಸಿದ್ದಾರೆ. ಮನೆ ಅಲಂಕಾರದ ಎಲ್ಲ ವಸ್ತುಗಳನ್ನು ಕಳುಹಿಸಿದ್ದಲ್ಲದೇ ಶ್ರೇಯಾ ಇಷ್ಟಪಡುವ ಬಂಗಾಳಿ ಖಾದ್ಯಗಳನ್ನು ಮಾಡಿ ಕಳುಹಿಸಿದ್ದಾರೆ.

ಹೀಗಾಗಿ ಮಾಮ್ ಟೂ ಬಿ ಅಲಂಕಾರದಲ್ಲಿ ಸಿದ್ಧರಾದ ಶ್ರೇಯಾ ಘೋಷಾಲ್ ಮನೆಯಲ್ಲೇ ಕುಳಿತು ಎಲ್ಲ ಖಾದ್ಯಗಳನ್ನು ಸವಿದು, ಸ್ನೇಹಿತೆಯರು ಹಾಗೂ ಬಂಧುಗಳ ಜೊತೆ ವಿಡಿಯೋ ಕಾಲ್ ನಲ್ಲಿ ಮಾತನಾಡಿ ಖುಷಿಪಟ್ಟಿದ್ದಾರೆ.

ಮುಂಬೈನಲ್ಲಿ ವಾಸವಾಗಿರುವ ಶ್ರೇಯಾ ಘೋಷಾಲ್ ಅಲ್ಲಿ ಅತಿಯಾಗಿರುವ ಕೊರೋನಾ ಎರಡನೇ ಅಲೆ ಸಮಸ್ಯೆಯಿಂದ ಹೊರಗೆ ಹೋಗಲಾಗದ ಸ್ಥಿತಿಯಲ್ಲಿದ್ದಾರೆ. ಹೀಗಾಗಿ ಮನೆಯಲ್ಲೇ ವರ್ಚುವಲ್ ಸೀಮಂತ ನಡೆಸಿದ್ದು, ತಾಯ್ತನದ ಸಂಭ್ರಮವನ್ನು ಎಂಜಾಯ್ ಮಾಡ್ತಿದ್ದಾರೆ.