ಮಂಗಳವಾರ, ಏಪ್ರಿಲ್ 29, 2025
HomeBreakingಸ್ಟಾರ್ ನಟನ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ ಪತ್ನಿ…! ಬಂಧನ ತಪ್ಪಿಸಿಕೊಳ್ಳಲು ನ್ಯಾಯಾಲಯದ ಮೊರೆ...

ಸ್ಟಾರ್ ನಟನ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ ಪತ್ನಿ…! ಬಂಧನ ತಪ್ಪಿಸಿಕೊಳ್ಳಲು ನ್ಯಾಯಾಲಯದ ಮೊರೆ …!!

- Advertisement -

ಸ್ಟಾರ್ ನಟರ ಮೇಲೆ ಕೌಟುಂಬಿಕ ಹಿಂಸೆ ಆರೋಪಗಳು ಬರೋದು ಇದೇ ಮೊದಲಲ್ಲ.  ಈ ಬಾರಿ ಬಾಲಿವುಡ್ ನಟರೊಬ್ಬರು ಕೌಟುಂಬಿಕ ಹಿಂಸೆ ಆರೋಪಕ್ಕೆ ತುತ್ತಾಗಿದ್ದು, ಪತಿ ವಿರುದ್ಧ ಪತ್ನಿಯೇ ಲೈಂಗಿಕ ದೌರ್ಜನ್ಯ, ಕೌಟುಂಬಿಕ ಹಿಂಸೆ ಆರೋಪ ಮಾಡಿದ್ದಾರೆ. ಆದರೆ ನಟ  ಬಂಧನಕ್ಕೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.

ಬಾಲಿವುಡ್ ನ ಖ್ಯಾತ ನಟ ನವಾಜುದ್ದೀನ್ ಸಿದ್ಧಕಿ,  ವಿರುದ್ಧ ಅವರ ಪತ್ನಿ ಆಲಿಯಾ ಸಿದ್ಧಕಿ, ಕೌಟುಂಬಿಕ ದೌರ್ಜನ್ಯ, ಲೈಂಗಿಕ ಕಿರುಕುಳದ ಆರೋಪ ಮಾಡಿದ್ದು, ನವಾಜುದ್ದೀನ್ ಸಿದ್ಧಕಿ ಹಾಗೂ ಅವರ ಸಹೋದರರು ಮತ್ತು ತಾಯಿ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ನವಾಜುದ್ದೀನ್ ಸಿದ್ಧಿಕಿ ಹಾಗೂ ಅವರ ಕುಟುಂಬಸ್ಥರ ವಿರುದ್ಧ ಎಫ್.ಆಯ್.ಆರ್ ದಾಖಲಾಗಿದ್ದು, ನವಾಜುದ್ಧೀನ್ ಸಿದ್ದಿಕಿ ಬಂಧನಕ್ಕೆ ಸಿದ್ಧತೆ ನಡೆದಿತ್ತು. ಆದರೆ ಇದನ್ನು ಪ್ರಶ್ನಿಸಿ ನವಾಜುದ್ದೀನ್ ಸಿದ್ಧಿಕಿ ಅಲಹಾಬಾದ್ ನ್ಯಾಯಾಲಯದ ಮೆಟ್ಟಿಲೇರಿದ್ದರು. ಹೀಗಾಗಿ ನ್ಯಾಯಾಲಯ ನವಾಜುದ್ಧೀನ್ ಸಿದ್ದಿಕಿ ಬಂಧನಕ್ಕೆ ತಡೆಯಾಜ್ಞೆ ನೀಡಿದೆ.

ನವಾಜುದ್ಧೀನ್ ಸಿದ್ಧಿಕಿ ಸಹೋದರ, ಮೀನಾಜುದ್ಧೀನ್ ಸಿದ್ಧಿಕಿ, ಫೈಜುದ್ಧೀನಿ ಸಿದ್ಧಿಕಿ, ಮೆಹರುನ್ನೀಸಾ ಸಿದ್ಧಿಕಿ, ಆಯಾಜುದ್ಧೀನಿ ಸಿದ್ಧಿಕಿ ವಿರುದ್ಧ ಆಲಿಯಾ ಸಿದ್ಧಿಕಿ ದೂರು ನೀಡಿದ್ದಾರೆ. ಈ ಪೈಕಿ ಮೀನಾಜುದ್ಧೀನ್ ಸಿದ್ಧಿಕಿ ಹೊರತು ಪಡಿಸಿ ಇನ್ನೆಲ್ಲರ ಬಂಧನಕ್ಕೆ ತಡೆಯಾಜ್ಞೆ ನೀಡಿದೆ.

ಮೀನಾಜುದ್ಧೀನ್ ವಿರುದ್ಧ ಪೋಕ್ಸೋ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಹಿನ್ನೆಲೆಯಲ್ಲಿ ಆತನ ಬಂಧನಕ್ಕೆ ನ್ಯಾಯಾಲಯ ಅನುಮತಿ ನೀಡಿದೆ. ನವಾಜುದ್ಧೀನ್ ಸಿದ್ಧಿಕಿಗೆ ಸಧ್ಯ ನ್ಯಾಯಾಲಯ ನೀಡಿರುವ ರಿಲೀಫ್ ತಾತ್ಕಾಲಿಕವಾಗಿದ್ದು, ಮುಂದಾದರೂ ಸಂಕಷ್ಟ ತಪ್ಪಿದ್ದಲ್ಲ.

ನವಾಜುದ್ಧೀನ್ ಪತ್ನಿ ಆಲಿಯಾ ಸಿದ್ಧಿಕಿ, ಮುಝುಪ್ಪರ್ ನಗರ ಪೊಲೀಸ್ ಠಾಣೆಯಲ್ಲಿ ನವಾಜುದ್ಧೀನ್ ಹಾಗೂ ಆತನ ಮೂವರು ಸಹೋದರರು ಹಾಗೂ ತಾಯಿ ವಿರುದ್ಧ ದೂರು ನೀಡಿದ್ದಾರೆ. ಎಫ್.ಆಯ್.ಆರ್ ನ ಒಂದೆಡೆ ಕೌಟುಂಬಿಕ್ ದೌರ್ಜನ್ಯ ಹಾಗೂ ಇನ್ನೊಂದೆಡೆ ಮಕ್ಕಳ ಮೇಲಿನ ದೌರ್ಜನ್ಯದ ಪ್ರಕರಣ ದಾಖಲಾಗಿದೆ.

RELATED ARTICLES

Most Popular